ನವದೆಹಲಿ: 2025 ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆ (ಯುಪಿಎಸ್ಸಿ)ಯ ಫಲಿತಾಂಶ ಪ್ರಕಟಗೊಂಡಿದ್ದು, ರಾಜಸ್ಥಾನದ ಜೋಧಪುರದಲ್ಲಿರುವ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಯಲ್ಲಿ ಎಂಬಿಬಿಎಸ್ ಪದವಿ ಪಡೆದ ಅನುಜ್ ಅಗ್ನಿಹೋತ್ರಿ ಅವರು ಮೊದಲ ರ್ಯಾಂಕ್ ಪಡೆದಿದ್ದಾರೆ.

ಸತತ ಮೂರನೇ ಪ್ರಯತ್ನದಲ್ಲಿ ಅಗ್ನಿಹೋತ್ರಿ ಮೊದಲ ರ್ಯಾಂಕ್ ಪಡೆದಿದ್ದು, ಮುಖ್ಯ ಪರೀಕ್ಷೆಯಲ್ಲಿ ವೈದ್ಯಕೀಯ ವಿಷಯವನ್ನೇ ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡಿದ್ದರು.

‘ಈ ಸಾಧನೆಯಿಂದ ತುಂಬಾ ಖುಷಿಯಾಗಿದೆ. ಇದೊಂದು ಅದ್ಭುತ ಭಾವನೆ’ ಎಂದು ರಾಜಸ್ಥಾನದ ಚಿತ್ತೋಡಗಢದಲ್ಲಿರುವ ತಮ್ಮ ನಿವಾಸದಲ್ಲಿ ಸಂತಸ ಹಂಚಿಕೊಂಡಿದ್ದಾರೆ.

‘ನನ್ನ ಸಾಧನೆಗೆ ನನ್ನ ಕುಟುಂಬಸ್ಥರೇ ಕಾರಣ. ಅವರೇ ಸ್ಫೂರ್ತಿಯ ಅತೀ ದೊಡ್ಡ ಮೂಲವಾಗಿದ್ದಾರೆ. ಅವರು ನನಗೆ ಹಾಗೂ ನನ್ನ ಆದ್ಯತೆಗಳಿಗೆ ಬೆಂಬಲವಾಗಿ ನಿಂತರು. ಇದರಿಂದ, ನಾನು ಪರೀಕ್ಷೆ ಮೇಲೆ ಕೇಂದ್ರಿಕರಿಸಲು ಸಾಧ್ಯವಾಯಿತು. ಈ ಶ್ರೇಯಸ್ಸನ್ನು ಕುಟುಂಬಕ್ಕೆ ಸಲ್ಲಿಸುತ್ತೇನೆ’ ಎಂದು ವಿವರಿಸಿದ್ದಾರೆ.

ಎರಡನೇ ರ್ಯಾಂಕ್ ಪಡೆದ ರಾಜೇಶ್ವರಿ ಅವರು ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯದಿಂದ ಬಿ.ಇ ಪದವಿ ಪಡೆದಿದ್ದಾರೆ. ಸಮಾಜಶಾಸ್ತ್ರ ವಿಷಯವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡು ಈ ಸಾಧನೆ ಮಾಡಿದ್ದಾರೆ.

ದೆಹಲಿ ವಿಶ್ವವಿದ್ಯಾಲಯದಿಂದ ಬಿ.ಕಾಂ ಪದವೀಧರರಾದ ಆಕಾಂಕ್ಷ್ ಮೂರನೇ ರ್ಯಾಂಕ್ ಪಡೆದಿದ್ದು, ರಾಘವ್ ಜುಂಜುನ್ವಾಲಾ ಹಾಗೂ ಇಶಾನ್ ಭಟ್ನಾಗರ್ ಅವರು ಐದನೇ ರ್ಯಾಂಕ್ ಪಡೆದಿದ್ದಾರೆ. ರಾಘವ್ ಅವರು ದೆಹಲಿ ವಿಶ್ವವಿದ್ಯಾಲಯದಿಂದ ಬಿ.ಎ ಪದವಿ ಪಡೆದಿದ್ದು, ಇಶಾನ್ ಅವರು ದೆಹಲಿ ನ್ಯಾಷನಲ್ ಲಾ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದಾರೆ.

ಅಂಕಿ ಅಂಶಗಳು

937876 ಪರೀಕ್ಷೆಗೆ ಹಾಜರಾಗಲು ಅರ್ಜಿ ಸಲ್ಲಿಸಿದವರು

576793 ಪ್ರಾಥಮಿಕ ಹಂತದ ಪರೀಕ್ಷೆಗೆ ಹಾಜರಾದವರು

14161 ಲಿಖಿತ (ಮುಖ್ಯ) ಪರೀಕ್ಷೆಗೆ ಅರ್ಹತೆ ಪಡೆದವರು

2736 ಅಂತಿಮ ಪರೀಕ್ಷೆಗೆ (ವ್ಯಕ್ತಿತ್ವ ಪರೀಕ್ಷೆ) ಅರ್ಹತೆ ಗಳಿಸಿದವರು

958 ಅಭ್ಯರ್ಥಿಗಳ ಆಯ್ಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.