ನವದೆಹಲಿ: ಕೇರಳಂನಲ್ಲಿ 10 ವರ್ಷಗಳ ನಂತರ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರಕ್ಕೆ ಮರಳಿದೆ. 140 ಸದಸ್ಯ ಬಲದ ವಿಧಾನಸಭೆಯಲ್ಲಿ 102 ಸ್ಥಾನಗಳಲ್ಲಿ ಐತಿಹಾಸಿಕ ಗೆಲುವು ಸಾಧಿಸಿದೆ. ಅತ್ತ ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಮತ್ತೊಮ್ಮೆ ಕಳಪೆ ಸಾಧನೆ ಮಾಡಿದೆ. ಹಾಗಾಗಿ ವಿಧಾನಸಭಾ ಚುನಾವಣಾ ಫಲಿತಾಂಶ ದೇಶದ ಹಳೆಯ ಪಕ್ಷಕ್ಕೆ ಮಿಶ್ರಫಲವನ್ನು ನೀಡಿವೆ.

2014ರ ಲೋಕಸಭಾ ಚುನಾವಣೆಯ ಬಳಿಕ ಹಿನ್ನಡೆ ಅನುಭವಿಸಿದ ಕಾಂಗ್ರೆಸ್, ಕೇರಳದಲ್ಲಿ ಸಿಎಂ ಪಿಣರಾಯಿ ವಿಜಯನ್ ಅವರ 10 ವರ್ಷಗಳ ಆಡಳಿತಕ್ಕೆ ಕೊನೆ ಹಾಡುವಲ್ಲಿ ಯಶಸ್ವಿಯಾಯಿತು. ಇದರೊಂದಿಗೆ ಹಿಮಾಚಲ ಪ್ರದೇಶದೊಂದಿಗೆ ಕಾಂಗ್ರೆಸ್ ಈಗ ದಕ್ಷಿಣ ಭಾರತದ ಮೂರು ರಾಜ್ಯಗಳಾದ ಕರ್ನಾಟಕ, ತೆಲಂಗಾಣ ಮತ್ತು ಕೇರಳಂನಲ್ಲಿ ಅಧಿಕಾರ ಪಡೆದಿದೆ.

ಮಹಾರಾಷ್ಟ್ರ, ದೆಹಲಿ, ಹರಿಯಾಣ ಮತ್ತು ಬಿಹಾರ ಚುನಾವಣೆಗಳಲ್ಲಿ ಸತತ ಸೋಲಿನ ಬಳಿಕ ಕೇರಳದಲ್ಲಿ ದೊರೆತ ಗೆಲುವು ಕಾಂಗ್ರೆಸ್ಗೆ ಜೀವಸೆಲೆಯಾಗಿ ಪರಿಣಮಿಸಿದೆ. ಒಂದು ವೇಳೆ ಕೇರಳದಲ್ಲೂ ಸೋತಿದ್ದರೆ, ರಾಷ್ಟ್ರಮಟ್ಟದಲ್ಲಿ ಬಿಜೆಪಿ ವಿರೋಧಿ ಮೈತ್ರಿಕೂಟವನ್ನು ಮುನ್ನಡೆಸುವ ಅದರ ಸಾಮರ್ಥ್ಯದ ಬಗ್ಗೆ ಮತ್ತೆ ಪ್ರಶ್ನೆಗಳು ಏಳುವಂತೆ ಮಾಡುತ್ತಿತ್ತು.

ಆದರೆ ದೇಶೀಯ ಮಟ್ಟದಲ್ಲಿ ಟಿಎಂಸಿ, ಡಿಎಂಕೆ ಹಾಗೂ ಎಡಪಕ್ಷಗಳ ಪ್ರಾಬಲ್ಯ ಕಡಿಮೆಯಾಗಿರುವುದರಿಂದ, 'ಇಂಡಿಯಾ' ಮೈತ್ರಿಕೂಟದಲ್ಲಿ ಕಾಂಗ್ರೆಸ್ಗೆ ಹೆಚ್ಚಿನ ಮಹತ್ವ ದೊರೆಯಲಿದೆ.
.Kerala Results: ಯುಡಿಎಫ್ ಅಭೂತಪೂರ್ವ ಸಾಧನೆ, ಯಾರಾಗಲಿದ್ದಾರೆ ಕೇರಳ ಸಿಎಂ?.Kerala Results: ಕೇರಳದಲ್ಲಿ ನೂತನ ಸಿಎಂ ಆಯ್ಕೆ, ಗರಿಗೆದರಿದ ಚಟುವಟಿಕೆ.
ಕೇರಳದಲ್ಲಿ ಎಡಪಕ್ಷಗಳ ವಿರುದ್ಧದ ಆಡಳಿತ ವಿರೋಧಿ ಅಲೆಯನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾದರೂ ಅತ್ತ ಅಸ್ಸಾಂನಲ್ಲಿ ಬಿಜೆಪಿಯ ಆಡಳಿತ ಪರ ಅಲೆಯನ್ನು ಎದುರಿಸವಲ್ಲಿ ವಿಫಲವಾಯಿತು. ಅಲ್ಲಿ ಕೇಸರಿ ಪಕ್ಷವು ಮೂರನೇ ಎರಡರಷ್ಟೇ ಬಹುಮತವನ್ನು ಗಳಿಸಿತು.

ಅಸ್ಸಾಂನಲ್ಲಿ ಕಾಂಗ್ರೆಸ್ ಸುಮಾರು ಶೇ 29.5ರಷ್ಟು ಮತಗಳನ್ನು ಗಳಿಸಿದೆ. ಕೇರಳದಲ್ಲಿ ಶೇ 28.8, ಪಶ್ಚಿಮ ಬಂಗಾಳದಲ್ಲಿ ಶೇ 3.13 ಮತ್ತು ತಮಿಳುನಾಡಿನಲ್ಲಿ ಶೇ 3.38ರಷ್ಟು ಮತ ಗಳಿಸಿದೆ.

ಚುನಾವಣಾ ಫಲಿತಾಂಶವು ಮಿಶ್ರ ಫಲಿತಾಂಶವನ್ನು ನೀಡಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ಆದಾಗ್ಯೂ, 'ನಮ್ಮದ್ದು ಸೈದ್ದಾಂತಿಕ ಹೋರಾಟ ಎಂಬುದನ್ನು ನೆನಪಿನಲ್ಲಿಡಬೇಕು. ಹಾಗಾಗಿ ತಾಳ್ಮೆ, ಪರಿಶ್ರಮ ಹಾಗೂ ಅಚಲವಾದ ಸಂಕಲ್ಪ ಬೇಕಾಗುತ್ತದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಲು ಸದಾ ಬದ್ಧರಾಗಿರುತ್ತೇವೆ' ಎಂದಿದ್ದಾರೆ.

ಕೇರಳವನ್ನು ಹೊರತುಪಡಿಸಿ ಇತರೆ ರಾಜ್ಯಗಳಲ್ಲಿ ನಿರೀಕ್ಷಿತ ಮಟ್ಟದ ನಿರ್ವಹಣೆ ಕಂಡುಬಂದಿಲ್ಲ. ಹಾಗಾಗಿ ಚುನಾವಣಾ ಫಲಿತಾಂಶಗಳನ್ನು ಅವಲೋಕಿಸಲಿದ್ದೇವೆ ಎಂದು ಜೈರಾಮ್ ರಮೇಶ್ ಪ್ರತಿಕ್ರಿಯಿಸಿದ್ದಾರೆ.

ಕೇರಳದ ಗೆಲುವು ಕಾಂಗ್ರೆಸ್ ಪಾಲಿಗೆ ಭರವಸೆಯ ಆಶಾಕಿರಣವಾಗಿದೆ. ಇದು ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಪಕ್ಷವು ತಲಮಟ್ಟದಲ್ಲಿ ಸಂಘಟನೆಯನ್ನು ಹೆಚ್ಚು ಬಲಪಡಿಸಿಕೊಳ್ಳಬೇಕು ಎಂಬುದರ ಸಂಕೇತವಾಗಿದೆ. ಹಾಗಾಗಿ ಉತ್ತಮವಾದ ರಣನೀತಿ ರೂಪಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.