ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಾರ, 11 ಮೇ 2023: ಈ ದಿನದ ಪ್ರಮುಖ 10 ಸುದ್ದಿಗಳು

ಚುನಾವಣೆ, ರಾಜ್ಯ, ರಾಷ್ಟ್ರೀಯ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು
Published 11 ಮೇ 2023, 12:32 IST
Last Updated 11 ಮೇ 2023, 12:32 IST
ಅಕ್ಷರ ಗಾತ್ರ
Introduction

ಸು‍ಪ್ರೀಂ ಕೋರ್ಟ್‌ನಲ್ಲಿ ಕೇಜ್ರಿವಾಲ್‌ ಸರ್ಕಾರಕ್ಕೆ ಜಯ, ಕೋವಿಡ್‌ ಸಕ್ರಿಯ ಪ್ರಕರಣ ಸಂಖ್ಯೆ ಇಳಿಕೆ, ಮಣಿಪುರ ಹಿಂಸಾಚಾರ, ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ರಿಲೀಫ್, ಅಸ್ಸಾಂನಲ್ಲಿ ನಗದು ರಹಿತ ಆರೋಗ್ಯ ಯೋಜನೆ ಪ್ರಾರಂಭ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು...

1

ಕೇಂದ್ರ Vs ದೆಹಲಿ ಸರ್ಕಾರ: ಸು‍ಪ್ರೀಂ ಕೋರ್ಟ್‌ನಲ್ಲಿ ಕೇಜ್ರಿವಾಲ್‌ ಸರ್ಕಾರಕ್ಕೆ ಜಯ

ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ಹಾಗೂ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ಹಾಗೂ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್

ದೆಹಲಿ ಸರ್ಕಾರ ಹಾಗೂ ಲೆಫ್ಟಿನೆಂಟ್‌ ಗವರ್ನರ್‌ ವಿವಾದ ಸಂಬಂಧ ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ಪ್ರಕಟಿಸಿದ್ದು, ಚುನಾಯಿತ ಸರ್ಕಾರಕ್ಕೆ ಆಡಳಿತಾತ್ಮಕ ವಿಷಯಗಳ ಬಗ್ಗೆ ಅಧಿಕಾರ ಇರಬೇಕು ಎಂದು ತೀರ್ಪು ನೀಡಿದೆ.

2

ಕೋವಿಡ್‌–19: ಸಕ್ರಿಯ ಪ್ರಕರಣ 19,613ಕ್ಕೆ ಇಳಿಕೆ

ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,690 ಹೊಸ ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ, ಸಕ್ರಿಯ ಕೋವಿಡ್‌ ಪ್ರಕರಣಗಳ ಸಂಖ್ಯೆ 21,406 ದಿಂದ 19,613 ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.

3

ಮಣಿಪುರ ಹಿಂಸಾಚಾರ | 3,583 ಮಂದಿಗೆ ಮಿಜೋರಾಂನಲ್ಲಿ ತಾತ್ಕಾಲಿಕ ಆಶ್ರಯ

ಹಿಂಸಾಚಾರ ಪೀಡಿತ ಮಣಿಪುರ
ಹಿಂಸಾಚಾರ ಪೀಡಿತ ಮಣಿಪುರ

ಹಿಂಸಾಚಾರದಿಂದ ಕಂಗೆಟ್ಟಿದ್ದ ಮಣಿಪುರದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದು, ಇಲ್ಲಿಯವರೆಗೆ ಸುಮಾರು 3,583 ಮಂದಿಗೆ ಮಿಜೋರಾಂನಲ್ಲಿ ತಾತ್ಕಾಲಿಕ ಆಶ್ರಯ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

4

ನಗದು ರಹಿತ ಆರೋಗ್ಯ ಯೋಜನೆ ಪ್ರಾರಂಭಿಸಿದ ಅಸ್ಸಾಂ ಸರ್ಕಾರ

ಹಿಮಂತ ಬಿಸ್ವಾ ಶರ್ಮಾ
ಹಿಮಂತ ಬಿಸ್ವಾ ಶರ್ಮಾ

ಅಸ್ಸಾಂ ಸರ್ಕಾರವು ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂಪಾಯಿಗಳವರೆಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ನೀಡುವ ಆರೋಗ್ಯ ಯೋಜನೆಯನ್ನು ಬುಧವಾರ ಪ್ರಾರಂಭಿಸಿದೆ.

5

ಸ್ವರ್ಣ ಮಂದಿರದ ಬಳಿ ಮತ್ತೊಂದು ಸ್ಫೋಟ: ವಾರದಲ್ಲಿ ಮೂರನೇ ಪ್ರಕರಣ

ಸ್ವರ್ಣ ಮಂದಿರ
ಸ್ವರ್ಣ ಮಂದಿರ

ಅಮೃತಸರದ ಸ್ವರ್ಣ ಮಂದಿರದ ಸಮೀಪ ಗುರುವಾರ ಭಾರಿ ಸ್ಫೋಟದ ಸದ್ದು ಕೇಳಿ ಬಂದಿದೆ. ಇದು ಒಂದು ವಾರದಲ್ಲಿ ನಡೆದ ಮೂರನೇ ಸ್ಫೋಟವಾಗಿದೆ. ಘಟನೆ ಸಂಬಂಧ ಐವರನ್ನು ಬಂಧಿಸಲಾಗಿದೆ.

6

ಅಘಾಡಿ ಸರ್ಕಾರ ಮರುಸ್ಥಾಪನೆ ಅಸಾಧ್ಯ: ಶಿಂದೆ ಸರ್ಕಾರಕ್ಕೆ ಸುಪ್ರೀಂ ಕೋರ್ಟಲ್ಲಿ ರಿಲೀಫ್

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂದೆ ಮತ್ತು ದೇವೇಂದ್ರ ಪಡ್ನವೀಸ್‌
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂದೆ ಮತ್ತು ದೇವೇಂದ್ರ ಪಡ್ನವೀಸ್‌

ಮಹಾರಾಷ್ಟ್ರದ ಮಹಾ ವಿಕಾಸ್‌ ಅಘಾಡಿ ಸರ್ಕಾರವನ್ನು ಮರುಸ್ಥಾಪನೆ ಮಾಡಲು ಸಾಧ್ಯವಿ‌ಲ್ಲ ಎಂದು ಸುಪ್ರೀಂ ಕೋರ್ಟ್‌ ಗುರುವಾರ ತೀರ್ಪು ನೀಡಿದೆ.

7

ವಿರೋಧ ಪಕ್ಷಗಳ ಜೋಡೊ ಮಿಷನ್‌: ಉದ್ದವ್‌ ಭೇಟಿಯಾದ ನಿತೀಶ್‌

ನಿತೀಶ್‌ ಕುಮಾರ್‌
ನಿತೀಶ್‌ ಕುಮಾರ್‌

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ದವ್‌ ಠಾಕ್ರೆ ಅವರನ್ನು ಗುರುವಾರ ಭೇಟಿಯಾಗಿ ಮಹತ್ವದ ರಾಜಕೀಯ ಮಾತುಕತೆ ನಡೆಸಿದ್ದಾರೆ.

8

ರಾಜ್ಯದಲ್ಲಿ ಮಳೆ ಮುಂದುವರಿಕೆ: ಮೂರು ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ಘೋಷಣೆ

ಕೊಪ್ಪಳ ತಾಲ್ಲೂಕಿನ ಇಂದಿರಾ ನಗರ ತಾಂಡದಲ್ಲಿ ಬುಧವಾರ ಮಳೆಯಿಂದ ಹಾರಿಹೋದ ತಗಡಿನ ಶೀಟ್‌ಗಳು
ಕೊಪ್ಪಳ ತಾಲ್ಲೂಕಿನ ಇಂದಿರಾ ನಗರ ತಾಂಡದಲ್ಲಿ ಬುಧವಾರ ಮಳೆಯಿಂದ ಹಾರಿಹೋದ ತಗಡಿನ ಶೀಟ್‌ಗಳು–ಪ್ರಜಾವಾಣಿ ಚಿತ್ರ

ರಾಜ್ಯದಾದ್ಯಂತ ಗುರುವಾರವೂ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ಮೂರು ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ಘೋಷಿಸಿದೆ. 

9

ಸೋಲುವ ಭಯದಿಂದಾಗಿ ಬಿಜೆಪಿಯಿಂದ ಹಣ ಹಂಚಿಕೆ; ಜಗದೀಶ ಶೆಟ್ಟರ್

ಜಗದೀಶ ಶೆಟ್ಟರ್
ಜಗದೀಶ ಶೆಟ್ಟರ್

‘ಬಿಜೆಪಿಯವರು ಸೋಲುವ ಭಯದಿಂದ ಹು-ಧಾ ಸೆಂಟ್ರಲ್‌ ಕ್ಷೇತ್ರದ ಕೊಳೆಗೇರಿಗಳಲ್ಲಿ ₹500–₹1,000ವರೆಗೆ ಹಣ ಹಂಚಿದ್ದಾರೆ. ನಾನು ಬಿಜೆಪಿಯಲ್ಲಿದ್ದಾಗ ಎಂದಿಗೂ ಈ ರೀತಿ ಮಾಡಿಲ್ಲ’ ಎಂದು ಹು–ಧಾ ಸೆಂಟ್ರಲ್‌ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಗದೀಶ ಶೆಟ್ಟರ್ ಆರೋಪಿಸಿದರು.

10

ಆಡಿಯೊ ವಿವಾದದ ಬೆನ್ನಿಗೇ ತಮಿಳುನಾಡು ಸಚಿವ ತ್ಯಾಗರಾಜನ್‌ ಖಾತೆ ಬದಲಾವಣೆ

ಪಳನಿವೇಲ್‌ ತ್ಯಾಗರಾಜನ್‌
ಪಳನಿವೇಲ್‌ ತ್ಯಾಗರಾಜನ್‌

ತಮಿಳುನಾಡು ಸಚಿವ ಪಳನಿವೇಲ್ ತ್ಯಾಗರಾಜನ್ ಅವರನ್ನು ಮಹತ್ವದ ಹಣಕಾಸು ಮತ್ತು ಮಾನವ ಸಂಪನ್ಮೂಲ ಖಾತೆಯಿಂದ ಗುರುವಾರ ಬಿಡುಗಡೆ ಮಾಡಲಾಗಿದ್ದು, ಮಾಹಿತಿ ತಂತ್ರಜ್ಞಾನ ಇಲಾಖೆಯನ್ನು ವಹಿಸಲಾಗಿದೆ.