ಲಖನೌ: ರೈಲ್ವೆ ಮೂಲಸೌಕರ್ಯ ಸೇರಿದಂತೆ ದೇಶದ ಪ್ರಮುಖ ತಾಣಗಳ ಮೇಲೆ ದಾಳಿಗೆ ಯೋಜನೆ ರೂಪಿಸಿದ ಆರೋಪದಲ್ಲಿ ಶಂಕಿತ ಭಯೋತ್ಪಾದನಾ ಜಾಲದ ನಾಲ್ವರನ್ನು ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ಶುಕ್ರವಾರ ಬಂಧಿಸಿದೆ.

ಪಾಕಿಸ್ತಾನದ ಹ್ಯಾಂಡ್ಲರ್ಗಳ ಸೂಚನೆಯ ಮೇರೆಗೆ ಕಾರ್ಯಾಚರಿಸುತ್ತಿರುವ ಜಾಲದ ಸದಸ್ಯರನ್ನು ಗುಪ್ತಚರ ಮಾಹಿತಿಯ ಆಧಾರದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೀರಠ್ನ ನಿವಾಸಿಗಳಾದ ಸಾಕಿಬ್ ಅಲಿಯಾಸ್ ‘ಡೆವಿಲ್’ (25) ಹಾಗೂ ಅರ್ಬಾಬ್ (20), ಗೌತಮ ಬುದ್ಧ ನಗರದ ನಿವಾಸಿಗಳಾದ ವಿಕಾಸ್ ಗೆಹಲೋತ್ ಅಲಿಯಾಸ್ ರೌನಕ್ (27) ಮತ್ತು ಲೋಕೇಶ್ ಅಲಿಯಾಸ್ ಪಪ್ಲಾ ಪಂಡಿತ್ (19) ಬಂಧಿತರು.

ಸಾಕಿಬ್ ಈ ಜಾಲದ ಪ್ರಮುಖ ಸೂತ್ರಧಾರನಾಗಿದ್ದು, ಟೆಲಿಗ್ರಾಮ್, ಸಿಗ್ನಲ್ ಮತ್ತು ಇನ್ಸ್ಟಾಗ್ರಾಂ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳ ಮೂಲಕ ಪಾಕಿಸ್ತಾನದ ಹ್ಯಾಂಡ್ಲರ್ಗಳ ಜತೆ ಸಂಪರ್ಕದಲ್ಲಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳು ತಮ್ಮ ಸಹಚರರೊಂದಿಗೆ ಗಾಜಿಯಾಬಾದ್, ಅಲೀಗಢ ಮತ್ತು ಲಖನೌ ಸೇರಿದಂತೆ ವಿವಿಧ ನಗರಗಳಿಗೆ ಭೇಟಿ ನೀಡಿದ್ದರು ಮತ್ತು ದಾಳಿಯ ಸಂಭಾವ್ಯ ಗುರಿಗಳ ವಿಡಿಯೊಗಳು ಹಾಗೂ ಗೂಗಲ್ ಲೊಕೇಷನ್ ವಿವರಗಳನ್ನು ತಮ್ಮ ಹ್ಯಾಂಡ್ಲರ್ಗಳೊಂದಿಗೆ ಹಂಚಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.