ಬೆಂಗಳೂರು: ತಮಿಳುನಾಡು ವಿಧಾನಸಭೆ ಚುನಾವಣೆಯ ಮತ ಎಣಿಕೆ ಇನ್ನೇನು ಮುಗಿಯುವ ಹಂತಕ್ಕೆ ಬಂದಿದ್ದು ಟಿವಿಕೆ ಅಭ್ಯರ್ಥಿಗಳು 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಈ ಮೂಲಕ ದೇಶದಲ್ಲಿಯೇ ಟಿವಿಕೆ ಅಚ್ಚರಿಗೆ ಕಾರಣವಾಗಿದ್ದು, ಅಧಿಕಾರ ಹಿಡಿಯುವ ಹಾದಿಯನ್ನು ನೋಡುತ್ತಿದೆ. ಜೊತೆಗೆ ತಮಿಳುನಾಡಿನಲ್ಲಿ ಟಿವಿಕೆ ಬೆಂಬಲಿಗರ ಹಾಗೂ ವಿಜಯ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.

ತಮಿಳುನಾಡಿನಲ್ಲಿ ಟಿವಿಕೆ ಮಿಂಚುತ್ತಿರುವ ಹಿನ್ನೆಲೆಯಲ್ಲಿ ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್ ಅವರ ಚೆನ್ನೈನ ನೀಲಾಂಕರೈ ಬಳಿಯ ನಿವಾಸದಲ್ಲಿ ಅವರ ಕುಟುಂಬಸ್ಥರು ಭಾರಿ ಸಂಭ್ರಮದಲ್ಲಿದ್ದಾರೆ.

ವಿಜಯ್ ತಂದೆ ಚಂದ್ರಶೇಖರ್ ಹಾಗೂ ಕುಟುಂಬದವರು ಫಲಿತಾಂಶ ನೋಡಿ ಸಂಭ್ರಮಿಸುವ ವಿಡಿಯೊ ವ್ಯಾಪಕವಾಗಿ ಹರಿದಾಡುತ್ತಿವೆ. ಚಂದ್ರಶೇಖರ್ ಅವರನ್ನು ಕುಟುಂಬಸ್ಥರು ಅಭಿನಂದಿಸಿದ್ದಾರೆ.

ನಟ ವಿಜಯ್ ಅವರ ಟಿವಿಕೆ ಪಕ್ಷ ಎಲ್ಲ 234 ಕ್ಷೇತ್ರಗಳಲ್ಲೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಸದ್ಯ ನೂರಕ್ಕೂ ಹೆಚ್ಚು ಸನಿಹ ಟಿವಿಕೆ ಮುನ್ನೆಯನ್ನು ಕಾಯ್ದುಕೊಂಡು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಟಿವಿಕೆ 107 ಸ್ಥಾನಗಳನ್ನು ಕಾಯ್ದುಕೊಂಡಿದ್ದರೆ, ಡಿಎಂಕೆ ಮೂರನೇ ಸ್ಥಾನದಲ್ಲಿದೆ. ಡಿಎಂಕೆ 58 ಸ್ಥಾನಗಳಲ್ಲಿದ್ದರೆ, ಎಐಎಡಿಎಂಕೆ 69 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.