ರಾಷ್ಟ್ರೀಯ, ರಾಜ್ಯ, ವಿದೇಶ, ಸಿನಿಮಾ, ಕ್ರೀಡೆಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

ನವದೆಹಲಿ: 13 ವರ್ಷಗಳಿಂದ ಕೋಮಾದಲ್ಲಿದ್ದ ಗಾಜಿಯಾಬಾದ್ನ ಹರೀಶ್ ರಾಣಾ ಎಂಬವರ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಕಳೆದವಾರವಷ್ಟೇ ಅನುಮತಿ ನೀಡಿದೆ. ಅದರಂತೆ ಹರೀಶ್ ಅವರಿಗೆ ಜೀವನದ ಜಂಜಾಟದಿಂದ 'ಮುಕ್ತಿ' ನೀಡುವ ವೈದ್ಯಕೀಯ ಪಕ್ರಿಯೆ ದೆಹಲಿಯಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್) ಮುಂದಿನ ದಿನಗಳಲ್ಲಿ ನಡೆಯಲಿದೆ.
.ದಯಾಮರಣ: ಸಾವಿನ ಮನೆಯತ್ತ ಹೊರಟ ಹರೀಶ್ ರಾಣಾಗೆ ಕಂಬನಿ ಮಿಡಿದ ಕುಟುಂಬ.
ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಘೋಷಣೆಯಾದ ಬೆನ್ನಲ್ಲೇ, 144 ಅಭ್ಯರ್ಥಿಗಳ ತನ್ನ ಮೊದಲ ಪಟ್ಟಿಯನ್ನು ಬಿಜೆಪಿ ಸೋಮವಾರ ಬಿಡುಗಡೆ ಮಾಡಿದೆ. ಭವಾನಿಪುರ ಕ್ಷೇತ್ರವನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿನಿಧಿಸುತ್ತಿದ್ದು, ಈ ಕ್ಷೇತ್ರದಿಂದ ಸುವೇಂದು ಅಧಿಕಾರಿ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.
.ಪ. ಬಂಗಾಳ ಚುನಾವಣೆಗೆ BJP ಅಭ್ಯರ್ಥಿಗಳ ಮೊದಲ ಪಟ್ಟಿ; 2 ಕಡೆ ಸುವೇಂದು ಸ್ಪರ್ಧೆ.
ನವದೆಹಲಿ: ಗೃಹಬಳಕೆಯ ಅಡುಗೆ ಅನಿಲ ಸರಬರಾಜಿನಲ್ಲಿ ದುರುಪಯೋಗವನ್ನು ತಡೆಗಟ್ಟಲು ಮತ್ತು ವಿತರಣೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ಗ್ರಾಹಕರಿಗೆ ಬಯೊಮೆಟ್ರಿಕ್ ಆಧಾರ್ ಇ-ಕೆವೈಸಿಯನ್ನು ಕಡ್ಡಾಯಗೊಳಿಸಿದೆ.
.ಎಲ್ಪಿಜಿ ಗ್ರಾಹಕರಿಗೆ ಬಯೊಮೆಟ್ರಿಕ್ ದೃಢೀಕರಣ ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರ.
ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿ ನಿಗದಿಯಾದ ಬೆನ್ನಲ್ಲೇ ಚುನಾವಣಾ ಆಯೋಗವು ಪೊಲೀಸ್ ಮಹಾನಿರ್ದೇಶಕ ಪಿಯೂಷ್ ಪಾಂಡೆ ಮತ್ತು ಕೋಲ್ಕತ್ತ ನಗರ ಪೊಲೀಸ್ ಆಯುಕ್ತ ಸುಪ್ರತಿಮ್ ಸರ್ಕಾರ್ ಅವರನ್ನು ತಕ್ಷದಿಂದ ಹುದ್ದೆಯಿಂದ ತೆರವುಗೊಳಿಸಿ ಆದೇಶಿಸಿದೆ.
.ಪ.ಬಂಗಾಳ ಚುನಾವಣೆ: DGP ಪಾಂಡೆ, ಕೋಲ್ಕತ್ತ ಪೊಲೀಸ್ ಆಯುಕ್ತರ ತೆರವುಗೊಳಿಸಿದ EC.
ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷದ ಕಾರಣದಿಂದಾಗಿ 5,522 ವಿಮಾನಗಳ ಸಂಚಾರ ರದ್ದಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಅವರು ರಾಜ್ಯಸಭೆಗೆ ಸೋಮವಾರ ಮಾಹಿತಿ ನೀಡಿದ್ದಾರೆ.
.ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ 5,522 ವಿಮಾನಗಳ ಸಂಚಾರ ರದ್ದು: ಕೇಂದ್ರ.
ಟೆಲ್ ಅವಿವ್: ಇರಾನ್ನ ದಿವಂಗತ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಬಳಸುತ್ತಿದ್ದ ವಿಮಾನವನ್ನು ಟೆಹ್ರಾನ್ನ ಮೆಹ್ರಾಬಾದ್ ನಿಲ್ದಾಣದಲ್ಲಿ ನಾಶಪಡಿಸಿರುವುದಾಗಿ ಇಸ್ರೇಲ್ ರಕ್ಷಣಾ ಪಡೆ ಸೋಮವಾರ (ಮಾರ್ಚ್.16) ತಿಳಿಸಿದೆ.
.ಇರಾನ್ನ ಅಯತೊಲ್ಲಾ ಅಲಿ ಖಮೇನಿ ಬಳಸುತ್ತಿದ್ದ ವಿಮಾನ ನಾಶಮಾಡಿದ್ದೇವೆ: ಇಸ್ರೇಲ್.
ಬೆಂಗಳೂರು: ಶಾಸಕರು ಕೇಳಿದ ಲಿಖಿತ ಪ್ರಶ್ನೆಗಳಿಗೆ ಉತ್ತರಿಸಲು ಸಚಿವರು, ಕಾರ್ಯದರ್ಶಿಗಳು ವಿಫಲವಾಗಿದ್ದಾರೆಂದು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನಗೊಂಡು ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಕಲಾಪ ನಡೆಸದೆ ಪೀಠದಿಂದ ಎದ್ದು ಹೋದ ಪ್ರಸಂಗ ವಿಧಾನಸಭೆಯಲ್ಲಿ ಸೋಮವಾರ ನಡೆಯಿತು.
.ಲಿಖಿತ ಪ್ರಶ್ನೆಗಳಿಗೆ ಉತ್ತರಿಸಲು ಸಚಿವರು ವಿಫಲ: ಕಲಾಪ ನಡೆಸದೆ ಹೊರನಡೆದ ಸ್ಪೀಕರ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಅವರು ಆರ್ಸಿಬಿಯ ಸಾರ್ವಕಾಲಿಕ ಶ್ರೇಷ್ಠ ಹನ್ನೊಂದರ ಬಳಗವನ್ನು ಪ್ರಕಟಿಸಿದ್ದಾರೆ. ದಿನೇಶ್ ಕಾರ್ತಿಕ್ ಪ್ರಕಟಿಸಿರುವ ಸಾರ್ವಕಾಲಿಕ ಬೆಂಗಳೂರು ತಂಡದಲ್ಲಿ ವಿರಾಟ್ ಕೊಹ್ಲಿಗೆ ನಾಯಕನ ಪಟ್ಟ ನೀಡಿಲ್ಲ. ಬದಲಾಗಿ ರಜತ್ ಪಾಟೀದಾರ್ಗೆ ತಂಡದ ನಾಯಕತ್ವ ನೀಡಿದ್ದಾರೆ.
.RCB: ಡಿಕೆ ಪ್ರಕಟಿಸಿದ ಆರ್ಸಿಬಿಯ ನೆಚ್ಚಿನ ತಂಡದಲ್ಲಿ ವಿರಾಟ್ಗಿಲ್ಲ ನಾಯಕನ ಪಟ್ಟ.
ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ನಟನೆಯ ‘ಲ್ಯಾಂಡ್ಲಾರ್ಡ್’ ಚಿತ್ರವು ಜ.23 ರಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು. ಇದೀಗ ಒಟಿಟಿಯಲ್ಲಿ ಪ್ರಸಾರವಾಗಲಿದೆ. ರಾಜ್ ಬಿ ಶೆಟ್ಟಿ, ರಿಥನ್ಯಾ ವಿಜಯ್, ಉಮಾಶ್ರೀ, ಭಾವನಾ ರಾವ್, ಸಂಪತ್ ಮೈತ್ರೇಯ ಅವರು ನಟಿಸಿರುವ ಈ ಚಿತ್ರವು ಮಾರ್ಚ್ 19ಕ್ಕೆ ಜೀ5ನಲ್ಲಿ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
.ದುನಿಯಾ ವಿಜಯ್–ರಚಿತಾ ರಾಮ್ ನಟನೆಯ ‘ಲ್ಯಾಂಡ್ಲಾರ್ಡ್’ ಒಟಿಟಿಗೆ.
ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ಅವರ ಪುತ್ರಿ ಅರ್ಹಾ, ಚೆಸ್ ಆಟದಲ್ಲಿ ಅತಿ ಕಿರಿಯ ತರಬೇತುಗಾರ್ತಿ ಎಂಬ ಅಪರೂಪದ ವಿಶ್ವ ದಾಖಲೆಯ ಮೂಲಕ ಅಂತರರಾಷ್ಟ್ರೀಯ ಮನ್ನಣೆ ಗಳಿಸಿದ್ದಾರೆ. ಅಲ್ಲು ಅರ್ಜುನ್ ಮತ್ತು ಸ್ನೇಹಾ ರೆಡ್ಡಿ ಅವರ 5 ವರ್ಷದ ಪುತ್ರಿ ಅರ್ಹಾ ವಿಶ್ವ ದಾಖಲೆಯೊಂದನ್ನು ಬರೆದಿದ್ದಾರೆ. ಚಿಕ್ಕ ವಯಸ್ಸಿನಿಂದಲೇ ಚೆಸ್ನಲ್ಲಿ ಅತೀವ ಆಸಕ್ತಿ ಹೊಂದಿದ್ದ ಆರ್ಹಾ, ಚೆಸ್ ಪಜಲ್ನ 30 ಕಠಿಣವಾದ ಹಂತಗಳನ್ನು ಪೂರ್ಣಗೊಳಿಸಿದ್ದಾರೆ.
.ಚೆಸ್ನಲ್ಲಿ ವಿಶ್ವ ದಾಖಲೆ ಬರೆದ ಅಲ್ಲು ಅರ್ಜುನ್ ಅವರ 5 ವರ್ಷದ ಪುತ್ರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.