ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ವಿದ್ಯಾಮಾನಗಳಿಗೆ ಸಂಬಂಧಪಟ್ಟ ಈ ದಿನದ ಟಾಪ್ 10 ಸುದ್ದಿಗಳು

ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯಿಂದ ಮತದಾರರ ಹೆಸರುಗಳನ್ನು ಅಳಿಸಿ ಹಾಕಿರುವುದರಿಂದ ಬಿಜೆಪಿಗೆ ಗೆಲುವಾಗಿದೆ' ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಟೀಕಿಸಿದ್ದಾರೆ. ಆ ಮೂಲಕ ಬಂಗಾಳದಲ್ಲಿ ಚೊಚ್ಚಲ ಬಾರಿಗೆ ಸರ್ಕಾರ ರಚಿಸಿರುವ ಬಿಜೆಪಿಯ ಗೆಲುವಿನ ಬಗ್ಗೆ ಸಂದೇಹವನ್ನು ವ್ಯಕ್ತಪಡಿಸಿದ್ದಾರೆ.
.ಬಂಗಾಳದಲ್ಲಿ ಮತದಾರರನ್ನು ಅಳಿಸಿ ಹಾಕಿರುವುದರಿಂದ ಬಿಜೆಪಿಗೆ ಗೆಲುವು: ತರೂರ್.
‘ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರದಲ್ಲಿ ಒಳಜಗಳವೇ ತುಂಬಿಹೋಗಿದ್ದು, ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ. ಕಾರ್ಯಕ್ರಮ ನಿಮಿತ್ತ ಭಾನುವಾರ ಬೆಂಗಳೂರಿಗೆ ಬಂದಿದ್ದ ಮೋದಿ ಅವರಿಗೆ ಇಲ್ಲಿನ ಎಚ್ಎಎಲ್ ವಿಮಾನ ನಿಲ್ದಾಣ ಆವರಣದಲ್ಲಿ ಬಿಜೆಪಿ ರಾಜ್ಯ ಘಟಕಅಭಿನಂದನೆ ಕಾರ್ಯಕ್ರಮ ಹಮ್ಮಿ ಕೊಂಡಿತ್ತು. ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೆರಿಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿದ ಕಾರಣಕ್ಕೆ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಮೋದಿ ಅವರು ಮಾತನಾಡಿದರು.
.ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಲ್ಲೆಲ್ಲಾ ಸರ್ಕಾರ ಅಭದ್ರ; ಪ್ರಧಾನಿ ಮೋದಿ ಲೇವಡಿ.
ತಮಿಳುನಾಡಿನ ಮಾಜಿ ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ಡಿಎಂಕೆ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ.
.ಉದಯನಿಧಿ ಸ್ಟಾಲಿನ್ ಡಿಎಂಕೆ ಶಾಸಕಾಂಗ ಪಕ್ಷದ ನಾಯಕ.
‘ಪೆಟ್ರೋಲ್, ಅನಿಲ, ಡೀಸೆಲ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬಳಕೆಯನ್ನು ಮಿತಗೊಳಿಸಿ. ಅಗತ್ಯವಿದ್ದರೆ ಮಾತ್ರವೇ ಇವುಗಳನ್ನು ಬಳಸಬೇಕು. ಇದು ಈ ಹೊತ್ತಿನ ಜರೂರು. ಭಾರತವು ಇಂದು ಜಗತ್ತಿನಲ್ಲಿಯೇ ಅತ್ಯಂತ ಇಂಧನ ಬಿಕ್ಕಟ್ಟು ಎದುರಿಸುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಲ್ಲಿ ಮನವಿ ಮಾಡಿದರು.
.ಪ್ಲೀಸ್ ಪೆಟ್ರೋಲ್, ಡಿಸೇಲ್ ಬಳಕೆ ತಗ್ಗಿಸಿ, ಇದು ಭಾರಿ ಇಂಧನ ಬಿಕ್ಕಟ್ಟು– ಮೋದಿ.
ಜಾಗತಿಕ ಮಟ್ಟದಲ್ಲಿನ ಸಂಘರ್ಷಗಳ ಪರಿಣಾಮವಾಗಿ ಎಫ್ಎಂಸಿಜಿ ಕಂಪನಿಗಳ ಲಾಭದ ಪ್ರಮಾಣ ಕಡಿಮೆ ಆಗುತ್ತಿದ್ದು, ಕಂಪನಿಗಳು ಉತ್ಪನ್ನಗಳ ಬೆಲೆಯನ್ನು ಅಳೆದು–ತೂಗಿ ಹೆಚ್ಚು ಮಾಡಲು ಸಿದ್ಧತೆ ನಡೆಸಿವೆ.
.ಎಫ್ಎಂಸಿಜಿ: ಬೆಲೆ ಹೆಚ್ಚಳಕ್ಕೆ ಕಂಪನಿಗಳು ಸಿದ್ಧತೆ!.
ಸಿನಿಮಾ ಜಗತ್ತಿನಿಂದ ಜನಸೇವೆಯ ಕಡೆಗೆ ಪ್ರಜಾಸತ್ತಾತ್ಮಕ ಪಯಣ ಆರಂಭಿಸಿರುವ ವಿಜಯ್ ಜತೆ ನಿಕಟವಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
.ಫ್ಯಾಸಿಸ್ಟರ ವಿರುದ್ಧ ಹೋರಾಡೋಣ: ಮುಖ್ಯಮಂತ್ರಿ ಸಿದ್ದರಾಮಯ್ಯ.
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಮಹತ್ವದ ಕ್ರಮ ಕೈಗೊಂಡಿದ್ದು, ಮುಂದಿನ ವರ್ಷದೊಳಗೆ ಎಲ್ಲ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ ಜಾರಿಗೆ ತರಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
.ಎಲ್ಲ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ ಜಾರಿ: ಮಧು ಬಂಗಾರಪ್ಪ.
ಷಿ ಜಿನ್ಪಿಂಗ್ ಅವರ ಆಹ್ವಾನದ ಮೇರೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೇ 13ರಿಂದ ಮೂರು ದಿನಗಳವರೆಗೆ ಚೀನಾಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ಸೋಮವಾರ ಹೇಳಿದ್ದಾರೆ. ಕಳೆದ ಒಂಬತ್ತು ವರ್ಷಗಳಲ್ಲಿ ಅಮೆರಿಕ ಅಧ್ಯಕ್ಷರ ಮೊದಲ ಚೀನಾ ಭೇಟಿ ಇದಾಗಿದೆ.
.ಚೀನಾಗೆ ಭೇಟಿ ನೀಡಲಿರುವ ಟ್ರಂಪ್: ದ್ವಿಪಕ್ಷೀಯ ಮಾತುಕತೆ.
‘ಇಡೀ ಜಗತ್ತಿಗೆ ಮಾಹಿತಿತಂತ್ರಜ್ಞಾನ ಸೇವೆ ಒದಗಿಸುವುದಕ್ಕೆ ಮಾತ್ರವೇ ಬೆಂಗಳೂರು ಹೆಸರುವಾಸಿಯಲ್ಲ. ಭಾರತೀಯ ಆಧ್ಯಾತ್ಮಿಕ ಪರಂಪರೆಯನ್ನೂ ಈ ನಗರ ಪೊರೆಯುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.
.ಆಧ್ಯಾತ್ಮಿಕ ಪರಂಪರೆ ಪೊರೆಯುತ್ತಿರುವ ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ.
ಇಂಡಿಯನ್ ಪ್ರೀಮಿಯರ್ ಲೀಗ್ (ಭಾನುವಾರ) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎರಡು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.
.IPL Stats: ಕೃಣಾಲ್ ಮಿಂಚು, ಭುವಿ ಸಿಕ್ಸರ್; ಆರ್ಸಿಬಿ ಟಾಪರ್, ಮುಂಬೈ ನಿರ್ಗಮನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.