ಚೆನ್ನೈ: ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಅಧ್ಯಕ್ಷ, ಚಿತ್ರನಟ ವಿಜಯ್ ಅವರು ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಗೆ 234 ಕ್ಷೇತ್ರಗಳ ಶಾಸಕ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ. ಇದೀಗ ಈ ಪಟ್ಟಿಯಲ್ಲಿರುವ ಒಂದು ಹೆಸರು ಇಡೀ ದೇಶದ ಗಮನ ಸೆಳೆದಿದೆ.

ಹೌದು, ವಿಜಯ್ ಅವರು ತಮ್ಮ ಮೊದಲ ಸಿನಿಮಾದಿಂದಲೂ ನೆರಳಿನಂತೆ ಜೊತೆಗಿದ್ದ ರಾಜೇಂದ್ರನ್ ಅವರ ಮಗ ಶಬರಿನಾಥನ್ ಅವರನ್ನು ವಿರುಗಂಬಕ್ಕಂ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸಿದ್ದಾರೆ. ಇದೇ ವೇಳೆ ವೇದಿಕೆಯಲ್ಲಿದ್ದ ಅಪ್ಪ–ಮಗ ಇಬ್ಬರೂ ಭಾವುಕರಾಗಿದ್ದಾರೆ. ಈ ಹೃದಯಸ್ಪರ್ಶಿ ಕ್ಷಣದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.

ರಾಜೇಂದ್ರನ್ ಮತ್ತು ಶಬರಿನಾಥನ್ ಇಬ್ಬರೂ ಭಾವುಕರಾದಾಗ, ವಿಜಯ್ ಅವರೇ ಖುದ್ದಾಗಿ ಕಣ್ಣೀರು ಒರೆಸಿ ಅಪ್ಪಿಕೊಂಡಿರುವ ದೃಶ್ಯ ಜನರ ಮನ ಗೆದ್ದಿದೆ. ರಾಜೇಂದ್ರನ್ ಅವರು ಮೊದಲಿನಿಂದಲೂ ವಿಜಯ್ ಅವರ ಕಾರು ಚಾಲಕರಾಗಿದ್ದರು. ಇತ್ತೀಚಿಗೆ ಆಪ್ತ ಸಹಾಯಕರಾಗಿ (ಪಿಎ) ನೇಮಕಗೊಂಡಿದ್ದಾರೆ.

‘ಒಬ್ಬ ಸಾಮಾನ್ಯ ವ್ಯಕ್ತಿಯಿಂದ ರಾಜಕಾರಣಿಯಾಗಿ ನನ್ನ ಪ್ರಯಾಣಕ್ಕೆ ಇದೊಂದು ಅದ್ಭುತ ಆರಂಭ’ ಎಂದು 30 ವರ್ಷದ ಆರ್. ಶಬರಿನಾಥನ್ ಹೇಳಿಕೊಂಡಿದ್ದಾರೆ.
.Tamil Nadu Election: ಡಿಎಂಕೆ ಭದ್ರಕೋಟೆಗೆ ನುಗ್ಗುವ ಧೈರ್ಯ ಮಾಡಿದ್ದೇಕೆ ವಿಜಯ್?.
ಎಂಜಿನಿಯರ್ ಆಗಬೇಕೆಂದು ಬಯಸಿದ್ದ ತಂದೆ...

‘ನನ್ನ ರಾಜಕೀಯ ಪ್ರವೇಶ ಅಷ್ಟು ಸುಲಭವಾಗಿರಲಿಲ್ಲ. ಎಲ್ಲರಂತೆಯೇ ನಮ್ಮ ತಂದೆ ಕೂಡ ನಾನು ಎಂಜಿನಿಯರ್ ಆಗಬೇಕೆಂದು ಬಯಸಿದ್ದರು. ಅದಕ್ಕಾಗಿ ಅವರು ಸಾಲ ಮಾಡಿ ನನಗೆ ಶಿಕ್ಷಣ ಕೊಡಿಸಿದ್ದರು’ ಎಂದು ಶಬರಿನಾಥನ್ ಹೇಳಿಕೊಂಡಿದ್ದಾರೆ.

2021ರಲ್ಲಿ ಕತಾರ್ನಲ್ಲಿ ಉದ್ಯೋಗ ಸಿಕ್ಕಾಗ ನನಗಿಂತಲೂ ನಮ್ಮ ತಂದೆಯೇ ಹೆಚ್ಚು ಸಂತೋಷಪಟ್ಟಿದ್ದರು. ಆದರೆ, ಆ ಕೆಲಸ ನನಗೆ ತೃಪ್ತಿ ನೀಡಿರಲಿಲ್ಲ. ನಮ್ಮ ತಲೈವರ್ (ವಿಜಯ್) ರಾಜಕೀಯ ಪಕ್ಷ ಕಟ್ಟಿದ್ದಾರೆ ಎಂದು ಕೇಳಿದಾಗ, ನನಗೆ ಮರಳಿ ಚೆನ್ನೈಗೆ ಬಂದು ಅವರ ಪ್ರಯಾಣದ ಭಾಗವಾಗಬೇಕೆನಿಸಿತ್ತು. ಆದರೆ, ತಂದೆ ಅದಕ್ಕೆ ಒಪ್ಪಿರಲಿಲ್ಲ ಎಂದು ಶಬರಿನಾಥನ್ ವಿವರಿಸಿದ್ದಾರೆ.

ವಿಜಯ್ ಬೆಂಬಲ...

ತಂದೆಯ ಮಾತನ್ನು ಮೀರುವಂತಿರಲಿಲ್ಲ. ಆದರೆ, ಮನಸ್ಸು ಚಡಪಡಿಸುತ್ತಿತ್ತು. 2024ರಲ್ಲಿ ಕತಾರ್ನಿಂದ ಚೆನ್ನೈಗೆ ವಾಪಸ್ ಬಂದಿದ್ದೆ. ನಮ್ಮ ತಂದೆಗೆ ತಿಳಿಯದಂತೆ ನೇರವಾಗಿ ವಿಜಯ್ ಅವರನ್ನೇ ಭೇಟಿಯಾಗಿ ರಾಜಕೀಯಕ್ಕೆ ಬರುವ ಹಂಬಲ ವ್ಯಕ್ತಪಡಿಸಿದ್ದೆ. ಇದಾದ ಬಳಿಕ ವಿಜಯ್ ಅವರು ತಂದೆ ಜತೆ ಮಾತನಾಡಿ ರಾಜಕೀಯ ಪ್ರವೇಶಕ್ಕೆ ಹಸಿರು ನಿಶಾನೆ ತೋರುವಂತೆ ಮಾಡಿದರು’ ಎಂದು ಶಬರಿನಾಥನ್ ಹೇಳಿದ್ದಾರೆ.

‘ಶಬರಿನಾಥನ್ ಅವರ ಉತ್ಸಾಹ ಮತ್ತು ಕಾರ್ಯವೈಖರಿ ಕಂಡು ವಿಜಯ್ ದೊಡ್ಡ ಜವಾಬ್ದಾರಿ ನೀಡಲು ಮುಂದಾಗಿದ್ದರು. ಮೊದಲು ಜಿಲ್ಲಾ ಕಾರ್ಯದರ್ಶಿಯಾಗಿದ್ದ ಶಬರಿನಾಥನ್, ಈಗ ಎಂಎಲ್ಎ ಅಭ್ಯರ್ಥಿಯಾಗಿದ್ದಾರೆ’ ಎಂದು ಟಿವಿಕೆ ನಾಯಕ ದಿಲೀಪ್ ಕುಮಾರ್ ಹೇಳಿದ್ದಾರೆ.

ಜನರ ಸಮಸ್ಯೆಗಳಿಗೆ ಆದ್ಯತೆ..

ನಾನು ವಿಜಯ್ ಅವರನ್ನು ಒಂದು ವರ್ಷದ ಮಗುವಾಗಿದ್ದಾಗಿನಿಂದಲೂ ಬಲ್ಲೆ. ತಂದೆಯ ಜೊತೆ ಹಲವಾರು ಬಾರಿ ಶೂಟಿಂಗ್ ಸ್ಪಾಟ್ಗಳಿಗೆ ಹೋಗಿದ್ದೇನೆ. ಹಾಗಾಗಿ ಇತರ ಅಭಿಮಾನಿಗಳಿಗಿಂತ ನಾನು ಅವರನ್ನು ಹತ್ತಿರದಿಂದ ನೋಡಿದ್ದೇನೆ ಎಂದು ಶಬರಿನಾಥನ್ ಹೇಳುತ್ತಾರೆ.

ತಮ್ಮ ಕ್ಷೇತ್ರದ ಬಗ್ಗೆ ಸ್ಪಷ್ಟ ಗುರಿ ಹೊಂದಿರುವ ಶಬರಿನಾಥನ್, ವಿರುಗಂಬಕ್ಕಂನಲ್ಲಿ ಮದ್ಯದ ಅಂಗಡಿಗಳ ನಿಯಂತ್ರಣ, ಸಾರಿಗೆ ಸೌಲಭ್ಯ ಸೇರಿದಂತೆ ತಕ್ಷಣವೇ ಬಗೆಹರಿಸಬೇಕಾದ 22 ಸಮಸ್ಯೆಗಳನ್ನು ಗುರುತಿಸಿದ್ದಾರೆ.

‘ವಿರುಗಂಬಕ್ಕಂ ನಾನು ಬೆಳೆದ ಊರು. ಇಲ್ಲಿನ ಸಮಸ್ಯೆಗಳು ನನಗೆ ಚೆನ್ನಾಗಿ ಗೊತ್ತು. ಎಂಎಲ್ಎ ಆಗುವುದು ದೊಡ್ಡ ಜವಾಬ್ದಾರಿ. ನನ್ನ ಪ್ರಯತ್ನವನ್ನು ನಾನು ಮಾಡುತ್ತೇನೆ’ ಎಂದು ಶಬರಿನಾಥನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.