ಮಲಪ್ಪುರಂ: ಹೋಟೆಲ್ವೊಂದರ ಪ್ರಚಾರಕ್ಕಾಗಿ ಮಾಂಸಾಹಾರಿ ಖಾದ್ಯದ ಜೊತೆಗೆ ಶ್ರೀಕೃಷ್ಣನ ಚಿತ್ರವನ್ನೊಳಗೊಂಡ ‘ವಿಷು’ ಹಬ್ಬದ ಪೋಸ್ಟರ್ ಹಂಚಿಕೊಂಡ ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
.ಜಾಗತಿಕ ಗಮನ ಸೆಳೆದ ಕೇರಳ, ಅಸ್ಸಾಂ, ಪುದುಚೆರಿ ಚುನಾವಣೆ: ಚುನಾವಣಾ ಆಯೋಗ.
ವಲಂಬೂರು ಮೂಲದ ಹೋಟೆಲ್ ಒಂದು ‘ಕುಝಿ ಮಂದಿ’ ಎನ್ನುವ ಅರೇಬಿಯನ್ ಮಾಂಸಾಹಾರಿ ಖಾದ್ಯದ ಜೊತೆಗೆ ಶ್ರೀಕೃಷ್ಣನ ಚಿತ್ರವನ್ನು ಪ್ರಕಟಿಸಿತ್ತು.

ಶನಿವಾರ ವಿಷಯ ಗೊತ್ತಾಗಿದ್ದು, ಕೂಡಲೇ ‘ಯಮಾಮ ಶವಾಯ’ ಹೋಟೆಲ್ನ ಮಾಲೀಕರು ಮತ್ತು ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡುವವರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಅವರನ್ನು ಮಂಕಡ ಪೊಲೀಸ್ ಠಾಣೆಗೆ ಕರೆಸಿ, ಬಂಧಿಸಲಾಯಿತು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
.ಕಾಸರಗೋಡಿನಲ್ಲಿ ಕನ್ನಡ ಬಳಕೆ: ಪರಿಶೀಲನೆ ನಡೆಸಿ ಎಂದ ಕೇರಳ ಹೈಕೋರ್ಟ್.
ಬಂಧಿತರನ್ನು ಹೋಟೆಲ್ ಮಾಲೀಕರಾದ ಮುಸ್ತಫಾ ಕುಂದುವಾಯಿಲ್ ಮತ್ತು ಶಾಹುಲ್ ಹಮೀದ್ ಹಾಗೂ ಸಾಮಾಜಿಕ ಜಾಲತಾಣ ಖಾತೆ ನಿರ್ವಹಿಸುತ್ತಿದ್ದ ಮುಹಮ್ಮದ್ ಶಾಹಿನ್ ಎಂದು ಗುರುತಿಸಲಾಗಿದೆ.

ಏಪ್ರಿಲ್ 14 ರಂದು ಹಂಚಿಕೊಳ್ಳಲಾದ ಈ ವಿವಾದಾತ್ಮಕ ಪೋಸ್ಟರ್ನಲ್ಲಿ, ಶ್ರೀಕೃಷ್ಣನ ಚಿತ್ರದೊಂದಿಗೆ 'ಕುಝಿ ಮಂದಿ' ಖಾದ್ಯದ ಚಿತ್ರವಿತ್ತು. ಇದಲ್ಲೆ ಆಕ್ಷೇಪ ವ್ಯಕ್ತವಾಗಿದ್ದು, ಏಪ್ರಿಲ್ 17 ರಂದು ಪೋಸ್ಟರ್ ಅನ್ನು ಅಳಿಸಿ ಹಾಕಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 192 (ದಂಗೆ ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ ನೀಡುವುದು) ಅಡಿಯಲ್ಲಿ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದರು.
.ಪ್ರಧಾನಿ ಮೋದಿ, ಕೇರಳ ಸಿಎಂ ಪಿಣರಾಯಿ ವಿಜಯನ್ ಅಹಂಕಾರಿಗಳು: ರಾಹುಲ್ ಆರೋಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.