ಕೋಲ್ಕತ್ತ: ಪಶ್ಚಿಮ ಬಂಗಾಳದ ಎರಡನೇ ಹಂತದ ಮತದಾನಕ್ಕೆ ಒಂದು ದಿನ ಬಾಕಿ ಇದೆ. ಈ ನಡುವೆ ಚುನಾವಣಾ ಆಯೋಗದಿಂದ ನಿಯೋಜನೆಗೊಂಡಿರುವ ಉತ್ತರ ಪ್ರದೇಶ ಕೇಡರ್ನ ಐಪಿಎಸ್ ಅಧಿಕಾರಿ ಅಜಯ್ ಪಾಲ್ ಶರ್ಮಾ ವಿರುದ್ಧ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕರು ವಾಗ್ದಾಳಿ ನಡೆಸಿದ್ದಾರೆ.

ದಕ್ಷಿಣ 24 ಪರಗಣ ಜಿಲ್ಲೆಯ ಫಾಲ್ಟಾ ವಿಧಾನಸಭಾ ಕ್ಷೇತ್ರದ ಟಿಎಂಸಿ ಅಭ್ಯರ್ಥಿ ಜಹಾಂಗೀರ್ ಖಾನ್ ಅವರ ಬೆಂಬಲಿಗರು ಮತದಾರರ ಗುರುತಿನ ಚೀಟಿಗಳನ್ನು ಸಂಗ್ರಹಿಸುತ್ತಿದ್ದಾರೆ. ಜನರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂಬ ದೂರು ಚುನಾವಣಾ ಆಯೋಗಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ, ಚುನಾವಣಾ ವೀಕ್ಷಕರಾಗಿ ನಿಯೋಜನೆಗೊಂಡಿರುವ ಐಪಿಎಸ್ ಅಧಿಕಾರಿ ಅಜಯ್ ಪಾಲ್ ಶರ್ಮಾ ಅವರು ಸೋಮವಾರ ತಡರಾತ್ರಿ ಅಭ್ಯರ್ಥಿಯ ನಿವಾಸ ಹಾಗೂ ಕಚೇರಿಗೆ ಭೇಟಿ ನೀಡಿ ಎಚ್ಚರಿಕೆ ನೀಡಿದ್ದರು.
.ಮಹಾರಾಷ್ಟ್ರದಲ್ಲಿ ಪಹಲ್ಗಾಮ್ ಮಾದರಿ ದಾಳಿ: ಧರ್ಮ ಕೇಳಿ ಭದ್ರತಾ ಸಿಬ್ಬಂದಿಗೆ ಇರಿತ.ಮೇ 15ಕ್ಕೆ ಡಿಕೆಶಿ ಸಿಎಂ ಆಗೋದು ಫಿಕ್ಸ್–ಇಕ್ಬಾಲ್ ಹುಸೇನ್.
ಸಿನಿಮಾ ಶೈಲಿಯಲ್ಲಿ ಸವಾಲು

ಉತ್ತರ ಪ್ರದೇಶದಲ್ಲಿ 'ಸಿಂಗಂ' ಎಂದೇ ಖ್ಯಾತರಾಗಿರುವ ಅಜಯ್ ಪಾಲ್ ಶರ್ಮಾ ಅವರ ಭೇಟಿಗೆ ಆಕ್ರೋಶ ವ್ಯಕ್ತಪಡಿಸಿದ ಟಿಎಂಸಿ ಅಭ್ಯರ್ಥಿ ಜಹಾಂಗೀರ್ ಖಾನ್, ಸಿನಿಮಾ ಶೈಲಿಯಲ್ಲಿಯೇ ತಿರುಗೇಟು ನೀಡಿದ್ದಾರೆ.

'ಇದು ಬಂಗಾಳ. ಅವರು ಒಂದು ವೇಳೆ 'ಸಿಂಗಂ' ಆಗಿದ್ದರೆ, ನಾನು 'ಪುಷ್ಪ'. ಉತ್ತರ ಪ್ರದೇಶದಿಂದ ಬಂದಿರುವ ಬಿಜೆಪಿ ನೇಮಿತ ಪೊಲೀಸ್ ಅಧಿಕಾರಿಗಳ ಯಾವುದೇ ಬೆದರಿಕೆ ಇಲ್ಲಿ ನಡೆಯುವುದಿಲ್ಲ' ಎಂದು ಅವರು ಗುಡುಗಿದ್ದಾರೆ.

ಟಿಎಂಸಿ ನಾಯಕರ ಆಕ್ರೋಶ

ಈ ಬೆಳವಣಿಗೆಯನ್ನು ಪಶ್ಚಿಮ ಬಂಗಾಳದ ಸಚಿವರು ಮತ್ತು ಹಿರಿಯ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.

ಮಾಧ್ಯಮಗಳು ಇವರನ್ನು 'ಎನ್ಕೌಂಟರ್ ಸ್ಪೆಷಲಿಸ್ಟ್' ಎನ್ನುತ್ತವೆ. ರಾತ್ರಿ ವೇಳೆ ಮನೆಗೆ ನುಗ್ಗಿ ಬೆದರಿಕೆ ಹಾಕಲು ಅವರಿಗೆ ಅಧಿಕಾರ ಕೊಟ್ಟವರು ಯಾರು? ಶಾಂತಿ ಕದಡಲು ಇವರನ್ನು ಕರೆತರಲಾಗಿದೆಯೇ? ಎಂದು ಚಂದ್ರೀಮಾ ಭಟ್ಟಾಚಾರ್ಯ ಪ್ರಶ್ನಿಸಿದ್ದಾರೆ.

ವೀಕ್ಷಕರು ತಟಸ್ಥವಾಗಿರಬೇಕು. ಸಂವಿಧಾನದ ಮಿತಿ ಮೀರಿ ಒಂದು ಪಕ್ಷವನ್ನು ಗುರಿಪಡಿಸಿದರೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಅರೂಪ್ ಬಿಸ್ವಾಸ್ ಎಚ್ಚರಿಸಿದ್ದಾರೆ.
.8 ಸಾವಿರ ಕಾನ್ಸ್ಟೆಬಲ್ ನೇಮಕಕ್ಕೆ ವಾರದಲ್ಲಿ ಅಧಿಸೂಚನೆ–ಸಚಿವ ಡಾ.ಜಿ.ಪರಮೇಶ್ವರ.ನನಗೂ ಸಚಿವ ಸ್ಥಾನ ಬೇಕು–ಶಾಸಕ ರಾಘವೇಂದ್ರ ಹಿಟ್ನಾಳ.
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಅಜಯ್ ಪಾಲ್ ಶರ್ಮಾ ಪಬ್ವೊಂದರಲ್ಲಿ ನೃತ್ಯ ಮಾಡುತ್ತಿರುವ ಹಳೆಯ ವಿಡಿಯೋವನ್ನು ಹಂಚಿಕೊಂಡು, ನಿಮ್ಮ ಪೊಲೀಸ್ ಕೌಶಲಗಳು ನಿಮ್ಮ ನೃತ್ಯಕ್ಕಿಂತ ಉತ್ತಮವಾಗಿರಲಿ ಎಂದು ಆಶಿಸುವುದಾಗಿ ವ್ಯಂಗ್ಯವಾಡಿದ್ದಾರೆ.

ಮತದಾನದ ವೇಳೆ ಯಾವುದೇ ಅಕ್ರಮ ನಡೆಯದಂತೆ ತಡೆಯಲು ಮತ್ತು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಅಜಯ್ ಪಾಲ್ ಶರ್ಮಾ ಸೇರಿದಂತೆ 95 ವೀಕ್ಷಕರನ್ನು ಆಯೋಗ ನಿಯೋಜಿಸಿದೆ. ಮತದಾರರಿಗೆ ಬೆದರಿಕೆ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.
.ದೆಹಲಿಯ ಜಾಮಿಯಾ ವಿವಿಯಲ್ಲಿ RSS ಕಾರ್ಯಕ್ರಮ: ವಿದ್ಯಾರ್ಥಿಗಳ ಪ್ರತಿಭಟನೆ.ಮಚ್ಚು ಬೇಡ… ಮಾತೇ ಸಾಕು; ಮಚ್ ಲಕ್ಷ್ಮೀ ರೀಷ್ಮಾ ನಾಣಯ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.