ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಮುನ್ನಡೆ ಸಾಧಿಸುತ್ತಿರುವ ಬೆನ್ನಲ್ಲೇ ನಟಿ ತ್ರಿಶಾ ಕೃಷ್ಣನ್ ಅವರು ಮುಖ್ಯಮಂತ್ರಿಯಾಗುವ ಬಯಕೆಯನ್ನು ವ್ಯಕ್ತಪಡಿಸಿರುವ ಹಳೆಯ ವಿಡಿಯೊವೊಂದು ಮತ್ತೆ ಮುನ್ನೆಲೆಗೆ ಬಂದಿದೆ.

2004ರಲ್ಲಿ ಸನ್ ಟಿವಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದ ತ್ರಿಶಾ, ತಮಗೆ ಮುಖ್ಯಮಂತ್ರಿ ಆಗುವ ಬಯಕೆ ಇದೆ ಎಂದಿದ್ದರು.

‘ನನಗೆ ತಮಿಳುನಾಡಿನ ಸಿಎಂ ಆಗಬೇಕೆಂಬ ಆಸೆಯಿದೆ. ನಿಜವಾಗಿಯೂ.. ಕಾದು ನೋಡಿ... ಮುಂದಿನ 10 ವರ್ಷಗಳಲ್ಲಿ ನಾನು ಸಿಎಂ ಆಗುತ್ತೇನೆ’ ಎಂದು ಹೇಳಿದ್ದರು.

ಒಂದು ವೇಳೆ ಮುಖ್ಯಮಂತ್ರಿಯಾದರೆ ಏನು ಮಾಡುತ್ತೀರಿ? ಎಂದು ಕೇಳಿದಾಗ, ‘ಮೊದಲು ನೀವೆಲ್ಲರೂ ನನಗೆ ಮತ ಹಾಕಿ ಆರಿಸಿ, ಆಮೇಲೆ ನಾನು ನಿಮಗೆ ಹೇಳುತ್ತೇನೆ’ ಎಂದು ಹೇಳಿದ್ದರು.

ವಿಜಯ್ ಮನೆಗೆ ತ್ರಿಶಾ ಭೇಟಿ:

ಇಂದು(ಮೇ 4) 43ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ತ್ರಿಶಾ ಅವರು, ತಿರುಪತಿಯ ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸೀದಾ ಚೆನ್ನೈಗೆ ಬಂದು ವಿಜಯ್ ಅವರ ಮನೆಗೆ ತೆರಳಿದ್ದಾರೆ.

ತಮಿಳುನಾಡು ಚುನಾವಣೆ ಹೊತ್ತಿನಲ್ಲಿಯೇ ವಿಜಯ್ ಅವರು ತಮ್ಮ ಪತ್ನಿ ಜೊತೆಗಿನ ಮನಸ್ತಾಪದ ವಿಚಾರಗಳು ಮುನ್ನೆಲೆಗೆ ಬಂದಿದ್ದವು. ಈ ವೇಳೆ ತ್ರಿಶಾ ಅವರ ಜೊತೆ ವಿಜಯ್ ಸಂಬಂಧದಲ್ಲಿದ್ದಾರೆ ಎಂಬ ಗುಸುಗುಸು ಕೇಳಿ ಬಂದಿದ್ದವು.

ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಏ. 23 ರಂದು ಮತದಾನ ನಡೆದಿತ್ತು. ಇಂದು ನಡೆಯುತ್ತಿರುವ ಮತ ಎಣಿಕೆಯಲ್ಲಿ ಟಿವಿಕೆ ಅಭ್ಯರ್ಥಿಗಳು 107 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ತಮಿಳುನಾಡಿನಲ್ಲಿ ಅತಂತ್ರ ವಿಧಾನಸಭೆ ರಚನೆಯಾಗುವ ಸಂಭವ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.