ಕೋಲ್ಕತ್ತ: ಬಹುಪಾಲು ಮಂದಿ ಗೈರಾಗಿದ್ದರಿಂದ ಹೊಸದಾಗಿ ಚುನಾಯಿತರಾದ ಟಿಎಂಸಿ ಶಾಸಕರ ಸಭೆ ರದ್ದು ಮಾಡಲಾಗಿದೆ. ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಅಧ್ಯಕ್ಷತೆಯಲ್ಲಿ ನಡೆಯಬೇಕಿದ್ದ ಈ ಸಭೆಗೆ ಒಟ್ಟು 80 ಶಾಸಕರು ಭಾಗಿಯಾಗಬೇಕಿತ್ತು. ಆದರೆ ಸುಮಾರು ಮುಕ್ಕಾಲು ಭಾಗದಷ್ಟು ಶಾಸಕರು ಗೈರಾಗಿದ್ದರಿಂದ ಸಭೆಯನ್ನು ರದ್ದು ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
.ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಮೇಲೆ ಹಲ್ಲೆ: ನಾಲ್ವರ ಬಂಧನ.
ಶನಿವಾರ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಮೇಲಿನ ದಾಳಿ ಮತ್ತು ಭಾನುವಾರ ಪಕ್ಷದ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರ ಮೇಲೆ ನಡೆದಿದೆ ಎನ್ನಲಾದ ಹಲ್ಲೆಯ ನಂತರ ನಿರ್ಮಾಣವಾದ ಪರಿಸ್ಥಿತಿಯಿಂದಾಗಿ ಬಹುಪಾಲು ಶಾಸಕರು ಗೈರಾಗಿದ್ದಾರೆ ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ತಿಳಿಸಿದ್ದಾರೆ.

ಸಭೆ ಪೂರ್ವನಿರ್ಧರಿತವಾಗಿತ್ತು. ಆದರೆ, ನಮ್ಮ ನಾಯಕರ ಮೇಲೆ ದಾಳಿಯಾಗಿದ್ದರಿಂದ ನಮ್ಮ ಶಾಸಕರು ತಳಮಟ್ಟದಲ್ಲಿ ಪ್ರತಿಭಟನಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಇದರ ಬೆನ್ನಲ್ಲೇ ನಮ್ಮ ಕಾರ್ಯಕರ್ತರ ಮೇಲೆ ತೀವ್ರ ಪೊಲೀಸ್ ಕ್ರಮ ಜರುಗಿಸಲಾಗಿದೆ. ಬಂಧಿತರಾಗಿರುವ ನಮ್ಮ ಕಾರ್ಯಕರ್ತರಿಗೆ ಸಹಾಯ ಮಾಡುವಲ್ಲಿ ನಿರತರಾಗಿರುವ ಶಾಸಕರು, ಸಭೆಯನ್ನು ತಾತ್ಕಾಲಿಕವಾಗಿ ಮುಂದೂಡಲು ಮನವಿ ಮಾಡಿದ್ದರು ಎಂದು ಮಮತಾ ಬ್ಯಾನರ್ಜಿ ಅವರ ಕಾಳೀಘಾಟ್ ನಿವಾಸದ ಹೊರಗೆ ಘೋಷ್ ಸುದ್ದಿಗಾರರಿಗೆ ತಿಳಿಸಿದರು. ಮಮತಾ ಅವರ ಮನೆಯಲ್ಲಿಯೇ ಸಭೆ ನಡೆಯಬೇಕಾಗಿತ್ತು.

ಶಾಸಕರ ವಿನಂತಿಯ ಮೆರೆಗೆ ಸಭೆಯನ್ನು ರದ್ದು ಮಾಡಲಾಗಿದೆ. ಮಧ್ಯಾಹ್ನ 3 ಗಂಟೆಗೆ ಸಭೆ ಆರಂಭವಾಗಬೇಕಿತ್ತು. ಅದಾಗಲೇ 20 ಶಾಸಕರು ಬಂದಿದ್ದರು ಎಂದು ಘೋಷ್ ಹೇಳಿದ್ದಾರೆ. ಶೀಘ್ರವೇ ಮುಂದಿನ ದಿನಾಂಕ ಪ್ರಕಟಿಸಲಾಗುವುದು ಎಂದಿದ್ದಾರೆ.
.ಪಶ್ಚಿಮ ಬಂಗಾಳ: ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಮೇಲೆ ಹಲ್ಲೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.