ಮುಂಬೈ: ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯಲ್ಲಿ ಹುಲಿ ದಾಳಿಯಿಂದ ನಾಲ್ವರು ಮಹಿಳೆಯರು ಶುಕ್ರವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಒಂದೇ ಹುಲಿಯು ಒಮ್ಮೆಗೆ ನಾಲ್ವರನ್ನು ಕೊಂದಿದೆ ಎಂದು ಶಂಕಿಸಲಾಗಿದೆ.

ವಿದರ್ಭದಲ್ಲಿ ಬೇಸಿಗೆಯ ಬೇಗೆ ತೀವ್ರವಾಗಿದೆ. ಇಂಥ ದುರ್ಬರ ಸ್ಥಿತಿಯಲ್ಲೂ ಜನರು ಜೀವನೋಪಾಯಕ್ಕಾಗಿ ಕಾಡಿಗೆ ಹೋದ ಸಂದರ್ಭ ಈ ದುರಂತ ನಡೆದಿದೆ ಎನ್ನಲಾಗಿದೆ.

ಕಾಡಿನಲ್ಲಿ ಸಿಗುವ ತೆಂಡು ಎಲೆಗಳನ್ನು ಸಂಗ್ರಹಿಸಲಿಕ್ಕಾಗಿಯೇ ನಸುಕಿನಲ್ಲೇ 13 ಮಹಿಳೆಯರ ಗುಂಪು ಅರಣ್ಯಕ್ಕೆ ತೆರಳಿತ್ತು. ಪೊದೆಯಲ್ಲಿ ಅಡಗಿದ್ದ ಹುಲಿ ಏಕಾಏಕಿ ದಾಳಿ ನಡೆಸಿದೆ. ಗರ್ಜನೆ ಕೇಳುತ್ತಿದ್ದಂತೆ ಹಲವರು ದಿಕ್ಕಾಪಾಲಾಗಿ ಓಡಿಹೋಗಿದ್ದಾರೆ. ತಪ್ಪಿಸಿಕೊಳ್ಳಲು ಸಾಧ್ಯ ಆಗದ ನಾಲ್ವರು ವ್ಯಾಘ್ರನ ಬಾಯಿಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಾವ್ದುಬಾಯಿ ದಾದಾಜಿ ಮೊಹರ್ಲೆ (45), ಅನುಬಾಯಿ ದಾದಾಜಿ ಮೊಹರ್ಲೆ (46), ಸುನೀತಾ ಕೌಶಿಕ್ ಮೊಹರ್ಲೆ (33) ಹಾಗೂ ಸಂಗೀತಾ ಸಂತೋಷ್ ಚೌಧರಿ (36) ಮೃತರು. ಮೃತರಲ್ಲಿ ಮೂವರು ಒಂದೇ ಕುಟುಂಬದವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.