ಕೋಲ್ಕತ್ತ: ಹೂಗ್ಲಿ ನದಿಯಲ್ಲಿ ದೋಣಿ ವಿಹಾರ ನಡೆಸಿ, ಬಂಗಾಳದ ಬೀದಿ ಬದಿಯ ಜನಪ್ರಿಯ ತಿನಿಸು ‘ಜಾಲ್ಮುರಿ’ ಸವಿದಿರುವ ಪ್ರಧಾನಿ ಅವರನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ), ಅಲ್ಲಿನ ‘ಮಾ ಕ್ಯಾಂಟೀನ್’ಗೆ ಐದು ರೂಪಾಯಿಯ ಊಟ ಸವಿಯಲು ಆಹ್ವಾನಿಸಿದೆ.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟಿಎಂಸಿ ವಕ್ತಾರ ಕುನಾಲ್ ಘೋಷ್, ಪ್ರಧಾನಿಯನ್ನು ಮಾ ಕ್ಯಾಂಟೀನ್ಗೆ ಊಟಕ್ಕೆ ಆಹ್ವಾನಿಸಿದರು.

‘ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ಪ್ರಧಾನಿ, ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಬಂಗಾಳದಲ್ಲಿ ಹೇಗೆ ಕೆಲಸ ಮಾಡುತ್ತಿದೆ ಎನ್ನುವುದರ ವಾಸ್ತವ ಅನುಭವ ಪಡೆಯಬೇಕು. ಅದಕ್ಕಾಗಿ ನಾವು ಅವರನ್ನು‘ಮಾ ಕ್ಯಾಂಟೀನ್‘ಗೆ ಊಟಕ್ಕೆ ಆಹ್ವಾನಿಸುತ್ತಿದ್ದೇವೆ’ ಎಂದರು.

‘ಪ್ರಧಾನಿ ಅವರೇ, ನಿಮಗೆ ಮಾ ಕ್ಯಾಂಟೀನ್ನಲ್ಲಿ ಮಧ್ಯಾಹ್ನ ₹5ಕ್ಕೆ ಅನ್ನ, ಬೇಳೆ, ತರಕಾರಿಯೊಂದಿಗೆ ಸ್ವಾದಿಷ್ಟ ಊಟ ಸಿಗುತ್ತದೆ. ನಿಮ್ಮೊಂದಿಗೆ ಇನ್ನೊಬ್ಬರಿದ್ದರೆ ₹10ಕ್ಕೆ ಇಬ್ಬರಿಗೂ ಊಟ ಸಿಗುತ್ತದೆ’ ಎಂದು ರಾಜ್ಯಸಭೆಯ ಮಾಜಿ ಸಂಸದರೂ ಆಗಿರುವ ಕುನಾಲ್ ಘೋಷ್ ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು ಬಂಗಾಳದ ಬೀದಿ ಬದಿಯ ಅಂಗಡಿಯಿಂದ ‘ಜಾಲ್ಮುರಿ’ ರುಚಿ ನೋಡಿದ್ದಾರೆ. ಈ ಅಂಗಡಿ ಇಟ್ಟುಕೊಳ್ಳಲು ವ್ಯಾಪಾರಿಗೆ ನೆರವು ನೀಡಿದ್ದು ಮಮತಾ ಬ್ಯಾನರ್ಜಿ ಸರ್ಕಾರ ಎನ್ನುವುದು ನಿಮಗೆ ನೆನಪಿರಲಿ. ಹೂಗ್ಲಿ ನದಿಯ ನೀರು ಸ್ವಚ್ಛವಾಗಿದೆ ಹಾಗಾಗಿ ಮೋದಿ ಅವರು ಇಲ್ಲಿ ದೋಣಿ ವಿಹಾರ ನಡೆಸಿ ಛಾಯಾಚಿತ್ರಕ್ಕೆ ಪೋಸ್ ನೀಡಿದ್ದಾರೆ. ಆದರೆ, ದೆಹಲಿಯ ಯಮುನಾ ನದಿಯಲ್ಲಿ ನೀವು ಇದನ್ನು ಊಹಿಸಿಕೊಳ್ಳಲೂ ಆಗುವುದಿಲ್ಲ, ಅಷ್ಟೊಂದು ಮಾಲಿನ್ಯ ತುಂಬಿದೆ’ ಎಂದು ಅವರು ಕುಟುಕಿದ್ದಾರೆ.

ಬಡವರು, ದಿನಗೂಲಿ ಕಾರ್ಮಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಶ್ಚಿಮ ಬಂಗಾಳ ಸರ್ಕಾರ 2021ರಲ್ಲಿ ಮಾ ಕ್ಯಾಂಟೀನ್ ಆರಂಭಿಸಿದ್ದು, ₹5ಕ್ಕೆ ಊಟ, ತಿಂಡಿ ಲಭಿಸುತ್ತದೆ.

‘ಬಂಗಾಳದ ಜನರು ಸಹಿಸುವುದಿಲ್ಲ’ ‘ಪ್ರಧಾನಿ ಪಶ್ಚಿಮ ಬಂಗಾಳಕ್ಕೆ ಬಂದಾಗಲೆಲ್ಲ ‘ನುಸುಳುಕೋರರ’ ಸಮಸ್ಯೆ ಪ್ರಸ್ತಾಪಿಸುತ್ತಾರೆ. ಆ ಮೂಲಕ ಅಜಾಗರೂಕತೆಯಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನೇ ಟೀಕಿಸುತ್ತಿದ್ದಾರೆ. ಯಾಕೆಂದರೆ ಶಾ ಜವಾಬ್ದಾರಿಯಲ್ಲಿ ಗಡಿ ಭದ್ರತೆಯೂ ಸೇರಿದೆ’ ಎಂದು ಕುನಾಲ್ ಘೋಷ್ ಹೇಳಿದರು. ಪೌರತ್ವ ಸಾಬೀತುಪಡಿಸಲು ಸಾಧ್ಯವಾಗದ ಕಾರಣ ನುಸುಳುಕೋರರ ಹೆಸರಿನಲ್ಲಿ ಬಿಜೆಪಿ ಸಾವಿರಾರು ಬಂಗಾಳಿ ಹಿಂದೂಗಳನ್ನು ಬಂಧಿಸಿದೆ. ಅಸ್ಸಾಂ ಮಾದರಿಯಲ್ಲಿ ಬಂಗಾಳದಲ್ಲೂ ಬಂಧನ ಶಿಬಿರಗಳನ್ನು ತೆರೆಯಲು ಹೊರಟಿದೆ. ಇದನ್ನು ಬಂಗಾಳದ ಜನತೆ ಸಹಿಸುವುದಿಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.