ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಬಂಡಾಯ ಎದ್ದಿರುವ ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) 58 ಶಾಸಕರ ಬೆಂಬಲದೊಂದಿಗೆ ರುತಬ್ರತಾ ಬ್ಯಾನರ್ಜಿ ಅವರು ವಿಧಾನಸಭೆಗೆ ಬಂದಿದ್ದು ಹಲವರಿಗೆ ಆಘಾತ ತಂದಿರಬಹುದು. ಆದರೆ, ಬುಧವಾರ ನಡೆದ ಈ ನಾಟಕೀಯ ಬೆಳವಣಿಗೆಯ ಬೀಜ ಬಹಳ ಹಿಂದೆಯೇ ಬಿತ್ತಲ್ಪಟ್ಟಿತ್ತು ಎಂಬುದು ವಿಶೇಷ.

ಈಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಪಕ್ಷವು ಸೋಲು ಕಂಡ ತಕ್ಷಣವೇ ಪಕ್ಷದೊಳಗೆ ‘ಬಂಡಾಯ’ದ ಕಹಳೆ ಮೊಳಗಿತ್ತು. ಇದು ಅಂತಿಮವಾಗಿ 28 ವರ್ಷಗಳ ಇತಿಹಾಸವಿರುವ ಪಕ್ಷದ ಇಬ್ಭಾಗಕ್ಕೆ ಕಾರಣವಾಯಿತು.

ಈಚೆಗೆ ಬಿಜೆಪಿ ನಾಯಕ, ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ ಮತ್ತು ರುತಬ್ರತಾ ಬ್ಯಾನರ್ಜಿ ಅವರು ದೆಹಲಿಯಲ್ಲಿ ‘ಆಕಸ್ಮಿಕ’ ಭೇಟಿಯಾಗಿದ್ದರು ಎನ್ನಲಾಗಿದೆ. ಬಳಿಕ ನಡೆದದ್ದೇ ಟಿಎಂಸಿ ಶಾಸಕರ ಸಹಿ ಸಂಗ್ರಹ ಪ್ರಸಹನ, ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಪ್ರಭಾವದ ವಿರುದ್ಧದ ಅಸಮಾಧಾನ ಮತ್ತು ಉತ್ತರಾಧಿಕಾರದ ಹೋರಾಟ. ಇವೆಲ್ಲಾ ಕೇವಲ 13 ದಿನಗಳಲ್ಲಿ ಅತ್ಯಂತ ವೇಗವಾಗಿ ನಡೆದ ಪ್ರಮುಖ ಬೆಳವಣಿಗೆಗಳಾಗಿವೆ.

ಕಾಂಗ್ರೆಸ್ನಿಂದ ಹೊರಬಂದು 1998ರ ಜನವರಿ 1ರಂದು ಮಮತಾ ಬ್ಯಾನರ್ಜಿ ಅವರು ಸ್ಥಾಪಿಸಿದ್ದ ಪಕ್ಷವನ್ನು ರುತಬ್ರತಾ ಬ್ಯಾನರ್ಜಿ ಅವರ ದಂಗೆಯು ಅಧಿಕೃತವಾಗಿ ಇಬ್ಬಾಗ ಮಾಡಿದೆ.

ಅಭಿಷೇಕ್ ವಿರುದ್ಧ ಅಸಮಾಧಾನ

ಮೇ 4ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಎದುರು ಸೋತ ತಕ್ಷಣವೇ, ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ಸುತ್ತ ಅಧಿಕಾರ ಕೇಂದ್ರೀಕೃತವಾಗುತ್ತಿದೆ ಎಂದು ಕೆಲವು ಶಾಸಕರು ಭಾವಿಸಿದ್ದರಿಂದ ಪಕ್ಷದೊಳಗೆ ಅಸಮಾಧಾನ ಮೂಡಿತ್ತು.

ಮೇ 6ರಂದು ನಡೆದ ನೂತನ ಶಾಸಕರ ಸಭೆಯಲ್ಲಿ ಮಮತಾ ಬ್ಯಾನರ್ಜಿ ಅವರು ಚುನಾವಣಾ ಪ್ರಚಾರದಲ್ಲಿ ಅಭಿಷೇಕ್ ಅವರ ಪಾತ್ರವನ್ನು ಶ್ಲಾಘಿಸಿ ಎಲ್ಲಾ ಶಾಸಕರು ಎದ್ದು ನಿಂತು ಚಪ್ಪಾಳೆ ತಟ್ಟುವಂತೆ ಕೇಳಿಕೊಂಡಿದ್ದರು ಎಂದು ವರದಿಯಾಗಿದೆ. ಇದು ಅಭಿಷೇಕ್ ಕೊಡುಗೆಯನ್ನು ಗುರುತಿಸುವ ಉದ್ದೇಶ ಹೊಂದಿದ್ದರೂ, ಪಕ್ಷವು ಕೇವಲ ಒಂದು ಕುಟುಂಬದ ಸುತ್ತ ಸುತ್ತುತ್ತಿದೆ ಎಂದು ಶಾಸಕರ ಒಂದು ಗುಂಪು ಭಾವಿಸಿತ್ತು.

ಮೇ 19ರಂದು ಮೊದಲ ಬಾರಿಗೆ ಟಿಎಂಸಿ ಪಕ್ಷದಲ್ಲಿ ಭಿನ್ನಮತ ಮೂಡಿರುವುದು ಬಹಿರಂಗವಾಯಿತು. ಬಳಿಕ ನಡೆದ ಮತ್ತೊಂದು ಸಭೆಯಲ್ಲಿ ರುತಬ್ರತಾ ಬ್ಯಾನರ್ಜಿ, ಎಂಟಾಲಿ ಶಾಸಕ ಸಂದೀಪನ್ ಸಹಾ, ಫಾಲ್ಟಾ ಶಾಸಕ ಜಹಾಂಗೀರ್ ಖಾನ್ ಅವರು ಮರುಮತದಾನದಿಂದ ಹಿಂದೆ ಸರಿಯುವುದಾಗಿ ಬಹಿರಂಗವಾಗಿ ಘೋಷಿಸಿದ್ದರೂ ಅವರನ್ನು ಏಕೆ ಪಕ್ಷದಿಂದ ಉಚ್ಚಾಟಿಸಿಲ್ಲ ಎಂದು ಪ್ರಶ್ನಿಸಲಾಯಿತು.

ಜಹಾಂಗೀರ್ ಅವರನ್ನು ಅಭಿಷೇಕ್ ಅವರ ಆಪ್ತರು ಎಂದು ಪರಿಗಣಿಸಲಾಗಿರುವುದರಿಂದ, ಈ ಟೀಕೆಯನ್ನು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗೆ (ಅಭಿಷೇಕ್) ನೀಡಿದ ಸವಾಲು ಎಂದೇ ವ್ಯಾಖ್ಯಾನಿಸಲಾಯಿತು.

ಹಿರಿಯ ಶಾಸಕ ಕುನಾಲ್ ಘೋಷ್ ಕೂಡ ಇದೇ ರೀತಿಯ ಕಳಕಳಿಯನ್ನು ವ್ಯಕ್ತಪಡಿಸಿದರಾದರೂ, ನಂತರ ಅವರು ಬಂಡಾಯಗಾರರ ಗುಂಪಿನಿಂದ ದೂರ ಉಳಿದರು.

ಸುವೇಂದು–ರುತಬ್ರತಾ ‘ಆಕಸ್ಮಿಕ’ ಭೇಟಿ

ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಮೇ 22ರಂದು ತಮ್ಮ ರಾಜ್ಯಸಭಾ ಅವಧಿ ಮುಗಿದ ನಂತರದ ಔಪಚಾರಿಕತೆಗಳನ್ನು ಪೂರ್ಣಗೊಳಿಸಲು ದೆಹಲಿಯಲ್ಲಿದ್ದ ರುತಬ್ರತಾ ಅವರು ಮಧ್ಯಾಹ್ನದ ಊಟಕ್ಕಾಗಿ ‘ಬಂಗಾ ಭವನ’ಕ್ಕೆ ಭೇಟಿ ನೀಡಿದ್ದರು. ಇದೇ ವೇಳೆ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರನ್ನು ಆಕಸ್ಮಿಕವಾಗಿ ಭೇಟಿಯಾಗಿದ್ದರು.

ಅದಾದ ನಂತರ ಆಡಳಿತಾತ್ಮಕ ಪರಾಮರ್ಶೆ ಸಭೆಗಳಿಗೆ ವಿರೋಧ ಪಕ್ಷದ ಶಾಸಕರು ಮತ್ತು ಸಂಸದರನ್ನು ಆಹ್ವಾನಿಸುವ ಸುವೇಂದು ಅಧಿಕಾರಿ ಅವರ ನಿರ್ಧಾರವನ್ನು ರುತಬ್ರತಾ ಬಹಿರಂಗವಾಗಿ ಸ್ವಾಗತಿಸಿದರು. ಇದನ್ನು ಆರೋಗ್ಯಕರ ಪ್ರಜಾಪ್ರಭುತ್ವದ ನಡೆ ಎಂದೂ ಬಣ್ಣಿಸಿದರು. ಈ ಹೇಳಿಕೆಗಳು ರಾಜಕೀಯ ವಲಯದಲ್ಲಿ ಗಮನ ಸೆಳೆದವು.

‘ನಕಲಿ’ ಸಹಿ ವಿವಾದ....

ಕೆಲವೇ ದಿನಗಳಲ್ಲಿ ಟಿಎಂಸಿಯಲ್ಲಿ ಮತ್ತೊಂದು ವಿವಾದ ಮುನ್ನೆಲೆಗೆ ಬಂದಿತು. ಮೇ 25ರಂದು ಶಾಸಕಾಂಗ ಪಕ್ಷದ ನಾಯಕತ್ವದ ರಚನೆಗೆ ಸಂಬಂಧಿಸಿದಂತೆ ಸ್ಪೀಕರ್ಗೆ ಸಲ್ಲಿಸಲಾದ ದಾಖಲೆಗಳಲ್ಲಿ ಹಲವು ಶಾಸಕರ ಸಹಿ ನಕಲು ಮಾಡಲಾಗಿದೆ ಎಂಬ ಆರೋಪ ಕೇಳಿಬಂತು.

ಮೇ 27ರಂದು ‘ನಕಲಿ ಸಹಿ’ ಪ್ರಕರಣಕ್ಕೆ ಸಂಬಂಧಿಸಿದಂತೆ ರುತಬ್ರತಾ ಬ್ಯಾನರ್ಜಿ ಮತ್ತು ಸಂದೀಪನ್ ಸಹಾ ದೂರು ದಾಖಲಿಸಿದ್ದರು. ಈ ವಿಚಾರವನ್ನು ಖುದ್ದು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಸ್ಪೀಕರ್ಗೆ ಅಧಿಕೃತವಾಗಿ ದೂರು ನೀಡಿದಾಗ ಈ ವಿವಾದವು ಕಾನೂನು ಆಯಾಮ ಪಡೆದುಕೊಂಡಿತು. ತರುವಾಯ ವಿಧಾನಸಭೆ ಸಚಿವಾಲಯವು ಪೊಲೀಸರಿಗೆ ದೂರು ನೀಡಿತ್ತು. ಇದು ಸಿಐಡಿ ತನಿಖೆಗೂ ಕಾರಣವಾಯಿತು.

ಇದರ ಬೆನ್ನಲ್ಲೇ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಸಂದೀಪನ್ ಮತ್ತು ರುತಬ್ರತಾ ಅವರನ್ನು ಟಿಎಂಸಿ ಉಚ್ಚಾಟನೆ ಮಾಡಿತು. ಬಳಿಕ ಈ ವಿವಾದವು ಕೇವಲ ಪ್ರಕ್ರಿಯಾತ್ಮಕ ವಿಷಯವಾಗಿ ಉಳಿಯದೆ ರಾಜಕೀಯ ಸ್ವರೂಪ ಪಡೆಯಿತು.

ಈ ಸಹಿ ವಿವಾದವೇ ಅತೃಪ್ತ ಟಿಎಂಸಿ ಶಾಸಕರನ್ನು ಒಂದುಗೂಡಿಸುವ ವೇದಿಕೆಯಾಯಿತು. ಇದು ರಾಜ್ಯದಾದ್ಯಂತ ತೀವ್ರ ಲಾಬಿ, ಕಾರ್ಯತಂತ್ರದ ಸಭೆಗಳು ಮತ್ತು ತೆರೆಮರೆಯ ಸಜ್ಜುಗೊಳಿಸುವಿಕೆಗೆ ಕಾರಣವಾಯಿತು.

ಮೇ 30ರಂದು ಅಭಿಷೇಕ್ ಬ್ಯಾನರ್ಜಿ ಅವರು ಸೋನಾರ್ಪುರಕ್ಕೆ ಭೇಟಿ ನೀಡಿದ್ದಾಗ ಅವರ ಮೇಲೆ ಗುಂಪೊಂದು ದಾಳಿ ನಡೆಸಿದಾಗ ಬಿಕ್ಕಟ್ಟು ಇನ್ನಷ್ಟು ಉಲ್ಬಣಗೊಂಡಿತು.

ರಾಜಕೀಯ ಪಕ್ಷಗಳು ಈ ಘಟನೆಯನ್ನು ಖಂಡಿಸಿದವು. ಆದರೆ, ಸಂಘಟನೆ ಮತ್ತು ಶಾಸಕಾಂಗ ಪಕ್ಷದ ಕೆಲವು ನಾಯಕರಿಂದ ಬಂದ ನೀರಸ ಪ್ರತಿಕ್ರಿಯೆಯನ್ನು ಹಲವು ಟಿಎಂಸಿ ನಾಯಕರು ಗಮನಿಸಿದರು. ಇದು ನಾಯಕತ್ವ ಮತ್ತು ಚುನಾಯಿತ ಪ್ರತಿನಿಧಿಗಳ ಒಂದು ಗುಂಪಿನ ನಡುವೆ ಅಂತರ ಹೆಚ್ಚಾಗಲು ಸಾಕ್ಷಿಯಾಯಿತು.

ಮೇ 31ರ ವೇಳೆಗೆ ಟಿಎಂಸಿ ಪಕ್ಷದ ನಾಯಕತ್ವದ ಹಿಡಿತ ಸಡಿಲವಾಗಿರುವುದು ಸ್ಪಷ್ಟವಾಗಿ ಗೋಚರಿಸಿತು. ಮಮತಾ ಬ್ಯಾನರ್ಜಿ ಅವರು ತಮ್ಮ ನಿವಾಸದಲ್ಲಿ ಕರೆದಿದ್ದ ನೂತನ ಶಾಸಕರ ಸಭೆಗೆ ಹಾಜರಾತಿ ತೀರಾ ಕಡಿಮೆಯಿತ್ತು.

ಜೂನ್ 1ರಂದು ಟಿಎಂಕೆ ಪಕ್ಷದಲ್ಲಿ ನಿರ್ಣಾಯಕ ಒಡಕು ಉಂಟಾಯಿತು. ರುತಬ್ರತಾ ಮತ್ತು ಸಂದೀಪನ್ ನೀಡಿದ ದೂರುಗಳ ಆಧಾರದ ಮೇಲೆ ಸಿಐಡಿ ತನಿಖೆ ಪ್ರಾರಂಭಿಸಲಾಗಿದೆ ಎಂದು ಸುವೇಂದು ಅಧಿಕಾರಿ ಬಹಿರಂಗಪಡಿಸಿದರು. ಇದಾದ ಕೆಲವೇ ಗಂಟೆಗಳಲ್ಲಿ ಟಿಎಂಸಿ ಇಬ್ಬರು ನಾಯಕರನ್ನು ಪಕ್ಷದಿಂದ ಉಚ್ಚಾಟಿಸಿತು.

ಆದರೆ, ಪಕ್ಷದ ಈ ಕ್ರಮವು ಬಿಕ್ಕಟ್ಟನ್ನು ನಿಯಂತ್ರಿಸುವ ಬದಲು, ಬಂಡಾಯದ ವೇಗವನ್ನು ಮತ್ತಷ್ಟು ಹೆಚ್ಚಿಸಿತು.

ಉಚ್ಚಾಟಿತ ನಾಯಕರು (ರುತಬ್ರತಾ ಮತ್ತು ಸಂದೀಪನ್) ಅಭಿಷೇಕ್ ಬ್ಯಾನರ್ಜಿ ವಿರುದ್ಧ ವಾಗ್ದಾಳಿಯನ್ನು ತೀವ್ರಗೊಳಿಸಿದರು. ಶಾಸಕಾಂಗ ಪಕ್ಷದ ನಾಯಕತ್ವದ ಕುರಿತು ಜೂನ್ 2ರಂದು ಸ್ಪೀಕರ್ಗೆ ಹೊಸ ಪತ್ರ ಬರೆಯುವ ಮೂಲಕ ಪಕ್ಷವು ನಿಯಂತ್ರಣವನ್ನು ಮರಳಿ ಪಡೆಯಲು ಪ್ರಯತ್ನಿಸಿದಾಗಲೂ ಅದು ಸಾಧ್ಯವಾಗಲಿಲ್ಲ. ಬದಲಾಗಿ, ಬಂಡಾಯಗಾರರ ಪರ ಬೆಂಬಲಿಸುವವರ ಸಂಖ್ಯೆ ಹೆಚ್ಚಿತು.

ಟಿಎಂಸಿ ಇಬ್ಭಾಗ...

58 ಶಾಸಕರ ಗುಂಪೊಂದು ಸ್ಪೀಕರ್ಗೆ ಪತ್ರ ಸಲ್ಲಿಸಿ, ಪಕ್ಷದ ಉಚ್ಚಾಟಿತ ಶಾಸಕ ರುತಬ್ರತಾ ಬ್ಯಾನರ್ಜಿ ಅವರನ್ನು ವಿರೋಧ ಪಕ್ಷದ ನಾಯಕನ್ನಾಗಿ ನೇಮಿಸಬೇಕು ಎಂದು ಕೋರಿ 58 ಬಂಡಾಯ ಶಾಸಕರು ನೀಡಿದ ಪತ್ರವನ್ನು ಸ್ಪೀಕರ್ ಪುರಸ್ಕರಿಸಿದ್ದಾರೆ.

‘ನಮ್ಮದೇ ನಿಜವಾದ ಟಿಎಂಸಿ ಮತ್ತು ಪಶ್ಚಿಮ ಬಂಗಾಳದಲ್ಲಿ ನಮ್ಮದೇ ಪ್ರಮುಖ ವಿರೋಧ ಪಕ್ಷ’ ಎಂದು ಶಾಸಕ ರುತಬ್ರತಾ ಘೋಷಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನಾ ಮತ್ತು ಎನ್ಸಿಪಿ ಪಕ್ಷಗಳು ಇಬ್ಭಾಗವಾದ ಮಾದರಿಯಲ್ಲಿಯೇ ಟಿಎಂಸಿಯಲ್ಲಿ ಕೂಡ ಬೆಳವಣಿಗೆಗಳು ನಡೆದವು. ಈ ಮೂಲಕ ಮಮತಾ ಬ್ಯಾನರ್ಜಿ ಅವರ ನೇತೃತ್ವದ ಮೂಲ ಪಕ್ಷವು ಈಗ ರಾಜ್ಯದಲ್ಲಿ ಅಧಿಕೃತ ವಿರೋಧ ಪಕ್ಷದ ಸ್ಥಾನವನ್ನು ಕಳೆದುಕೊಂಡಂತಾಗಿದೆ.

ಸ್ಪೀಕರ್ ರತೀಂದ್ರ ಬೋಸ್ ಅವರು ತಮ್ಮ ಬಣ ನೀಡಿದ ಪತ್ರವನ್ನು ಮಾನ್ಯ ಮಾಡಿರುವ ಬಗ್ಗೆ ಶಾಸಕ ರುತಬ್ರತಾ ಅವರು ಮಾಧ್ಯಮಗೋಷ್ಠಿ ನಡೆಸಿ, ಮಾಹಿತಿ ಹಂಚಿಕೊಂಡಿದ್ದಾರೆ. ‘ಸಭೆಗೆ ಗೈರಾಗಿದ್ದ ಇಬ್ಬರು ಶಾಸಕರು ಕೂಡ ನಮಗೆ ಬೆಂಬಲ ನೀಡಿದ್ದಾರೆ’ ಎಂದಿರುವ ಅವರು, ‘ಮಮತಾ ಬ್ಯಾನರ್ಜಿ ಅವರು ನಮಗೆ ಮಾರ್ಗದರ್ಶನ ಮಾಡಬೇಕು’ ಎಂದು ಕೋರಿದ್ದಾರೆ.

ಬಂಡಾಯ ಶಾಸಕರು ವಿಧಾನಸಭೆಯಲ್ಲಿ ಬುಧವಾರ ಸಭೆ ನಡೆಸಿದ್ದರು. ಸಭೆಯಲ್ಲಿ 58 ಶಾಸಕರು ಹಾಜರಿದ್ದರು. ಸಭೆಯ ಬಳಿಕ ಈ ಎಲ್ಲ ಶಾಸಕರ ಸಹಿ ಇದ್ದ ಪತ್ರವನ್ನು ಸ್ಪೀಕರ್ ಅವರಿಗೆ ನೀಡಲಾಯಿತು. ಟಿಎಂಸಿ ನಾಯಕತ್ವಕ್ಕೆ ಹತ್ತಿರದಲ್ಲಿರುವ ಕೆಲವು ನಾಯಕರು ಈ ಸಭೆಯಲ್ಲಿ ಭಾಗವಹಿಸಿರಲಿಲ್ಲ.
.West Bengal: ಮಮತಾಗೆ ಕಂಟಕವಾದ ರುತಬ್ರತಾ ಬ್ಯಾನರ್ಜಿ ಯಾರು? ಹಿನ್ನೆಲೆ ಏನು?.ಟಿಎಂಸಿ ಬಂಡಾಯ ಬಣವೇ ವಿಪಕ್ಷ: ಅಭಿಷೇಕ್ ನಾಯಕತ್ವ ವಿರೋಧಿಸಿ ಹೊರಬಂದ 58 ಶಾಸಕರು.ಟಿಎಂಸಿ ಪಕ್ಷವು ವಿಭಜನೆಯತ್ತ ಸಾಗುತ್ತಿದೆ: ಪಶ್ಚಿಮ ಬಂಗಾಳ ಸಚಿವ.ಪಕ್ಷ ವಿರೋಧಿ ಚಟುವಟಿಕೆ: ಇಬ್ಬರು ಶಾಸಕರ ಉಚ್ಛಾಟಿಸಿದ ಟಿಎಂಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.