ಚೆನ್ನೈ: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ಜೋಸೆಫ್ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಇಂದು (ಮೇ.10) ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಅನೇಕ ನಾಯಕರು ಭಾಗವಹಿಸಿದ್ದರು.

ಚೆನ್ನೈನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ನಟಿ ತ್ರಿಶಾ ಕೃಷ್ಣನ್ ಅವರು ಭಾಗವಹಿಸಿ ಗಮನ ಸೆಳೆದರು. ಸಾಂಪ್ರದಾಯಿಕ ರೇಷ್ಮೆ ಸೀರೆಯಲ್ಲಿ ಕಂಗೊಳಿಸುತ್ತಿದ್ದ ತ್ರಿಶಾ, ಸ್ನೇಹಿತ ವಿಜಯ್ ಅವರ ಪ್ರಮಾಣವಚನ ಸಮಾರಂಭದ ಬಳಿಕ ಮಾತನಾಡಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

‘ವಿಜಯ್ಗೆ ಅಭಿನಂದನೆಗಳು. ನನಗೆ ಅತೀವ ಸಂತೋಷವಾಗಿದೆ’ ಎಂದು ತ್ರಿಶಾ ಪ್ರತಿಕ್ರಿಯಿಸಿದರು. ಇದೇ ವೇಳೆ, ವಿಜಯ್ ಅವರನ್ನು ಬೆಂಬಲಿಸಿದ ತಮಿಳುನಾಡಿನ ಜನತೆಗೂ ಅವರು ಅಭಿನಂದನೆ ಸಲ್ಲಿಸಿದರು.

ತಮಿಳು ಚಿತ್ರರಂಗದ ಪ್ರಸಿದ್ಧ ಜೋಡಿಯಾಗಿರುವ ವಿಜಯ್ ಹಾಗೂ ತ್ರಿಶಾ ಅವರು ಗಿಲ್ಲಿ (2004), ತಿರುಪಾಚಿ (2005), ಆತಿ (2006), ಕುರುವಿ (2008) ಮತ್ತು ಲಿಯೋ (2023) ಸೇರಿದಂತೆ 5 ಸಿನಿಮಾಗಳಲ್ಲಿ ಪರದೆ ಹಂಚಿಕೊಂಡಿದ್ದರು.

ನಟಿ ತ್ರಿಶಾ ಸದ್ಯ ಸೂರ್ಯ ಅಭಿನಯದ ‘ಕರುಪ್ಪು’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆರ್. ಬಾಲಾಜಿ ನಿರ್ದೇಶನದ ಈ ಸಿನಿಮಾ ಮೇ 14ರಂದು ಬಿಡುಗಡೆಯಾಗಲಿದೆ. ಸೂರ್ಯ ಮತ್ತು ತ್ರಿಶಾ ಜೊತೆಗೆ ಯೋಗಿ ಬಾಬು, ನಟ್ಟಿ ಸುಬ್ರಮಣಿಯಂ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.