ಕೋಲ್ಕತ್ತ: 'ವಿಧಾನಸಭಾ ಚುನಾವಣೆಯ ನಂತರ ಪಕ್ಷದ ಕಾರ್ಯಕರ್ತರನ್ನು ಬಂಧಿಸಿರುವ ಸಂಬಂಧ ಮನವಿ ಪತ್ರ ನೀಡಲು ಹೂಗ್ಲಿ ಜಿಲ್ಲೆಯ ಪೊಲೀಸ್ ಠಾಣೆಯೊಂದಕ್ಕೆ ತೆರಳಿದ್ದ ವೇಳೆ ಗುಂಪೊಂದು ಹಲ್ಲೆ ನಡೆಸಿದ್ದು, ನನ್ನ ತಲೆಗೆ ತೀವ್ರವಾದ ಗಾಯಗಳಾಗಿವೆ' ಎಂದು ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಆರೋಪಿಸಿದ್ದಾರೆ.

ಈ ಬೆಳವಣಿಗೆಯ ಬಳಿಕ ಶ್ರೀರಾಮ್ಪೋರ್ನಲ್ಲಿರುವ ಕಲ್ಯಾಣ್ ಅವರ ಮನೆಗೆ ತೆರಳಿದ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ದಾಳಿಯ ಕುರಿತು ಮಾಹಿತಿ ಪಡೆದುಕೊಂಡರು.

‘ಶನಿವಾರ ಅಭಿಷೇಕ್ ಬ್ಯಾನರ್ಜಿ ಮೇಲೆ ಹಲ್ಲೆ ನಡೆಸಲಾಗಿತ್ತು. ಮರುದಿನವೇ ಲೋಕಸಭೆ ಪಕ್ಷದ ಮುಖ್ಯ ಸಚೇತಕ ಕಲ್ಯಾಣ್ ಬ್ಯಾನರ್ಜಿ ಮೇಲೆ ಕೂಡ ಬಿಜೆಪಿಯು ಯೋಜಿತವಾಗಿ ದಾಳಿ ನಡೆಸಿದೆ. ದೇಶದಲ್ಲಿ ಪ್ರಜಾಪ್ರಭುತ್ವವನ್ನು ಬಿಜೆಪಿಯು ಹತ್ಯೆ ಮಾಡುತ್ತಿದೆ’ ಎಂದು ಆರೋಪಿಸಿದರು.

ಬಿಜೆಪಿ ಕಾರಣ: ‘ನನ್ನ ಮೇಲೆ ದಾಳಿಯಾಗಲು ಬಿಜೆಪಿಯವರೇ ಕಾರಣ’ ಎಂದು ಕಲ್ಯಾಣ್ ಬ್ಯಾನರ್ಜಿ ಆರೋಪಿಸಿದ್ದಾರೆ.

ಚಂದಿತಾಲ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಲು ಕಲ್ಯಾಣ್ ಅವರು ನಿಯೋಗದ ಜೊತೆಗೆ ಬಂದಿದ್ದರು. ಈ ವೇಳೆ ಸುತ್ತುವರಿದ ಗುಂಪು ಕಪ್ಪು ಬಟ್ಟೆ ತೋರಿಸಿ, ಕಳ್ಳ ಕಳ್ಳ ಎಂದು ಘೋಷಣೆ ಕೂಗಿದರು.

ಈ ವೇಳೆ ಜನರು ಅವರನ್ನು ತಳ್ಳಾಡಿ, ತಲೆಗೆ ಹೊಡೆದಿದ್ದು, ರಕ್ತ ಸೋರುತ್ತಿರುವ ದೃಶ್ಯ ಟಿವಿಗಳಲ್ಲಿ ಹರಿದಾಡಿದೆ.

‘ಈ ಎಲ್ಲಾ ಘಟನೆಗಳು ಪೊಲೀಸರ ಮುಂಭಾಗವೇ ನಡೆದಿದೆ. ನನ್ನ ತಲೆಗೆ ಹೊಡೆಯಲಾಗಿದ್ದು, ರಕ್ತ ಸೋರುತ್ತಿದೆ’ ಎಂದು ಕಲ್ಯಾಣ್ ಆರೋಪಿಸಿದ್ದಾರೆ.

ಇದಾದ ಬಳಿಕ ಠಾಣೆಯ ಮುಂಭಾಗದಲ್ಲಿ ಧರಣಿ ನಡೆಸಿದರು. ಪರಿಸ್ಥಿತಿ ವಿಕೋಪಕ್ಕೆ ಕೈ ಮೀರದಂತೆ ತಡೆಯಲು ಹೆಚ್ಚಿನ ಪೊಲೀಸ್ ಬಂದೋಬಸ್ತ್, ಕೇಂದ್ರಿಯ ಮೀಸಲು ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.

ಈ ಆರೋಪವನ್ನು ತಳ್ಳಿಹಾಕಿರುವ ಬಿಜೆಪಿ, ‘ಟಿಎಂಸಿ ನಾಯಕರ ವಿರುದ್ಧ ಸ್ಥಳೀಯ ಜನರೇ ಆಕ್ರೋಶ ಹೊರಹಾಕುತ್ತಿದ್ದಾರೆ, ಇದರಲ್ಲಿ ಪಕ್ಷದ ಯಾವುದೇ ಪಾತ್ರವಿಲ್ಲ’ ಎಂದು ತಿಳಿಸಿದೆ.
.ಬಿಜೆಪಿ ಒತ್ತಡಕ್ಕೆ ಅಭಿಷೇಕ್ ಬ್ಯಾನರ್ಜಿಯನ್ನು ಆಸ್ಪತ್ರೆಯಿಂದ ಬಿಡುಗಡೆ: ಮಮತಾ.ನಾನು ರಾಜ್ಯ ಸರ್ಕಾರ ಪ್ರಾಯೋಜಿತ ಭಯೋತ್ಪಾದನೆಯ ಬಲಿಪಶು: ಅಭಿಷೇಕ್ ಬ್ಯಾನರ್ಜಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.