ವಂದೇ ಮಾತರಂ ಪ್ರಸ್ತುತಿ: ಗೊತ್ತಿರಲಿಲ್ಲ– ಸಿ.ಎಂ
ತಿರುವನಂಪುರ: ‘ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ವಂದೇ ಮಾತರಂನ ಪೂರ್ಣ ಸಾಲುಗಳನ್ನು ಹಾಡಲಾಗುತ್ತದೆ ಎಂಬುದರ ಕುರಿತು ನನಗಾಗಲೀ ನನ್ನ ಸಹೋದ್ಯೋಗಿಗಳಿಗಾಗಲಿ ಮೊದಲೇ ತಿಳಿದಿರಲಿಲ್ಲ’ ಎಂದು ಕೇರಳಂ ಮುಖ್ಯಮಂತ್ರಿ ವಿ.ಡಿ.ಸತೀಶನ್ ತಿಳಿಸಿದರು. ಈ ಕುರಿತ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಸಮಾರಂಭ ಲೋಕಭವನದ ನಿರ್ಧಾರದಂತೆ ನಡೆದಿದೆ. ಆದರೆ ವಂದೇ ಮಾತರಂನ ಪೂರ್ಣ ಸಾಲುಗಳನ್ನು ಹಾಡಲಾಗುತ್ತದೆ ಎಂಬುದನ್ನು ಮುಂಬರುವ ಸರ್ಕಾರಕ್ಕೆ ಮುಂಚಿತವಾಗಿ ತಿಳಿಸಿರಲಿಲ್ಲ ಎಂದರು.