ನವದೆಹಲಿ: ಮಾಜಿ ಮಾಡೆಲ್ ಹಾಗೂ ನಟಿ ಟ್ವಿಶಾ ಶರ್ಮಾ ಅವರ ಸಾವಿನ ಪ್ರಕರಣವನ್ನು ನಿಭಾಯಿಸಿದ ರೀತಿಯಿಂದ ನೋವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಲ್ಲದೆ ಪ್ರಕರಣದ ಬೆಳವಣಿಗೆಗಳ ಕುರಿತು ವರದಿ ಮಾಡುವಾಗ ಸಂಯಮ ಕಾಯ್ದುಕೊಳ್ಳುವಂತೆ ಸೋಮವಾರ ಮಾಧ್ಯಮಗಳಿಗೆ ಸೂಚಿಸಿದೆ.
.2ನೇ ಮರಣೋತ್ತರ ಪರೀಕ್ಷೆ ಪೂರ್ಣ: ಭೋಪಾಲ್ನಲ್ಲಿ ನಟಿ ಟ್ವಿಶಾ ಅಂತ್ಯಕ್ರಿಯೆ.
33 ವರ್ಷದ ಶರ್ಮಾ ಅವರು ಮೇ 12 ರಂದು ಭೋಪಾಲ್ನ ಕಟಾರಾ ಹಿಲ್ಸ್ ಪ್ರದೇಶದಲ್ಲಿರುವ ತಮ್ಮ ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅತ್ತೆ ಹಾಗೂ ಮಾವನ ವರದಕ್ಷಿಣೆ ಕಿರುಕುಳ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪವನ್ನು ಅವರ ಕುಟುಂಬಸ್ಥರು ಹೊರಿಸಿದ್ದಾರೆ. ಆದರೆ, ಆಕೆ ಮಾದಕವಸ್ತು ವ್ಯಸನಿಯಾಗಿದ್ದರು ಎಂದು ಅವರ ಅತ್ತೆ-ಮಾವಂದಿರು ವಾದಿಸಿದ್ದಾರೆ.

ವರದಕ್ಷಿಣೆ ಕಿರುಕುಳದ ಆರೋಪದ ಮೇಲೆ ಪತಿ, ವಕೀಲ ಸಮರ್ಥ್ ಸಿಂಗ್ ಮತ್ತು ಅವರ ಅತ್ತೆ, ಮಾಜಿ ಜಿಲ್ಲಾ ನ್ಯಾಯಾಧೀಶರಾದ ಗಿರಿಬಾಲಾ ಸಿಂಗ್ ಅವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ ಅವರ ಪೀಠವು, ಈ ಪ್ರಕರಣದಲ್ಲಿ ತನಿಖೆಯು ನಿಷ್ಪಕ್ಷಪಾತ, ಸ್ವತಂತ್ರ ಮತ್ತು ನ್ಯಾಯಸಮ್ಮತವಾಗಿ ನಡೆಯುವುದನ್ನು ತಾನು ಖಚಿತಪಡಿಸುವುದಾಗಿ ತಿಳಿಸಿದೆ.
.ನಟಿ ಟ್ವಿಶಾ ಶರ್ಮಾ ಸಾವಿನ ಪ್ರಕರಣ: ಪತಿ ಸಮರ್ಥ್ ಸಿಂಗ್ ಪೊಲೀಸ್ ವಶಕ್ಕೆ.
‘ಕೆಲವು ಕ್ರಮಗಳಿಂದಾಗಿ ನಮಗೆ ಸ್ವಲ್ಪ ನೋವಾಗಿದೆ. ಸಂತ್ರಸ್ತೆಯ ಕುಟುಂಬ ಅಥವಾ ಇನ್ನೊಂದು ಕುಟುಂಬದ ಹೇಳಿಕೆಗಳನ್ನು ಪಡೆಯದಂತೆ ನಾವು ನಮ್ಮ ಮಾಧ್ಯಮ ಮಿತ್ರರಲ್ಲಿ ವಿನಂತಿಸುತ್ತೇವೆ. ಕಾನೂನು ಮತ್ತು ಕಾರ್ಯವಿಧಾನದ ಪ್ರಕಾರ ಎಲ್ಲವೂ ನಡೆಯಲು ಬಿಡಿ. ಮಾಧ್ಯಮಗಳು ಸಂತ್ರಸ್ತ ಕುಟುಂಬದ ಹೇಳಿಕೆಗಳನ್ನು ದಾಖಲಿಸದಂತೆ ಮತ್ತು ಅವರ ನೋವನ್ನು ಕೇವಲ ಸುದ್ದಿ ತುಣುಕುಗಳನ್ನಾಗಿ ಮಾಡದಂತೆ ನಾವು ವಿನಂತಿಸುತ್ತೇವೆ’ ಎಂದು ನ್ಯಾಯಪೀಠ ಹೇಳಿತು. ಅಲ್ಲದೆ ಯಾವುದೇ ರೀತಿಯ ಕಟ್ಟುಕಥೆಗಳನ್ನು ಸೃಷ್ಟಿಸುವುದನ್ನು ತಪ್ಪಿಸಬೇಕು ಎಂದು ತಿಳಿಸಿದೆ.

ಮಧ್ಯಪ್ರದೇಶ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಮಾಧ್ಯಮಗಳ ಹಸ್ತಕ್ಷೇಪದಿಂದಾಗಿ ಪ್ರಕರಣದಲ್ಲಿ ಗಣನೀಯ ಪ್ರಗತಿಯಾಗಿದೆ ಎಂದು ಪ್ರತಿಪಾದಿಸಿದರು. ಇಂತಹ ದುರದೃಷ್ಟಕರ ಘಟನೆಯನ್ನು ಎದುರಿಸುವುದಕ್ಕಿಂತ ವಿಚ್ಛೇದನ ಪಡೆದ ಮಗಳನ್ನು ಹೊಂದಿರುವುದು ಉತ್ತಮ ಎಂಬುದು ಈ ಪ್ರಕರಣವು ಎಲ್ಲಾ ಪೋಷಕರಿಗೆ ನೀಡುವ ಸಂದೇಶವಾಗಿದೆ ಎಂದು ಅವರು ಹೇಳಿದರು.

ಪ್ರಕರಣದ ತನಿಖೆಯನ್ನು ತಕ್ಷಣವೇ ಸಿಬಿಐ ಕೈಗೆತ್ತಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ತಾವು ಅಧಿಕಾರಿಗಳೊಂದಿಗೆ ಈ ವಿಷಯವನ್ನು ಚರ್ಚಿಸುವುದಾಗಿ ಸಾಲಿಸಿಟರ್ ಜನರಲ್ ಹೇಳಿದರು.
.ನಟಿ ಟ್ವಿಶಾ ಶರ್ಮಾ ಸಾವು ಪ್ರಕರಣ: ಸಿಬಿಐ ತನಿಖೆಗೆ ಮಧ್ಯಪ್ರದೇಶ ಸರ್ಕಾರ ಶಿಫಾರಸು.
‘ಸಾರ್ವಜನಿಕವಾಗಿ ಅಥವಾ ಮಾಧ್ಯಮಗಳ ಮುಂದೆ ಹೇಳಿಕೆಗಳನ್ನು ನೀಡುವ ಬದಲು, ಸಂತ್ರಸ್ತೆಯ ಕುಟುಂಬದ ಸದಸ್ಯರು ಮತ್ತು ಆರೋಪಿಗಳು ತಮ್ಮ ಹೇಳಿಕೆಗಳನ್ನು ತನಿಖಾ ಸಂಸ್ಥೆಯ ಮುಂದೆ ದಾಖಲಿಸಬೇಕು. ಇದರಿಂದಾಗಿ ನಡೆಯುತ್ತಿರುವ ತನಿಖೆಯ ಮೇಲೆ ಯಾವುದೇ ಪೂರ್ವಗ್ರಹ ಅಥವಾ ಪ್ರತಿಕೂಲ ಪರಿಣಾಮ ಬೀರದಂತೆ ನೋಡಿಕೊಳ್ಳಬಹುದು ಎಂದು ನಾವು ಒತ್ತಿಹೇಳಲು ಬಯಸುತ್ತೇವೆ’ ಎಂದು ಪೀಠ ತಿಳಿಸಿದೆ.

‘ಸಾಕ್ಷಿಗಳಾಗಬಹುದಾದ ವ್ಯಕ್ತಿಗಳ ಹೇಳಿಕೆಗಳನ್ನು ದಾಖಲಿಸುವುದನ್ನು ತಪ್ಪಿಸಬೇಕೆಂದು ನಾವು ಮಾಧ್ಯಮಗಳಿಗೆ ವಿನಂತಿಸುತ್ತೇವೆ. ಇದು ತನಿಖೆ ಮೇಲೆ ಅನಗತ್ಯವಾಗಿ ಪರಿಣಾಮ ಬೀರಬಹುದು. ಸಾರ್ವಜನಿಕರು ಕೂಡ ಊಹಾಪೋಹಗಳಿಂದ ದೂರವಿರಬೇಕು ಮತ್ತು ಪ್ರಮುಖ ತನಿಖಾ ಸಂಸ್ಥೆಯೊಂದರ ಮೇಲೆ ನಂಬಿಕೆ ಹಾಗೂ ವಿಶ್ವಾಸವನ್ನು ಇಡಬೇಕು ಎಂದು ನಾವು ವಿನಂತಿಸುತ್ತೇವೆ. ಸೂಕ್ತ ಸಮಯದಲ್ಲಿ ತನಿಖೆಯು ಒಂದು ನಿರ್ಣಾಯಕ ಅಂತ್ಯವನ್ನು ತಲುಪುತ್ತದೆ ಎಂಬ ವಿಶ್ವಾಸ ನಮಗಿದೆ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
. ಭೋಪಾಲ್ | ಟ್ವಿಶಾ ಶರ್ಮಾ ಆತ್ಮಹತ್ಯೆ ಪ್ರಕರಣ: ವರದಿ ಕೇಳಿದ ಮಹಿಳಾ ಆಯೋಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.