ನವದೆಹಲಿ: ಮದುವೆಯಾದ ಐದೇ ತಿಂಗಳಲ್ಲಿ ಭೋಪಾಲ್ನ ಪತಿಯ ಮನೆಯಲ್ಲಿ 33 ವರ್ಷದ ನೋಯ್ಡಾ ಮಹಿಳೆಯು ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗವು ಬುಧವಾರ ಸ್ವಯಂಪ್ರೇರಿತ ದೂರು ದಾಖಲಿಸಿದೆ.

ತೆಗೆದುಕೊಂಡ ಕ್ರಮದ ಕುರಿತು ಏಳು ದಿನಗಳ ಒಳಗಾಗಿ ವಿವರವಾದ ವರದಿಯನ್ನು (ಎಟಿಆರ್) ಸಲ್ಲಿಸುವಂತೆ ಮಧ್ಯಪ್ರದೇಶ ಪೊಲೀಸರಿಗೆ ಸೂಚನೆ ನೀಡಿದೆ.

2024ರಲ್ಲಿ ಡೇಟಿಂಗ್ ಆ್ಯಪ್ನಲ್ಲಿ ಭೋಪಾಲ್ನ ಸಮರ್ಥ್ ಸಿಂಗ್ ಹಾಗೂ ನೋಯ್ಡಾದ ಟ್ವಿಶಾ (34) ಪರಿಚಿತರಾಗಿದ್ದರು. 2025ರಲ್ಲಿ ವಿವಾಹವಾಗಿದ್ದರು. ಟ್ವಿಶಾ ತನ್ನ ಗಂಡನ ಮನೆಯಲ್ಲಿ ಮೇ 12ರಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಟ್ವಿಶಾ ಅವರು ‘ಮಿಸ್ ಪುಣೆ’ ಕಿರೀಟ ಗಳಿಸಿದ್ದರು. ಜೊತೆಗೆ, ತೆಲುಗಿನ ಸಿನಿಮಾವೊಂದರಲ್ಲಿಯೂ ನಟಿಸಿದ್ದರು. ಸಮರ್ಥ್ ಸಿಂಗ್ ಬೆಂಗಳೂರಿನ ಕಾನೂನು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ. 2018ರಿಂದಲೂ ವಕೀಲರಾಗಿ ಕೆಲಸ ಮಾಡುತ್ತಿದ್ದರು.

ಟ್ವಿಶಾಳ ಪತಿ, ಆಕೆಯ ಅತ್ತೆ ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ವಿರುದ್ಧ ಪೊಲೀಸರು ವರದಕ್ಷಿಣೆ ಕಿರುಕುಳದ ಪ್ರಕರಣ ದಾಖಲಿಸಿದ್ದಾರೆ.

‘ಟ್ವಿಶಾಳ ಅನುಮಾನಾಸ್ಪದ ಸಾವಿಗೆ ಸಂಬಂಧಿಸಿ ಮಾಧ್ಯಮಗಳ ಗಂಭೀರವಾದ ವರದಿಗಳನ್ನು ಮಹಿಳಾ ಆಯೋಗವು ಸ್ವಯಂಪ್ರೇರಿತವಾಗಿ ಪರಿಗಣಿಸಿದೆ’ ಎಂದು ಆಯೋಗವು ‘ಎಕ್ಸ್’ನಲ್ಲಿ ತಿಳಿಸಿದೆ.

‘ಟ್ವಿಶಾ ಮದುವೆಯಾದ ಐದು ತಿಂಗಳಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಆಕೆಯ ಪತಿ, ಅತ್ತೆಯೇ ವರದಕ್ಷಿಣೆ ಕಿರುಕುಳ, ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು ಎಂದು ಸಂತ್ರಸ್ತ ಕುಟುಂಬಸ್ಥರು ದೂರಿದ್ದಾರೆ. ಈ ಪ್ರಕರಣದ ಕುರಿತು ಮುಕ್ತ ಹಾಗೂ ನ್ಯಾಯಸಮ್ಮತ ತನಿಖೆಯನ್ನು ಕಾಲಮಿತಿಯಲ್ಲಿ ಮುಗಿಸಬೇಕು’ ಎಂದು ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರಿಗೆ ಆಯೋಗದ ಅಧ್ಯಕ್ಷ ವಿಜಯಾ ರಹಾತ್ಕರ್ ಪತ್ರ ಬರೆದು ಒತ್ತಾಯಿಸಿದ್ದಾರೆ.

‘ಆರೋಪಿ ಮೇಲೆ ಹಾಕಿರುವ ಎಫ್ಐಆರ್ ನಿಬಂಧನೆಗಳ ಕುರಿತ ವಿವರಗಳು, ಆರೋಪಿಯ ಬಂಧನದ ಸ್ಥಿತಿಗತಿ ಹಾಗೂ ವಿಚಾರಣೆ, ನಾಪತ್ತೆಯಾಗಿರುವ ಸಮರ್ಥ್ ಸಿಂಗ್ ಬಂಧನಕ್ಕೆ ತೆಗೆದುಕೊಂಡ ಕ್ರಮಗಳು, ಪಾಸ್ಪೋರ್ಟ್ ಮುಟ್ಟುಗೋಲಿಗೆ ವ್ಯವಸ್ಥೆ, ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿ, ಕರೆಗಳ ವಿವರ, ಎಲೆಕ್ಟ್ರಾನಿಕ್ ಹಾಗೂ ವಿಧಿವಿಜ್ಞಾನ ಸಾಕ್ಷ್ಯಗಳನ್ನು ಇದರ ಜೊತೆಗೆ ನೀಡಬೇಕು’ ಎಂದು ಸ್ಪಷ್ಟಪಡಿಸಿದೆ.

ನ್ಯಾಯಸಮ್ಮತವಾಗಿ ತನಿಖೆ ನಡೆಸುವ ನಿಟ್ಟಿನಲ್ಲಿ ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ರಕ್ಷಣೆ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದೂ ಅಧಿಕಾರಿಗಳಿಗೆ ಇದೇ ವೇಳೆ ನಿರ್ದೇಶನ ನೀಡಿದ್ದಾರೆ.

ಎರಡನೇ ಮರಣೋತ್ತರ ಪರೀಕ್ಷೆಗೆ ವಿರೋಧವಿಲ್ಲ: ಆಯುಕ್ತ

ಭೋಪಾಲ್: ‘ಟ್ವಿಶಾ ಶರ್ಮಾಳ ಎರಡನೇ ಮರಣೋತ್ತರ ಪರೀಕ್ಷೆ ನಡೆಸುವುದಕ್ಕೆ ನಮ್ಮಿಂದ ಯಾವುದೇ ಆಕ್ಷೇಪವಿಲ್ಲ’ ಎಂದು ನಗರ ಪೊಲೀಸ್ ಆಯುಕ್ತ ಸಂಜಯ್ ಕುಮಾರ್ ತಿಳಿಸಿದ್ದಾರೆ. ‘ಸಂತ್ರಸ್ತ ಕುಟುಂಬಸ್ಥರನ್ನು ನನ್ನನ್ನು ಭೇಟಿಯಾಗಿ ಎರಡನೇ ಸಲ ಮರಣೋತ್ತರ ಪರೀಕ್ಷೆ ನಡೆಸುವಂತೆ ನನಗೆ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ನಮ್ಮ ಕಡೆಯಿಂದ ಯಾವುದೇ ತಕರಾರು ಇಲ್ಲ ಎಂದು ತಿಳಿಸಿದ್ದೇವೆ’ ಎಂದು ಹೇಳಿದ್ದಾರೆ.

ಸಂತ್ರಸ್ತ ಕುಟುಂಬಸ್ಥರು ಭೇಟಿಯಾದ ದಿನಾಂಕದ ಮಾಹಿತಿ ನೀಡಲಿಲ್ಲ. ಮೃತಳ ಎರಡನೇ ಮರಣೋತ್ತರ ಪರೀಕ್ಷೆಯನ್ನು ನವದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್)ಯಲ್ಲಿ ನಡೆಸಬೇಕು ಎಂದು ಸಂತ್ರಸ್ತ ಪರ ವಕೀಲ ಅಂಕುರ್ ಪಾಂಡೆ ಒತ್ತಾಯಿಸಿದ್ದಾರೆ. ಮೃತದೇಹ ವಶಕ್ಕೆ ಪಡೆಯಲು ಮನವಿ: ಟ್ವಿಶಾ ಮೃತದೇಹವು ಕೊಳೆಯುವ ಆತಂಕ ಎದುರಾಗಿದ್ದು ತಮ್ಮ ವಶಕ್ಕೆ ಪಡೆದುಕೊಳ್ಳುವಂತೆ ಅವರ ಕುಟುಂಬಸ್ಥರಿಗೆ ಪೊಲೀಸರು ಮನವಿ ಮಾಡಿದ್ದಾರೆ. ಟ್ವಿಶಾ ಮೃತದೇಹವನ್ನು ಮೇ 13ರಿಂದ ಭೋಪಾಲ್ನ ಏಮ್ಸ್ನಲ್ಲಿ ಇಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.