ರಾಜ್ಯ, ರಾಷ್ಟ್ರೀಯ, ವಿದೇಶ ಸೇರಿದಂತೆ ಈ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ.....

ನವದೆಹಲಿ: ಜೂನ್ 21ಕ್ಕೆ ನಿಗದಿಯಾಗಿರುವ ‘ನೀಟ್-ಯುಜಿ’ 2026ರ ಮರುಪರೀಕ್ಷೆಯನ್ನು ಕಂಪ್ಯೂಟರ್ ಮೂಲಕ (ಕಂಪ್ಯೂಟರ್ ಬೇಸ್ಡ್ ಟೆಸ್ಟ್– ಸಿಬಿಟಿ) ನಡೆಸಲು ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ತಕ್ಷಣ ಪರಿಗಣಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
.ನೀಟ್ ಮರುಪರೀಕ್ಷೆಗೆ ಸಿಬಿಟಿ ಮಾದರಿ: ಸುಪ್ರೀಂ ಕೋರ್ಟ್ ನಕಾರ.
ದಾವಣಗೆರೆ: ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿ ವರಿಷ್ಠರಿಗೆ ಸ್ಥಳೀಯ ಮುಖಂಡರು ಪತ್ರ ಬರೆದಿದ್ದಾರೆ.
.ಪಕ್ಷ ವಿರೋಧಿ ಚಟುವಟಿಕೆ ಆಡಿಯೊ ಬಹಿರಂಗ: ಜಮೀರ್ ವಿರುದ್ಧ ಶಿಸ್ತುಕ್ರಮಕ್ಕೆ ಆಗ್ರಹ.
ಚೆನ್ನೈ: ಕರ್ನಾಟಕ ಕೆಡರ್ನ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ, ಬಿಜೆಪಿ ತೊರೆಯಲಿದ್ದಾರೆ; ಮಂಗಳವಾರ ಅವರು ಪಕ್ಷಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. ಆ ಮೂಲಕ ಪಕ್ಷದೊಂದಿಗಿನ ಅವರ 6 ವರ್ಷಗಳ ಸಖ್ಯ ಕೊನೆಗೊಳ್ಳಲಿದೆ.
.ಬಿಜೆಪಿಗೆ ಅಣ್ಣಾಮಲೈ ಗುಡ್ಬೈ? ನಾಳೆ ರಾಜೀನಾಮೆ ಸಾಧ್ಯತೆ.
ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ (2026–27) ರಾಜ್ಯ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗೆ ನಿಗದಿಪಡಿಸಿದ್ದ ಅವಧಿಯನ್ನು ಜೂನ್ 30ರವರೆಗೆ ವಿಸ್ತರಿಸಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ.
.ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಅವಧಿ ಜೂನ್ 30ರವರೆಗೆ ವಿಸ್ತರಣೆ.
ನವದೆಹಲಿ: ನೀಟ್ ಸೇರಿದಂತೆ ಹಲವು ಪರೀಕ್ಷೆಗಳಲ್ಲಿ ನಡೆದ ಅಕ್ರಮಗಳ ವಿರುದ್ಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಶಾಂತಿಯುತ ಪ್ರತಿಭಟನೆ ನಡೆಸಲು ‘ಕಾಕ್ರೋಚ್ ಜನತಾ ಪಾರ್ಟಿ’ ಸ್ಥಾಪಕ ಅಭಿಜೀತ್ ದೀಪ್ಕೆ ಜೂನ್ 6 ರಂದು ಅಮೆರಿಕದಿಂದ ಭಾರತಕ್ಕೆ ಮರಳುವ ನಿರೀಕ್ಷೆಯಿದೆ.
.GenZ ಪ್ರತಿಭಟನೆಗೆ ಸಜ್ಜು: ಜೂನ್ 6ರಂದು ಅಮೆರಿಕದಿಂದ ಭಾರತಕ್ಕೆ ಮರಳಲಿರುವ ದೀಪ್ಕೆ.
ಕಲಬುರಗಿ: ‘ಪ್ರಧಾನಿ ನರೇಂದ್ರ ಮೋದಿ ಬರೀ ಮಾತಿನ ಮಲ್ಲ. ಅವರಿಗೆ ಜನರ ಕಾಳಜಿ ಇಲ್ಲ. ಕೇಂದ್ರ ಸರ್ಕಾರ ಎಲ್ಲ ಕ್ಷೇತ್ರಗಳಲ್ಲೂ ವಿಫಲವಾಗಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.
.ಪ್ರಧಾನಿ ಮೋದಿ ಮಾತಿನ ಮಲ್ಲ, ಅವರಿಗೆ ಜನರ ಕಾಳಜಿ ಇಲ್ಲ: ಮಲ್ಲಿಕಾರ್ಜುನ ಖರ್ಗೆ.
ಅಹಮದಾಬಾದ್: 2025ರಲ್ಲಿ ಆರ್ಸಿಬಿ ಚೊಚ್ಚಲ ಟ್ರೋಫಿ ಗೆದ್ದ ಬಳಿಕ ಬೆಂಗಳೂರಿನಲ್ಲಿ ವಿಜಯೋತ್ಸವದ ಸಂಭ್ರಮದ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ, 11 ಮಂದಿ ಆರ್ಸಿಬಿ ಅಭಿಮಾನಿಗಳು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ, ಈ ಬಾರಿ ಆರ್ಸಿಬಿ ಚಾಂಪಿಯನ್ ಆಗಿದ್ದರೂ ನಗರದಲ್ಲಿ ವಿಜಯೋತ್ಸವದ ಮೆರವಣಿಗೆ ನಡೆಸದಿರಲು ಆರ್ಸಿಬಿ ಫ್ರಾಂಚೈಸಿ ನಿರ್ಧರಿಸಿದೆ.
.ಈ ಬಾರಿ ಬೆಂಗಳೂರಿನಲ್ಲಿ ನಡೆಯುತ್ತಾ RCB ವಿಜಯೋತ್ಸವ? ಇಲ್ಲಿದೆ ಮಾಹಿತಿ.
ಬೆಂಗಳೂರು: ‘ಭಾರತೀಯರಲ್ಲದ ವಿದೇಶಿಯರಿಗೆ ಸುಲಭವಾಗಿ ಆಧಾರ್ ಕಾರ್ಡ್ ಮಾಡಿಕೊಡುತ್ತಿರುವ ವ್ಯವಸ್ಥೆಯನ್ನು ಗಮನಿಸಿದರೆ ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂಬುದೇ ತಿಳಿಯುತ್ತಿಲ್ಲ’ ಎಂದು ಹೈಕೋರ್ಟ್ ತೀವ್ರ ಆತಂಕ ವ್ಯಕ್ತಪಡಿಸಿದೆ.
.ನಕಲಿ ಆಧಾರ್ ಹಾವಳಿ; ದೇಶದ ಹಿತಾಸಕ್ತಿಗೆ ವಿರುದ್ಧವಾದ ಕೆಲಸ: ಹೈಕೋರ್ಟ್ ಕಳವಳ.
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಪಿಲಾತಬೆಟ್ಟು ಎಂಬಲ್ಲಿ ಯುವಕನೊಬ್ಬ ಬಿಯರ್ ಬಾಟಲಿಯಿಂದ ಇರಿದು ಸ್ವಂತ ಚಿಕ್ಕಪ್ಪನನ್ನೇ ಹತ್ಯೆ ಮಾಡಿದ್ದಾನೆ. ಪಿಲಾತಬೆಟ್ಟುವಿನ ಮಧುಸೂದನ (37) ಕೊಲೆಯಾದವರು. ಅವರ ಅಣ್ಣ ಕೇಶವ ಅವರ ಮಗ ರಾಹುಲ್ ಕೊಲೆ ಆರೋಪಿ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
.ಬಂಟ್ವಾಳದಲ್ಲಿ ಬಿಯರ್ ಬಾಟಲಿಯಿಂದ ಇರಿದು ಚಿಕ್ಕಪ್ಪನ ಕೊಲೆ: ಯುವಕನ ಬಂಧನ.
ಮಂಗಳೂರು: ‘ಸಾಮಾಜಿಕ ಜಾಲತಾಣ ನೋಡಿ ಯಾರೂ ಅಧಿಕಾರ ನೀಡುವುದಿಲ್ಲ. ಕಾರ್ಯನಿರ್ವಹಣೆಯನ್ನು ನೋಡಿ ಅಧಿಕಾರ ಕೊಡುತ್ತಾರೆ. ನನಗೆ ಏನು ಹುದ್ದೆ ನೀಡಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಲಿದೆ’ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
.ಜಾಲತಾಣ ನೋಡಿ ಯಾರೂ ಅಧಿಕಾರ ನೀಡುವುದಿಲ್ಲ; ಹೈಕಮಾಂಡ್ ನಿರ್ಧರಿಸಲಿದೆ: ಖಾದರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.