ನವದೆಹಲಿ: ಭಾರತ ಪ್ರಸ್ತುತ ತೀವ್ರ ತಾಪಮಾನ ಮತ್ತು ಬಿಸಿಗಾಳಿಯಿಂದ ತತ್ತರಿಸಿದ್ದು, ಕಲ್ಲಿದ್ದಲು, ತೈಲ ಹಾಗೂ ಅನಿಲಗಳಂತಹ ಪಳೆಯುಳಿಕೆ ಇಂಧನಗಳ ಅತಿಯಾದ ಬಳಕೆಯಿಂದ ಉಂಟಾಗುತ್ತಿರುವ ಹವಾಮಾನ ವೈಪರೀತ್ಯವೇ ಪ್ರಮುಖ ಕಾರಣ ಎಂದು ವಿಶ್ವಸಂಸ್ಥೆಯ ಹವಾಮಾನ ಮುಖ್ಯಸ್ಥ ಸೈಮನ್ ಸ್ಟೀಲ್ ಬುಧವಾರ ತಿಳಿಸಿದ್ದಾರೆ.

ಈ ತೀವ್ರ ಬಿಸಿಲಿನಿಂದಾಗಿ ಜನಸಾಮಾನ್ಯರ ಜೀವನ ಹಾಗೂ ಆರ್ಥಿಕತೆಯ ಮೇಲಾಗುತ್ತಿರುವ ಗಂಭೀರ ಪರಿಣಾಮಗಳ ಬಗ್ಗೆ ತಿಳಿಸಿರುವ ಅವರು, ಅದರಲ್ಲೂ ವಿಶೇಷವಾಗಿ ಕೂಲಿಂಗ್ ಸೌಲಭ್ಯಗಳಿಲ್ಲದ ಮನೆಗಳಲ್ಲಿ ವಾಸಿಸುವವರು ಮತ್ತು ಬಿಸಿಲಿನಲ್ಲಿ ದೀರ್ಘಕಾಲ ಹೊರಾಂಗಣದಲ್ಲಿ ಕೆಲಸ ಮಾಡುವ ಕಾರ್ಮಿಕರು ಈ ಪರಿಸ್ಥಿತಿಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
.ಛತ್ತೀಸಗಢದ ಬಲೋಡಬಜಾರ್ನಲ್ಲಿ ಅಪರೂಪದ ಭಾರತೀಯ ದೈತ್ಯ ಅಳಿಲು ಪತ್ತೆ.ಏಕಾದಶಿ ದಿನವೇ ಬಕ್ರಿದ್: ಬಲಿ ನೀಡದಿರಲು ನಿರ್ಧರಿಸಿದ ಪಂಢರಪುರದ ಮುಸ್ಲಿಮರು.
ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಚೌಕಟ್ಟಿನ (ಯುಎನ್ಎಫ್ಸಿಸಿಸಿ) ಕಾರ್ಯನಿರ್ವಾಹಕ ಕಾರ್ಯದರ್ಶಿಯಾಗಿರುವ ಸೈಮನ್ ಸ್ಟೀಲ್, ಜಾಗತಿಕ ಮಟ್ಟದಲ್ಲಿ ಹವಾಮಾನ ಬದಲಾವಣೆಯ ದುಷ್ಪರಿಣಾಮಗಳಿಗೆ ಹೊಂದಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಎಷ್ಟು ತುರ್ತು ಎಂಬುದನ್ನು ಈ ಪ್ರಸ್ತುತ ಪರಿಸ್ಥಿತಿ ನಮಗೆ ನೆನಪಿಸುತ್ತಿದೆ ಎಂದು ತಿಳಿಸಿದ್ದಾರೆ.

ಮಧ್ಯ ಮತ್ತು ವಾಯವ್ಯ ಭಾರತದಲ್ಲಿ ಮುಂದಿನ ಎರಡರಿಂದ ಮೂರು ದಿನಗಳ ಕಾಲ ತೀವ್ರ ಬಿಸಿಗಾಳಿ ಮುಂದುವರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬುಧವಾರ ಮುನ್ಸೂಚನೆ ನೀಡಿರುವ ಬೆನ್ನಲ್ಲೇ ವಿಶ್ವಸಂಸ್ಥೆಯ ಮುಖ್ಯಸ್ಥರ ಈ ಹೇಳಿಕೆ ಹೊರಬಿದ್ದಿದೆ.
.ದೇವರ ಕೃತ್ಯ: ನಿಲುವು ಬದಲಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ.RCB Vs GT ಪಂದ್ಯದ ವೇಳೆ ಗಮನಸೆಳೆದ ಅನುಷ್ಕಾ ಕೈಯಲ್ಲಿದ್ದ ಉಂಗುರ? ವಿಶೇಷತೆ ಏನು?.
ದೇಶದಾದ್ಯಂತ ಹೆಚ್ಚುತ್ತಿರುವ ತಾಪಮಾನದಿಂದಾಗಿ ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಬಳಕೆಯು ದಾಖಲೆ ಮಟ್ಟವನ್ನು ತಲುಪಿದೆ. ಆದರೆ, ಹಗಲಿನ ಅವಧಿಯಲ್ಲಿ ಈ ಬೇಡಿಕೆಯನ್ನು ಸರಿದೂಗಿಸಲು ಸೌರಶಕ್ತಿ ಮತ್ತು ಇತರ ನವೀಕರಿಸಬಹುದಾದ ಇಂಧನ ಮೂಲಗಳು ಪ್ರಮುಖ ಪಾತ್ರ ವಹಿಸಿವೆ. ಸೌರಶಕ್ತಿಯನ್ನು ಉತ್ತೇಜಿಸಲು ಭಾರತ ಸರ್ಕಾರ ಕೈಗೊಂಡಿರುವ ದಿಟ್ಟ ಕ್ರಮಗಳು ಈ ಸಂದರ್ಭದಲ್ಲಿ ವರದಾನವಾಗಿವೆ ಎಂದು ಸ್ಟೀಲ್ ಶ್ಲಾಘಿಸಿದ್ದಾರೆ.

ಪಶ್ಚಿಮ ಏಷ್ಯಾ ಸಂಘರ್ಷಗಳಿಂದಾಗಿ ಜಾಗತಿಕವಾಗಿ ಇಂಧನ ಆಮದು ದರಗಳು ಗಗನಕ್ಕೇರುತ್ತಿರುವ ಈ ಸಂದರ್ಭದಲ್ಲಿ, ಇತ್ತ ಹವಾಮಾನ ವೈಪರೀತ್ಯದ ಬಿಸಿಲು ಜನರ ಜೀವನ ಮತ್ತು ಜೀವನೋಪಾಯಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಸ್ಟೀಲ್ ಆತಂಕ ವ್ಯಕ್ತಪಡಿಸಿದ್ದಾರೆ.
.IPL ಎಲಿಮಿನೇಟರ್ | ವೈಭವ್ ವಿಕ್ರಮ; ಹೈದರಾಬಾದ್ ಎದುರು ರಾಯಲ್ಸ್ ವಿಜಯ.ಯುಪಿಎಸ್ಸಿ: 2026ರ ಪೂರ್ವಭಾವಿ ಪರೀಕ್ಷೆಯ ತಾತ್ಕಾಲಿಕ ಉತ್ತರ ಪತ್ರಿಕೆ ಪ್ರಕಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.