ರಾಜ್ಯ, ರಾಷ್ಟ್ರೀಯ, ವಿದೇಶ, ಕ್ರೀಡೆಗೆ ಸಂಬಂಧಿಸಿದ ಈ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ..

ಸರ್ಕಾರ ರಚನೆಗೆ ಅಗತ್ಯ ಬಹುಮತ ತಮ್ಮ ಬಳಿ ಇದೆ ಎಂದು ರಾಜ್ಯಪಾಲರ ಬಳಿ ಶುಕ್ರವಾರ ಹಕ್ಕು ಮಂಡಿಸಿದ್ದ ಚಂದ್ರಶೇಖರ್ ಜೋಸೆಫ್ ವಿಜಯ್ಗೆ ವಿಡುತಲೈ ಚಿರುತೈಗಳ್ ಕಚ್ಚಿ (ವಿಸಿಕೆ) ಮತ್ತೆ ಆಘಾತ ನೀಡಿದೆ. ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ಬೆಂಬಲ ಘೋಷಣೆ ಕುರಿತ ನಿರ್ಧಾರವನ್ನು ಇನ್ನಷ್ಟೇ ಪ್ರಕಟಿಸುವುದಾಗಿ ಹೇಳಿದೆ.
.ತಮಿಳುನಾಡಲ್ಲಿ ನಿಲ್ಲದ ಹೈಡ್ರಾಮಾ: ಇಡೀ ದಿನ ಪ್ರಹಸನ, DCM ಸ್ಥಾನಕ್ಕೆ VCK ಪಟ್ಟು!.
ತಮಿಳುನಾಡು ರಾಜಕೀಯವು ದಿನಕ್ಕೊಂದು ತಿರುವು ಪಡೆಯುತ್ತಿದೆ. ಶುಕ್ರವಾರ ಎರಡನೇ ಬಾರಿ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದ ವಿಜಯ್ ಅವರಿಗೆ ಕೇವಲ 116 ಶಾಸಕರ ಬೆಂಬಲವಿದ್ದು, ಮ್ಯಾಜಿಕ್ ನಂಬರ್ ತಲುಪಿಲ್ಲ ಎಂಬ ವರದಿಗಳು ಬರುತ್ತಿವೆ.
.ನಮ್ಮ ಶಾಸಕನ ನಕಲಿ ಬೆಂಬಲ ಪತ್ರ ರಾಜ್ಯಪಾಲರಿಗೆ ನೀಡಿರುವ ವಿಜಯ್: ಎಎಂಎಂಕೆ ದೂರು.
ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ತನ್ನ ‘ಪ್ರತಿಸ್ಪರ್ಧಿ’ ಎಐಎಡಿಎಂಕೆಯನ್ನು ಎಂದಿಗೂ ಬೆಂಬಲಿಸುವುದಿಲ್ಲ ಎಂದು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಶುಕ್ರವಾರ ಘೋಷಿಸಿದೆ.
.ತಮಿಳುನಾಡು: ಸರ್ಕಾರ ರಚನೆಗೆ ಎಐಎಡಿಎಂಕೆಗೆ ಬೆಂಬಲ ಇಲ್ಲ; ‘ಯು–ಟರ್ನ್’ ಹೊಡೆದ DMK.
ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ವಿಜಯ್ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಶನಿವಾರ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ಆದರೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಕರ್ ಅವರು ವಿಜಯ್ಗೆ ಪ್ರಮಾಣ ವಚನ ಸ್ವೀಕರಿಸಲು ಆಹ್ವಾನ ನೀಡಿಲ್ಲ.
.ವಿಜಯ್ಗಿಲ್ಲ ಆಹ್ವಾನ, ಸುವೇಂದುಗೆ ಸಿ.ಎಂ ಸ್ಥಾನ.
ಪಶ್ಚಿಮ ಬಂಗಾಳದ ನಿಯೋಜಿತ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಇಂದು (ಶುಕ್ರವಾರ) ಸಂಜೆ ರಾಜ್ಯಪಾಲ ಆರ್.ಎನ್.ರವಿ ಅವರನ್ನು ಭೇಟಿ ಮಾಡಿ, ರಾಜ್ಯದಲ್ಲಿ ಮೊದಲ ಬಿಜೆಪಿ ನೇತೃತ್ವದ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ.
.ಬಂಗಾಳದಲ್ಲಿ ಬಿಜೆಪಿ ಯುಗಾರಂಭ: ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ.
ಹಣ ಹಾಗೂ ಚಿನ್ನಾಭರಣ ದೋಚುವ ಉದ್ದೇಶದಿಂದ ಮಹಿಳೆಗೆ ಬೈಕ್ ಡಿಕ್ಕಿ ಹೊಡೆಸಿ, ಕೊಲೆ ಮಾಡಿದ್ದ ಐವರನ್ನು ಮಹಾಲಕ್ಷ್ಮಿ ಲೇಔಟ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
.ಹಣಕ್ಕಾಗಿ ಬೈಕ್ ಡಿಕ್ಕಿ ಹೊಡೆಸಿ ಕೊಲೆ: ಸಿನಿಮೀಯ ಶೈಲಿಯಲ್ಲಿ ಸಂಚು, ಐವರ ಬಂಧನ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಜೂನ್ 14ರಿಂದ 24ರ ಅವಧಿಯಲ್ಲಿ ಚುನಾವಣೆ ನಡೆಸಲಾಗುವುದು. ಇನ್ನೊಂದು ವಾರದಲ್ಲಿ ದಿನಾಂಕ ಪ್ರಕಟಿಸಿ, ಅಧಿಸೂಚನೆ ಹೊರಡಿಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಸಿ.ಎಸ್. ಸಂಗ್ರೇಶಿ ಹೇಳಿದರು.
.ಗ್ರೇಟರ್ ಬೆಂಗಳೂರು ಪ್ರಾಧಿಕಾರ: ಜೂನ್ ಮೂರನೇ ವಾರ ಚುನಾವಣೆ .
ತೆಲುಗಿನ ಖ್ಯಾತ ನಟ ರಾಮ್ಚರಣ್ ನಟನೆಯ ‘ಪೆದ್ದಿ’ ಸಿನಿಮಾವನ್ನು ಕರ್ನಾಟಕದಲ್ಲಿ ‘ಜೇಮ್ಸ್’ ಸಿನಿಮಾ ನಿರ್ಮಾಪಕ ಕಿಶೋರ್ ಪತ್ತಿಕೊಂಡ ವಿತರಣೆ ಮಾಡಲಿದ್ದಾರೆ.
.ಕಿಶೋರ್ ಫಿಲ್ಮ್ಸ್ ತೆಕ್ಕೆಗೆ ನಟ ರಾಮ್ಚರಣ್ ನಟನೆಯ ‘ಪೆದ್ದಿ’.
ಸತತ ಮೂರು ಪಂದ್ಯಗಳಲ್ಲಿ ಬಲಾಢ್ಯ ತಂಡಗಳನ್ನು ಸದೆಬಡಿದು ಭರ್ತಿ ಆತ್ಮವಿಶ್ವಾಸದಲ್ಲಿರುವ ಗುಜರಾತ್ ಟೈಟನ್ಸ್ ತಂಡವು ಶನಿವಾರ ಇಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಹಣಾಹಣಿ ನಡೆಸಲಿದೆ.
.IPL 2026 | ಗಿಲ್ ಪಡೆಗೆ ಪರಾಗ್ ಬಳಗದ ಸವಾಲು.
ಹೊರ್ಮುಜ್ ಜಲಸಂಧಿಯ ಬಳಿ ಇರಾನ್ನ ಸರಕು ಸಾಗಣೆ ಹಡಗಿನ ಮೇಲೆ ಗುರುವಾರ ಮಧ್ಯರಾತ್ರಿ ಅಮೆರಿಕ ದಾಳಿ ಮಾಡಿದೆ. ಘಟನೆಯಲ್ಲಿ 10 ನಾವಿಕರು ಗಾಯಗೊಂಡಿದ್ದು, 5 ಜನರು ಕಣ್ಮರೆಯಾಗಿದ್ದಾರೆ ಎಂದು ಇರಾನ್ ಅಧಿಕಾರಿಗಳು ಹೇಳಿದ್ದಾರೆ.
.ಹೊರ್ಮುಜ್ ಬಳಿ ಅಮೆರಿಕ ದಾಳಿಯಲ್ಲಿ 10 ನಾವಿಕರಿಗೆ ಗಾಯ, 5 ಜನ ಕಣ್ಮರೆ: ಇರಾನ್ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.