ಹೈದರಾಬಾದ್: ತಮಿಳುನಾಡು ರಾಜಕೀಯದಲ್ಲಿ ಕ್ಷಣ ಕ್ಷಣಕ್ಕೂ ಲೆಕ್ಕಾಚಾರಗಳು ಬದಲಾಗುತ್ತಿದ್ದು, ಟಿವಿಕೆಗೆ ಬೆಂಬಲ ಸೂಚಿಸಿರುವ ಕಾಂಗ್ರೆಸ್ನ ಐವರು ಶಾಸಕರು ಹೈದರಾಬಾದ್ಗೆ ದೌಡಾಯಿಸಿದ್ದಾರೆ. ವಿರೋಧಿಗಳು ಕುದುರೆ ವ್ಯಾಪಾರ ನಡೆಸುವ ಆತಂಕದ ಹಿನ್ನೆಲೆಯಲ್ಲಿ ಪಕ್ಷ ಈ ನಿರ್ಧಾರ ಕೈಗೊಂಡಿದೆ.

ತೆಲಂಗಾಣ ಕಾಂಗ್ರೆಸ್ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದ ಮೇಲೂರಿನ ಕಾಂಗ್ರೆಸ್ ಶಾಸಕ ಪಿ. ವಿಶ್ವನಾಥನ್, ಹೈದರಾಬಾದ್ಗೆ ತೆರಳಿರುವ ಐವರು ಸಾಸಕರ ನೇತೃತ್ವವಹಿಸಿದ್ದಾರೆ.

ಟಿವಿಕೆಗೆ ಕಾಂಗ್ರೆಸ್ ಈಗಾಗಲೇ ತನ್ನ ಬೆಂಬಲವನ್ನು ಘೋಷಿಸಿದ್ದು, ಟಿವಿಕೆ ಸರ್ಕಾರ ರಚನೆಯಾದರೆ ವಿಶ್ವನಾಥನ್ ಸಚಿವರಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

108 ಸ್ಥಾನಗಳನ್ನು ಗೆದ್ದಿರುವ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷಕ್ಕೆ ಅಧಿಕಾರಕ್ಕೇರಲು ತಾಂತ್ರಿಕವಾಗಿ 11 ಶಾಸಕರ ಬೆಂಬಲದ ಅಗತ್ಯವಿದೆ. ಕಾಂಗ್ರೆಸ್(5), ಸಿಪಿಐ(2), ಸಿಪಿಐ(ಎಂ)(2) ಈಗಾಗಲೇ ಬೆಂಬಲ ಘೋಷಿಸಿವೆ. ಟಿವಿಕೆ ಅಧಿಕಾರದ ಗದ್ದುಗೆ ಏರಲು ಇನ್ನಿಬ್ಬರು ಶಾಸಕರ ಬೆಂಬಲ ಅಗತ್ಯವಿದ್ದು, ಡಿಸಿಎಂ ಹುದ್ದೆಯ ಚೌಕಾಶಿಯಲ್ಲಿ ತೊಡಗಿರುವ ವಿಸಿಕೆಯ ಇಬ್ಬರು ಶಾಸಕರ ಬೆಂಬಲ ಪಡೆಯಲು ವಿಜಯ್ ಶತಪ್ರಯತ್ನ ನಡೆಸುತ್ತಿದ್ದಾರೆ.

ಎಡ ಪಕ್ಷಗಳ ದೀರ್ಘಕಾಲದ ಮಿತ್ರ ಪಕ್ಷವಾದ ವಿಸಿಕೆ, ಕಮ್ಯುನಿಸ್ಟ್ ಪಕ್ಷಗಳು ಅಧಿಕೃತವಾಗಿ ಟಿವಿಕೆಗೆ ತನ್ನ ಬೆಂಬಲ ಘೋಷಿಸಿರುವುದರಿಂದ ಸದ್ಯದಲ್ಲೇ ನಿಲುವು ಪ್ರಕಟಿಸುವ ನಿರೀಕ್ಷೆ ಇದೆ. ಆದರೆ, ಶುಕ್ರವಾರ ಸಂಜೆಯಿಂದ ವಿಸಿಕೆ ನಾಯಕರು ವಿಜಯ್ ಅವರನ್ನು ಅಡಕತ್ತರಿಯಲ್ಲಿ ಸಿಲುಕಿಸಿದೆ. ಐಯುಎಂಎಲ್ ಸಹ ಬೆಂಬಲದಿಂದ ಹಿಂದೆ ಸರಿದಿರುವುದು ವಿಜಯ್ಗೆ ಬೇರೆ ಆಯ್ಕೆ ಇಲ್ಲದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.