ಮನ್ನಾರ್ಗುಡಿ: ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಅಧಿಕಾರಕ್ಕಾಗಿ ಸತತವಾಗಿ ನಿಷ್ಠೆಯನ್ನು ಬದಲಿಸಿಕೊಂಡು ಬಂದಿದ್ದು, ಅದಕ್ಕಾಗಿ ‘ಸಾಷ್ಟಾಂಗ ನಮಸ್ಕಾರ‘ ಮಾಡುವ ರಾಜಕೀಯ ಮಾಡಿಕೊಂಡು ಬಂದಿದ್ದಾರೆ ಎಂದು ತಮಿಳುನಾಡಿನ ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ವ್ಯಂಗ್ಯವಾಡಿದ್ದಾರೆ.

ಮನ್ನಾರ್ಗುಡಿಯ ಡಿಎಂಕೆ ಅಭ್ಯರ್ಥಿ, ಕೈಗಾರಿಕಾ ಸಚಿವ ಟಿ.ಆರ್.ಬಿ.ರಾಜಾ ಅವರ ಪರ ಭಾನುವಾರ ಪ್ರಚಾರ ನಡೆಸಿದ ಅವರು, ‘2026ರ ವಿಧಾನಸಭಾ ಚುನಾವಣೆಯು ಗುಲಾಮರು ಮತ್ತು ಸ್ವಾಭಿಮಾನದ ನಡುವಿನ ಯುದ್ಧವಾಗಿದೆ’ ಎಂದು ಬಣ್ಣಿಸಿದರು.

‘ಜೆ.ಜಯಲಲಿತಾ (ಎಐಎಡಿಎಂಕೆ ದಿವಂಗತ ನಾಯಕಿ) ಇರುವವರೆಗೂ ಪಳನಿಸ್ವಾಮಿ ಅವರ ಪಾದಗಳನ್ನು ಹಿಡಿದಿದ್ದರು. ಅವರ ನಿಧನದ ಬಳಿಕ ವಿ.ಕೆ. ಶಶಿಕಲಾ ಅವರ ಪಾದಗಳನ್ನು ಹಿಡಿದಿದ್ದರು. ಶಶಿಕಲಾ ಅವರು ಜೈಲಿಗೆ ಹೋದ ಬಳಿಕ, ಟಿ.ಟಿ.ವಿ.ದಿನಕರನ್ ಅವರ ಪಾದಗಳನ್ನು ಹಿಡಿದರು. ಇದೀಗ ಅವರು ದೆಹಲಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿ ಅವರ ಪಾದಗಳನ್ನು ಹಿಡಿದು ನೇತಾಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಪಳನಿಸ್ವಾಮಿ ಅವರು ತಮ್ಮ ರಾಜಕೀಯ ಬೆಳವಣಿಗೆಗೆ ನೆರವಾದ ಪ್ರತಿಯೊಬ್ಬರ ಬೆನ್ನಿಗೆ ಚೂರಿ ಹಾಕಿದ್ದಾರೆ’ ಎಂದ ಉದಯನಿಧಿ ಅವರು, ‘ದೆಹಲಿ ತಂಡಕ್ಕೆ ಅವರು ರಾಜ್ಯದ ಜನರ ಹಕ್ಕುಗಳನ್ನು ಬಿಟ್ಟುಕೊಟ್ಟಿದ್ದಾರೆ’ ಎಂದು ದೂರಿದರು.

‘ಅಧಿಕಾರ ಪಡೆಯುವುದಕ್ಕಾಗಿ ಸದಾ ನಿಷ್ಠೆ ಬದಲಿಸಿ, ಮತ್ತೊಬ್ಬರ ಕಾಲು ಹಿಡಿಯುವ ಅನುಭವ ಪಳನಿಸ್ವಾಮಿ ಅವರಿಗಿದೆ. ನನಗೆ ಅಂಥ ಅನುಭವವಿಲ್ಲ, ಬದಲಿಗೆ ನಾನು ಜನರ ಜತೆಯಲ್ಲಿದ್ದು, ಅವರ ಹಕ್ಕುಗಳಿಗಾಗಿ ಮಾತನಾಡುವ ವ್ಯಕ್ತಿಯಾಗಿದ್ದೇನೆ’ ಎಂದು ಅವರು ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.