ನವದೆಹಲಿ: ಭಾರತ ಮತ್ತು ಚೀನಾವನ್ನು ‘ನರಕ’ ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಗುರುವಾರ ಪ್ರತಿಕ್ರಿಯೆ ನೀಡಿದೆ.

ಈ ಕುರಿತು ಪ್ರತಿಕ್ರಿಯಿಸಿದ ಎಂಇಎ ವಕ್ತಾರ ರಣಧೀರ್ ಜೈಸ್ವಾಲ್, ‘ಈ ಕುರಿತು ಕೆಲವು ವರದಿಗಳನ್ನು ಗಮನಿಸಿದ್ದೇವೆ. ಈ ವಿಷಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದಿಲ್ಲ’ ಎಂದಷ್ಟೆ ಹೇಳಿದ್ದಾರೆ.

ಮುಂದುವರಿದು, ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಕುರಿತು ಮಾತನಾಡಿದ ಅವರು, ಈ ಸಂಬಂಧ ಭಾರತದ ತಂಡವೊಂದು ವಾಷಿಂಗ್ಟನ್ ಡಿಸಿಗೆ ತೆರಳಿದೆ ಎಂದಿದ್ದಾರೆ.

‘ಸಕಾರಾತ್ಮಕ ಹಾದಿಯಲ್ಲಿ ಮಾತುಕತೆ ನಡೆಯುತ್ತಿದೆ. ಎರಡೂ ಕಡೆಯವರು ಪರಸ್ಪರರ ಕಾಳಜಿ ಮತ್ತು ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಸಮತೋಲಿತ, ಪರಸ್ಪರ ಪ್ರಯೋಜನಕಾರಿ ಮತ್ತು ದೂರದೃಷ್ಟಿಯ ವ್ಯಾಪಾರ ಒಪ್ಪಂದದತ್ತ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ 2030ರ ವೇಳೆಗೆ 500 ಶತಕೋಟಿ ಅಮೆರಿಕನ್ ಡಾಲರ್ ವ್ಯಾಪಾರ ಗುರಿಯನ್ನು ತಲುಪುವ ಗುರಿ ಹೊಂದಲಾಗಿದೆ’ ಎಂದು ತಿಳಿಸಿದ್ದಾರೆ.

ಏನಿದು ವಿವಾದ?

ಅಮೆರಿಕದಲ್ಲಿ ಜನ್ಮಸಿದ್ಧ ಪೌರತ್ವ ಹಕ್ಕಿನ ಕುರಿತಂತೆ ಭಾರತ ಮತ್ತು ಚೀನಾ ವಿರುದ್ಧ ಜನಾಂಗೀಯ ನಿಂದನೆ ಇರುವ ಪತ್ರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರುತ್ನಲ್ಲಿ ಮರು ಪೋಸ್ಟ್ ಮಾಡಿದ್ದರು.

‘ಏಷ್ಯಾದ ಎರಡು ದೇಶಗಳಿಂದ(ಚೀನಾ, ಭಾರತ) ಇಲ್ಲಿಗೆ ಬರುವ ಜನರು ಮಗುವನ್ನು ಹೆರುತ್ತಾರೆ. ಮಗು ಜನ್ಮಸಿದ್ಧವಾಗಿ ಪೌರತ್ವ ಪಡೆಯುತ್ತದೆ. ಬಳಿಕ, ಚೀನಾ, ಭಾರತ ಮತ್ತು ಇತರ ‘ನರಕಕೂಪ’ಗಳಿಂದ ಸಂಪೂರ್ಣ ಕುಟುಂಬವನ್ನು ಇಲ್ಲಿಗೆ ಕರೆತಂದು ನೆಲೆಸುತ್ತಾರೆ’ ಎಂದು ಅವರು ದೂಷಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.