ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಧ್ಯಪ್ರದೇಶ: ಸತ್ನಾ ನದಿಗೆ ಹಸುಗಳನ್ನು ನೂಕಿದ ಜನರ ಗುಂಪು; ಹರಿದಾಡಿದ ವಿಡಿಯೊ

Published : 28 ಆಗಸ್ಟ್ 2024, 10:07 IST
Last Updated : 28 ಆಗಸ್ಟ್ 2024, 10:07 IST
ಫಾಲೋ ಮಾಡಿ
Comments

ಸತ್ನಾ: ಜನರ ಗುಂಪೊಂದು ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ತುಂಬಿ ಹರಿಯುತ್ತಿರುವ ನದಿಗೆ ಹಸುಗಳನ್ನು ನೂಕಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಈ ಸಂಬಂಧ ನಗೋಡ ಠಾಣಾ ವ್ಯಾಪ್ತಿಯ ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ 15–20 ಹಸುಗಳು ಮೃತಪಟ್ಟಿವೆ. ಮಂಗಳವಾರ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಘಟನೆಯ ಸತ್ಯಾಸತ್ಯತೆಯ ಬಗ್ಗೆ ಖಚಿತ ಮಾಹಿತಿ ಕಲೆಹಾಕಬೇಕಿದೆ ಎಂದು ಪೊಲೀಸರು ಬುಧವಾರ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಮಂಗಳವಾರ ಸಂಜೆ ವೇಳೆಗೆ ರೈಲು ಹಳಿಯಿಂದ ಸತ್ನಾ ನದಿಗೆ ಕೆಲವರು ಹಸುಗಳನ್ನು ನೂಕುವ ದೃಶ್ಯಗಳಿರುವ ವಿಡಿಯೊ ಹರಿದಾಡುತ್ತಿತ್ತು. ಅದನ್ನು ಆಧರಿಸಿ ಪೊಲೀಸರ ತಂಡ ಮಾಹಿತಿ ಕಲೆಹಾಕಲು ಸ್ಥಳಕ್ಕೆ ತೆರಳಿತ್ತು. ನಂತರ ಪ್ರಕರಣ ದಾಖಲಿಸಲಾಗಿದೆ ಎಂದು ನಗೋಡ ಠಾಣಾ ವ್ಯಾಪ್ತಿಯ ಪೊಲೀಸ್‌ ಅಧಿಕಾರಿ ಅಶೋಕ್‌ ಪಾಂಡೆ ತಿಳಿಸಿದ್ದಾರೆ.

ಬೆಟಾ ಬಗ್ರಿ, ರವಿ ಬಗ್ರಿ, ರಾಮ್‌ಪಾಲ್‌ ಚೌಧರಿ, ರಜಿಲು ಚೌಧರಿ ಎನ್ನುವವರ ಮೇಲೆ ಪ್ರಕರಣ ದಾಖಲಿಸಲಾಗಿದೆ. 

ಪ್ರಾಥಮಿಕ ಮಾಹಿತಿ ಪ್ರಕಾರ, ಸುಮಾರು 50 ಹಸುಗಳನ್ನು ನದಿಗೆ ನೂಕಲಾಗಿದೆ ಅವುಗಳಲ್ಲಿ 15–20 ಹಸುಗಳು ಮೃತಪಟ್ಟಿವೆ. ರಕ್ಷಣಾ ಕಾರ್ಯ ಮುಂದುವರಿದಿದೆ. ಎಷ್ಟು ಹಸುಗಳನ್ನು ನೂಕಲಾಗಿದೆ, ಎಷ್ಟು ಮೃತಪಟ್ಟಿವೆ, ಯಾವ ಕಾರಣಕ್ಕೆ ಈ ಕೃತ್ಯ ಎಸಗಲಾಗಿದೆ ಎನ್ನುವುದು ತನಿಖೆಯ ಮೂಲಕ ತಿಳಿಯಬೇಕಿದೆ ಎಂದು ಪಾಂಡೆ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT