ತಿರುಪತಿ(ಆಂಧ್ರಪ್ರದೇಶ): ಇಲ್ಲಿನ ಶ್ರೀ ವೆಂಕಟೇಶ್ವರ ದೇವಸ್ಥಾನದ ಹುಂಡಿಯಲ್ಲಿ ಜುಲೈನಲ್ಲಿ ₹125 ಕೋಟಿ ಕಾಣಿಕೆ ಸಂಗ್ರಹವಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಕಾರ್ಯನಿರ್ವಾಹಕ ಅಧಿಕಾರಿ ಶ್ಯಾಮಲ ರಾವ್ ಶುಕ್ರವಾರ ಹೇಳಿದ್ದಾರೆ.
‘ಜುಲೈನಲ್ಲಿ 22 ಲಕ್ಷ ಯಾತ್ರಾರ್ಥಿಗಳು ದೇಗುಲಕ್ಕೆ ಭೇಟಿ ನೀಡಿದ್ದು, 8.6 ಲಕ್ಷ ಭಕ್ತರು ಮುಡಿ ಕೊಡುವ ಹರಕೆ ತೀರಿಸಿದ್ದಾರೆ. ದೇವಸ್ಥಾನವು ಕೋಟಿಗೂ ಅಧಿಕ ಲಡ್ಡುಗಳನ್ನು ಮಾರಾಟ ಮಾಡಿದೆ’ ಎಂದೂ ಹೇಳಿದ್ದಾರೆ.