ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಪಾಲ ಎನ್.ರವಿ ಪರೋಕ್ಷ ಟೀಕೆಗೆ ಹಣಕಾಸು ಸಚಿವ ತಂಗಂ ತೀಕ್ಷ್ಣ ಪ್ರತಿಕ್ರಿಯೆ

Published 6 ಜೂನ್ 2023, 11:58 IST
Last Updated 6 ಜೂನ್ 2023, 11:58 IST
ಅಕ್ಷರ ಗಾತ್ರ

ಚೆನ್ನೈ: ’ವಿದೇಶಿ ಬಂಡವಾಳ ಆಕರ್ಷಿಸಲು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕೈಗೊಂಡಿರುವ ವಿದೇಶ ಪ್ರವಾಸಕ್ಕೆ ಪರೋಕ್ಷವಾಗಿ ಟೀಕಿಸಿದ ರಾಜ್ಯಪಾಲ ಎನ್.ರವಿ ಹೇಳಿಕೆಗೆ ತೀಕ್ಷಣವಾಗಿ ಪ್ರತಿಕ್ರಿಯಿಸಿರುವ ರಾಜ್ಯ ಸರ್ಕಾರ, ರಾಜಭವನದಿಂದ ರಾಜಕೀಯ ಹೇಳಿಕೆಗಳನ್ನು ತಡೆಗಟ್ಟುವ ಅಗತ್ಯವಿದೆ‘ ಎಂದಿದೆ.

ರಾಜ್ಯಪಾಲರ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಹಣಕಾಸು ಸಚಿವ ತಂಗಮ್‌ ತೆನ್ನರಸು, ’ಬಂಡವಾಳ ಹೂಡಲು ಕರೆದಾಕ್ಷಣ ಯಾವುದೇ ಕಂಪನಿಗಳು ಬರುವುದಿಲ್ಲ. ಅವರು ಇರುವಲ್ಲಿಗೆ ಹೋಗಿ ಮಾತುಕತೆ ನಡೆಸಬೇಕಾಗುತ್ತದೆ. ಮುಖ್ಯಮಂತ್ರಿ ಅವರು ರಾಜ್ಯದ ಆರ್ಥಿಕತೆ ಉತ್ತಮಪಡಿಸಲು ಸಾಕಷ್ಟು ಪ್ರಯಾಸಪಡುತ್ತಿದ್ದಾರೆ. ಹೀಗಾಗಿ ಹೂಡಿಕೆದಾರರನ್ನು ಆಕರ್ಷಿಸಲು ಸಿಂಗಪುರ ಮತ್ತು ಜನಪಾನ್‌ ರಾಷ್ಟ್ರ ಪ್ರವಾಸ ಕೈಗೊಂಡಿದ್ದಾರೆ. ಆದರೆ ಈ ಕುರಿತು ರವಿ ಅವರು ಅವಹೇಳನ ಸಲ್ಲ‘ ಎಂದಿದ್ದಾರೆ.

’ತಮಿಳುನಾಡು ಮುಖ್ಯಮಂತ್ರಿ ಅವರ ವಿದೇಶ ಪ್ರವಾಸವನ್ನು ಟೀಕಿಸಿರುವ ರವಿ ಅವರು 2011ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಚೀನಾ ಪ್ರವಾಸ ಕೈಗೊಂಡಿದ್ದ ನರೇಂದ್ರ ಮೋದಿ ಅವರ ವಿರುದ್ಧ ಪರೋಕ್ಷವಾಗಿ ಬಾಣ ಬಿಟ್ಟಿರುವ ಸಾಧ್ಯತೆಯೂ ಇದೆ‘ ಎಂದು ತಿರುಗೇಟು ನೀಡಿದ್ದಾರೆ.

ಜೂನ್ 5ರಂದು ರಾಜಭವನದಲ್ಲಿ ನಡೆದ ವಿಶ್ವವಿದ್ಯಾಲಯ ಕುಲಪತಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಎನ್.ರವಿ ಅವರು, ’ಹೂಡಿಕೆದಾರರನ್ನು ಆಕರ್ಷಿಸಲು ಒಂದು ವಾತಾವರಣವನ್ನು ನಿರ್ಮಿಸುವ ಅಗತ್ಯವಿದೆ. ಹೂಡಿಕೆದಾರರು ಬಹಳಷ್ಟು ಚೌಕಾಸಿ ಮಾಡುವುದರಿಂದ ಅವರೊಂದಿಗೆ ಮಾತನಾಡುವುದು ಅಥವಾ ಬಂಡವಾಳ ಹೂಡುವಂತೆ ಕರೆಯುವುದರಿಂದ ಯಾರೂ ಬರುವುದಿಲ್ಲ. ದೇಶದ ಹಲವು ರಾಜ್ಯಗಳು ಇಂಥ ಪ್ರಯತ್ನ ನಡೆಸಿವೆ‘ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT