ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಲಿತ ಯುವಕನ ಶುಲ್ಕ ಪಾವತಿಸಲು ಮುಂದಾದ ಉತ್ತರ ಪ್ರದೇಶ ಸರ್ಕಾರ

Published : 2 ಅಕ್ಟೋಬರ್ 2024, 12:22 IST
Last Updated : 2 ಅಕ್ಟೋಬರ್ 2024, 12:22 IST
ಫಾಲೋ ಮಾಡಿ
Comments

ಲಖನೌ: ಶುಲ್ಕ ಪಾವತಿಸಲು ಸಾಧ್ಯವಾಗದ ಕಾರಣ ದಲಿತ ಯುವಕ ಅತುಲ್‌ ಕುಮಾರ್‌ ಅವರ ಪ್ರವೇಶಾತಿಯನ್ನು ನಿರಾಕರಿಸಿದ್ದ ಐಐಟಿ ಧನಬಾದ್‌ ಪ್ರಕರಣಕ್ಕೆ ಸಂಬಂಧಿಸಿ, ಯುವಕನ ನಾಲ್ಕು ವರ್ಷಗಳ ಸಂಪೂರ್ಣ ಶುಲ್ಕವನ್ನು ಪಾವತಿಸುವುದಾಗಿ ಉತ್ತರ ಪ್ರದೇಶ ಸರ್ಕಾರ ಬುಧವಾರ ಹೇಳಿದೆ.

ವಿದ್ಯಾರ್ಥಿವೇತನದ ಮೂಲಕ ಕಾಲೇಜು ಶುಲ್ಕವನ್ನು ಪಾವತಿಸುವುದಾಗಿ ಸಮಾಜ ಕಲ್ಯಾಣ ಇಲಾಖೆ ಹೇಳಿದೆ. ಪ್ರವೇಶಾತಿ ದೊರಕದ ಕಾರಣಕ್ಕಾಗಿ ಅತುಲ್‌ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ‘ಅತುಲ್‌ ಅವರಿಗೆ ಸೀಟೊಂದನ್ನು ಸೃಷ್ಟಿಸಿ’ ಎಂದು ನ್ಯಾಯಾಲಯ ಕಾಲೇಜಿಗೆ ನಿರ್ದೇಶನ ನೀಡಿತ್ತು.

ಸುಪ್ರೀಂ ಕೋರ್ಟ್‌ನ ನಿರ್ದೇಶನದ ಸುದ್ದಿ ತಿಳಿದ ಮುಖ್ಯಮಂತ್ರಿ ಆದಿತ್ಯನಾಥ್‌ ಅವರು, ಯುವಕನಿಗೆ ಅವಶ್ಯವಿರುವ ಎಲ್ಲ ಸಹಕಾರ ನೀಡಲು ಮುಂದಾಗಿದ್ದಾರೆ. ಸಮಾಜ ಕಲ್ಯಾಣ ಸಚಿವ ಆಸಿಮ್‌ ಅರುಣ್‌ ಅವರು, ಅತುಲ್‌ ಅವರ ಕುಟುಂಬವನ್ನು ಸಂಪರ್ಕಿಸಿ, ಆರ್ಥಿಕ ನೆರವು ನೀಡುವ ಕುರಿತು ಮಾತನಾಡಿದರು. ವಿದ್ಯಾರ್ಥಿಗೆ ಎಲ್ಲ ರೀತಿಯ ಅನುಕೂಲ ಮಾಡಿಕೊಡಬೇಕು ಎಂದು ಐಐಟಿ ಧನಬಾದ್‌ಗೆ ಸರ್ಕಾರ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT