ನವದೆಹಲಿ: ಅನುಮತಿ ಪಡೆಯದೆ ಮಿಜೋರಾಂ ರಾಜ್ಯ ಪ್ರವೇಶಿಸಿದ ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದ ಮೇಲೆ ಉಕ್ರೇನ್ನ ಆರು ಪ್ರಜೆಗಳನ್ನು ವಶಕ್ಕೆ ತೆಗೆದುಕೊಂಡಿರುವುದಕ್ಕೆ ಸಂಬಂಧಿಸಿದಂತೆ ಉಕ್ರೇನ್, ಮಂಗಳವಾರ ಭಾರತದ ಎದರು ತನ್ನ ಪ್ರತಿಭಟನೆ ದಾಖಲಿಸಿದೆ.

ಭಾರತದಲ್ಲಿರುವ ಉಕ್ರೇನ್ ರಾಯಭಾರಿ ಅಲೆಕ್ಸಾಂಡರ್ ಪೊಲಿಶ್ಚುಕ್ ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ (ಪಶ್ಚಿಮ) ಸಿಬಿ ಜಾರ್ಜ್ ಅವರನ್ನು ಭೇಟಿಯಾಗಿ ಪ್ರತಿಭಟನೆ ದಾಖಲಿಸಿದರು.

‘ಭಾರತದ ಅಧಿಕಾರಿಗಳ ವಶದಲ್ಲಿರುವ ಉಕ್ರೇನ್ ಪ್ರಜೆಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಹಾಗೂ ಅವರಿಗೆ ಉಕ್ರೇನ್ ರಾಯಭಾರ ಕಚೇರಿಯ ನೆರವು ಪಡೆಯಲು ಅವಕಾಶ ನೀಡುವಂತೆ ಪೊಲಿಶ್ಚುಕ್ ಕೋರಿದ್ದಾರೆ’ ಎಂದು ಉಕ್ರೇನ್ ವಿದೇಶಾಂಗ ಸಚಿವಾಲಯ ಮಂಗಳವಾರ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಕಾನೂನುಬಾಹಿರ ಚಟುವಟಿಕೆಗಳ ಆರೋಪದ ಮೇಲೆ ಉಕ್ರೇನ್ನ ಆರು ಪ್ರಜೆಗಳು ಮತ್ತು ಅಮೆರಿಕದ ಒಬ್ಬ ಪ್ರಜೆಯನ್ನು ಭಾರತದ ಕಾನೂನು ಜಾರಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಅಮೆರಿಕದ ಪ್ರಜೆಯನ್ನು ವಶಕ್ಕೆ ಪಡೆದಿರುವುದರ ಬಗ್ಗೆ ಕೇಳಿದಾಗ, ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ವಕ್ತಾರರು, ‘ಅಂತಹ ಬೆಳವಣಿಗೆ ನಮ್ಮ ಗಮನಕ್ಕೆ ಬಂದಿದೆ. ಗೌಪ್ಯತೆಯ ಕಾರಣಗಳಿಗಾಗಿ, ಅಮೆರಿಕದ ನಾಗರಿಕರನ್ನು ಒಳಗೊಂಡ ಪ್ರಕರಣಗಳ ಬಗ್ಗೆ ನಾವು ಪ್ರತಿಕ್ರಿಯಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

ವಿದೇಶಿ ಪ್ರಜೆಗಳು ಮಿಜೋರಾಂಗೆ ಏಕೆ ಬಂದಿದ್ದಾರೆ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಪ್ರಕರಣದ ಬಗ್ಗೆ ಭಾರತದ ಅಧಿಕಾರಿಗಳು ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.

‘ಉಕ್ರೇನ್ನ ಪ್ರಜೆಗಳು ಮಿಜೋರಾಂಗೆ ಅನಧಿಕೃತವಾಗಿ ಪ್ರವೇಶಿಸಿದ್ದಾರೆ ಎಂಬುದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ವಿದೇಶಿ ಪ್ರಜೆಗಳು ಮಿಜೋರಾಂ ಪ್ರವೇಶಿಸಲು ವಿಶೇಷ ಪರವಾನಗಿಯ ಅಗತ್ಯವಿದೆ’ ಎಂದು ಉಕ್ರೇನ್ನ ಪ್ರಕಟಣೆ ತಿಳಿಸಿದೆ.

‘ಈ ಪ್ರಕರಣವು ಭಾರತ ಮತ್ತು ಮ್ಯಾನ್ಮಾರ್ ಗಡಿಯನ್ನು ಅಕ್ರಮವಾಗಿ ದಾಟಿದ ಆರೋಪಕ್ಕೂ ಸಂಬಂಧಿಸಿದೆ’ ಎಂದು ಅದು ಹೇಳಿದೆ.

‘ಉಕ್ರೇನ್ ನಾಗರಿಕರು ಭಾರತ ಅಥವಾ ಮ್ಯಾನ್ಮಾರ್ ನೆಲದಲ್ಲಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಸಾಬೀತುಪಡಿಸುವ ಯಾವುದೇ ಸಾಕ್ಷ್ಯಗಳು ಇಲ್ಲ’ ಎಂದು ಪೊಲಿಶ್ಚುಕ್ ಅವರು ಸಿಬಿ ಜಾರ್ಜ್ ಅವರಿಗೆ ನೀಡಿದ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.