ಚೆನ್ನೈ: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ವಿಜಯ್ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಶನಿವಾರ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ಆದರೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಕರ್ ಅವರು ವಿಜಯ್ಗೆ ಪ್ರಮಾಣ ವಚನ ಸ್ವೀಕರಿಸಲು ಆಹ್ವಾನ ನೀಡಿಲ್ಲ.

ಸಿಪಿಐ ಮತ್ತು ಸಿಪಿಎಂ ಪಕ್ಷಗಳು ಟಿವಿಕೆಗೆ ಶುಕ್ರವಾರ ಅಧಿಕೃತವಾಗಿ ತಮ್ಮ ಬೆಂಬಲ ಘೋಷಿಸಿದವು. ವಿಸಿಕೆ ಕೂಡಾ ವಿಜಯ್ ಅವರನ್ನು ಬೆಂಬಲಿಸುವ ಸೂಚನೆ ನೀಡಿದೆ. ಸರ್ಕಾರ ರಚನೆಗಾಗಿ ನಡೆಯುವ ಉಪಕ್ರಮಗಳನ್ನು ಬೆಂಬಲಿಸುವುದಾಗಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಹೇಳಿದೆ.

ಎಡ ಪಕ್ಷಗಳು ಬೆಂಬಲ ಘೋಷಿಸಿದ ಕೆಲ ಗಂಟೆಗಳ ಬಳಿಕ ವಿಜಯ್ ಅವರು ಸರ್ಕಾರ ರಚನೆಗೆ ಆಹ್ವಾನ ಪಡೆಯುವ ಸಂಬಂಧ ರಾಜ್ಯಪಾಲರನ್ನು ಭೇಟಿಯಾದರು. ಟಿವಿಕೆ ಬೆಂಬಲಿಗರು ವಿಜಯ್ ಅವರ ಪ್ರಮಾಣ ವಚನ ಸ್ವೀಕಾರದ ನಿರೀಕ್ಷೆಯಲ್ಲಿ ರಾಜ್ಯದ ವಿವಿಧೆಡೆ ಸಂಭ್ರಮಾಚರಣೆ ನಡೆಸಿದರು.

ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದು ಟಿವಿಕೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ಸರಳ ಬಹುಮತಕ್ಕೆ (118) ಹತ್ತು ಸ್ಥಾನಗಳ ಕೊರತೆ ಎದುರಿಸಿದೆ. ಎರಡು ಕ್ಷೇತ್ರಗಳಲ್ಲಿ ಗೆದ್ದಿರುವ ವಿಜಯ್ ಅವರು ಒಂದು ಸ್ಥಾನ ಬಿಟ್ಟುಕೊಡಬೇಕಿರುವುದರಿಂದ ಟಿವಿಕೆಯ ಬಲ 107 ಆಗಿದೆ.

ಐವರು ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಈ ಹಿಂದೆಯೇ ಟಿವಿಕೆಗೆ ಬೆಂಬಲ ಘೋಷಿಸಿದೆ. ಇದೀಗ ತಲಾ ಎರಡು ಸ್ಥಾನಗಳನ್ನು ಗೆದ್ದಿರುವ ಸಿಪಿಎಂ ಮತ್ತು ಸಿಪಿಐನ ಬೆಂಬಲದೊಂದಿಗೆ ಟಿವಿಕೆಯ ಬಲ 116ಕ್ಕೆ ಏರಿಕೆಯಾಗಿದೆ. ಬಹುಮತಕ್ಕೆ ಇನ್ನೆರಡು ಸ್ಥಾನಗಳು ಬೇಕಿದ್ದು, ವಿಸಿಕೆಯ ಬೆಂಬಲ ದೊರೆತರೆ ವಿಜಯ್ ಅವರಿಗೆ ಸರ್ಕಾರ ರಚಿಸಲು ಸಾಧ್ಯವಾಗಲಿದೆ.

ಎರಡು ಸ್ಥಾನ ಜಯಿಸಿರುವ ವಿಸಿಕೆ, ಟಿವಿಕೆಗೆ ಬೆಂಬಲ ನೀಡುವ ಕುರಿತು ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಆದರೆ ಪಕ್ಷದ ಮುಖ್ಯಸ್ಥ ತೊಲ್ ತಿರುಮಾವಳವನ್ ಅವರು, ‘ಎಡಪಕ್ಷಗಳು ಅನುಸರಿಸುವ ಮಾರ್ಗವನ್ನು ವಿಸಿಕೆ ಅನುಸರಿಸಲಿದೆ’ ಎಂದು ಹಲವು ಬಾರಿ ಹೇಳಿದ್ದಾರೆ. ವಿಸಿಕೆ ತನ್ನ ನಿಲುವನ್ನು ಶನಿವಾರ ಅಧಿಕೃತವಾಗಿ ಪ್ರಕಟಿಸಲಿದೆ.

‘ತನ್ನ ಇಬ್ಬರು ಶಾಸಕರು ಸರ್ಕಾರ ರಚನೆಗಾಗಿ ನಡೆಯುವ ಉಪಕ್ರಮಗಳನ್ನು ಬೆಂಬಲಿಸಲಿದ್ದಾರೆ’ ಎಂದು ಐಯುಎಂಎಲ್ ಮುಖಂಡ ಖಾದರ್ ಮೊಹಿದ್ದೀನ್ ಹೇಳಿದ್ದಾರೆ.

ಸರ್ಕಾರ ರಚನೆಗೆ ಈ ಹಿಂದೆಯೇ ಹಕ್ಕು ಮಂಡಿಸಿದ್ದ ವಿಜಯ್ ಅವರು ಶುಕ್ರವಾರ ಲೋಕ ಭವನಕ್ಕೆ ಭೇಟಿ ನೀಡಿ ರಾಜ್ಯಪಾಲರ ಜತೆ ಕೆಲಹೊತ್ತು ಮಾತನಾಡಿದರು ಎಂದು ಮೂಲಗಳು ತಿಳಿಸಿವೆ. ಶನಿವಾರ ಪ್ರಮಾಣ ವಚನ ಸ್ವೀಕರಿಸುವ ಬಗ್ಗೆ ಲೋಕ ಭವನ ಅಥವಾ ಟಿವಿಕೆ ಅಧಿಕೃತ ಹೇಳಿಕೆ ನೀಡಿಲ್ಲ.

ಬಿಜೆಪಿಯನ್ನು ದೂರವಿಡುವುದು ಗುರಿ: ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಎಂ ರಾಜ್ಯ ಕಾರ್ಯದರ್ಶಿ ಪಿ. ಷಣ್ಮುಗಂ ಮತ್ತು ಸಿಪಿಐ ರಾಜ್ಯ ಕಾರ್ಯದರ್ಶಿ ಎಂ. ವೀರಪಾಂಡ್ಯನ್ ಅವರು ಟಿವಿಕೆಗೆ ಬೇಷರತ್ ಬೆಂಬಲ ಘೋಷಿಸಿದರು.

ತಮಿಳುನಾಡಿಗೆ ಬಿಜೆಪಿಯ ‘ಹಿಂಬಾಗಿಲ ಪ್ರವೇಶ’ವನ್ನು ತಡೆಯಲು ಟಿವಿಕೆಯನ್ನು ಬೆಂಬಲಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು. ಚುನಾವಣೆಯಲ್ಲಿ ಸೋತರೂ ರಾಜ್ಯಪಾಲರ ಮೂಲಕ ರಾಜ್ಯವನ್ನು ಆಳುವ ಪ್ರಯತ್ನಕ್ಕೆ ಬಿಜೆಪಿ ಯತ್ನಿಸಿದ್ದು, ಅದನ್ನು ತಡೆಯುವುದು ನಮ್ಮ ಉದ್ದೇಶವಾಗಿತ್ತು ಎಂದು ಷಣ್ಮುಗಂ ಹೇಳಿದ್ದಾರೆ.

‘10 ದಿನಗಳಲ್ಲಿ ಯಾವುದೇ ಸರ್ಕಾರ ರಚನೆಯಾಗದಿದ್ದರೆ, ರಾಜ್ಯಪಾಲರ ಆಡಳಿತವನ್ನು ಹೇರುವುದಕ್ಕೆ ಹಾದಿಯೊದಗಿಸಬಹುದು. ಟಿವಿಕೆಗೆ ಬೆಂಬಲ ನೀಡಿದರೂ ಎಡಪಕ್ಷಗಳು ಡಿಎಂಕೆಯೊಂದಿಗಿನ ಮೈತ್ರಿಯನ್ನು ಮುಂದುವರಿಸುತ್ತವೆ’ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ಗೆ ಎರಡು ಸಚಿವ ಸ್ಥಾನ: ಕಾಂಗ್ರೆಸ್ ಪಕ್ಷವು ಟಿವಿಕೆ ಸರ್ಕಾರದ ಭಾಗವಾಗಲಿದೆ ಎಂದು ತಮಿಳುನಾಡು ಕಾಂಗ್ರೆಸ್ ಸಮಿತಿ (ಟಿಎನ್ಸಿಸಿ) ಅಧ್ಯಕ್ಷ ಕೆ.ಸೆಲ್ವಪೆರುಂದಗೈ ಹೇಳಿದ್ದಾರೆ. ಎರಡು ಸಚಿವ ಸ್ಥಾನಗಳು ಮತ್ತು ಒಂದು ರಾಜ್ಯಸಭಾ ಸ್ಥಾನ ಕಾಂಗ್ರೆಸ್ಗೆ ಸಿಗಲಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.