ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಮ್ಮು | ವಿಧಾನಸಭೆಯಲ್ಲಿ ಮೀಸಲು: ಲಿಂಗತ್ವ ಅಲ್ಪಸಂಖ್ಯಾತರ ಒತ್ತಾಯ

Published 31 ಆಗಸ್ಟ್ 2024, 15:48 IST
Last Updated 31 ಆಗಸ್ಟ್ 2024, 15:48 IST
ಅಕ್ಷರ ಗಾತ್ರ

ಜಮ್ಮು: ಜಮ್ಮು ಮತ್ತು ಕಾಶ್ಮೀರ ಚುನಾವಣೆಗೂ ಮುನ್ನ ವಿಧಾನಸಭೆಯಲ್ಲಿ ತಮ್ಮ ಪ್ರಾತಿನಿಧ್ಯಕ್ಕಾಗಿ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿ ಟ್ರಾನ್ಸ್‌ಜೆಂಡರ್ ಸಮುದಾಯದ (ಲಿಂಗತ್ವ ಅಲ್ಪಸಂಖ್ಯಾತರು) ಸದಸ್ಯರು ಶನಿವಾರ ಇಲ್ಲಿ ರ‍್ಯಾಲಿ ನಡೆಸಿದರು.

ವಿಕ್ರಮ್ ಚೌಕ್‌ನಿಂದ ಪ್ರಾರಂಭವಾದ ರ‍್ಯಾಲಿಯು ನಗರದ ಹೃದಯಭಾಗದಲ್ಲಿರುವ ಹರಿ ಸಿಂಗ್ ಪಾರ್ಕ್‌ನಲ್ಲಿ ಸಮಾಪನಗೊಂಡಿತು. ತಮ್ಮ ಬೇಡಿಕೆ ಈಡೇರಿಸಬೇಕೆಂಬ ಘೋಷಣೆಯ ಫಲಕಗಳನ್ನು ಹಿಡಿದು ಲಿಂಗತ್ವ ಅಲ್ಪಸಂಖ್ಯಾತರು ರ‍್ಯಾಲಿಯಲ್ಲಿ ಸಾಗಿದರು. 

‘ವಿಧಾನಸಭೆಯಲ್ಲಿ 90 ಸ್ಥಾನಗಳಿವೆ. ಆದರೆ ಒಂದೇ ಒಂದು ಸ್ಥಾನವನ್ನು ನಮಗೆ ಮೀಸಲಿಟ್ಟಿಲ್ಲ. ಜಮ್ಮು ಮತ್ತು ಕಾಶ್ಮೀರದ ಎರಡು ವಿಭಾಗಗಳಲ್ಲಿ ನಮಗೆ ಕನಿಷ್ಠ ಒಂದು ಸ್ಥಾನವನ್ನಾದರೂ ಮೀಸಲಿಡಬೇಕೆಂದು ನಾವು ಬಯಸುತ್ತೇವೆ. ಇದರಿಂದ ನಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಾಗಲಿದೆ’ ಎಂದು ರ‍್ಯಾಲಿಯನ್ನು ಮುನ್ನಡೆಸಿದ ರವೀನಾ ಮಹಂತ್ ಅವರು ಸುದ್ದಿಗಾರರಿಗೆ ತಿಳಿಸಿದರು.

‘ಈ ಪ್ರದೇಶದಲ್ಲಿ ರಾಜಕೀಯ ಪಕ್ಷಗಳು ಹಿಂದಿನಿಂದಲೂ ನಮ್ಮ ಬೇಡಿಕೆ ನಿರಾಕರಿಸುತ್ತಾ ಬಂದಿವೆ. ಈ ಬಾರಿಯ ಚುನಾವಣೆಯಲ್ಲಾದರೂ ಮೀಸಲಾತಿ ಮತ್ತು ಪ್ರಾತಿನಿಧ್ಯಕ್ಕಾಗಿ ಟ್ರಾನ್ಸ್‌ಜೆಂಡರ್ ಸಮುದಾಯದ ಬೇಡಿಕೆಯ ಬಗ್ಗೆ ಧ್ವನಿ ಎತ್ತಲು ಈ ರ‍್ಯಾಲಿ ನಡೆಸಲಾಯಿತು’ ಎಂದು ಅವರು ತಿಳಿಸಿದರು.

‘ಎಲ್‌ಜಿಬಿಟಿ ಸಮುದಾಯದ ಹಕ್ಕುಗಳಿಗಾಗಿ ನಾವು ಧ್ವನಿ ಎತ್ತುವ ಹಾದಿಯಲ್ಲಿದ್ದೇವೆ. ಸರ್ಕಾರ ನಮ್ಮ ಕೂಗು ಆಲಿಸಲಿ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT