ಚೆನ್ನೈ: ತಮಿಳುನಾಡಿನ 17ನೇ ಮುಖ್ಯಮಂತ್ರಿಯಾಗಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ಜೋಸೆಫ್ ವಿಜಯ್ ಅಧಿಕಾರ ವಹಿಸಿಕೊಂಡ ಬಳಿಕ ವಿಧಾನಸಭೆಯಲ್ಲಿ ಮೊದಲ ದಿನವು ಅತ್ಯಂತ ಕುತೂಹಲದಿಂದ ಕೂಡಿತ್ತು. ಮೊದಲ ಅಧಿವೇಶನದಲ್ಲಿ ಭಾಗಿಯಾಗಿದ್ದ ವಿಜಯ್ ಹಲವು ಕ್ಷಣಗಳಿಗೆ ಸಾಕ್ಷಿಯಾಗಿದ್ದರು.

ವಿಜಯ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಮರುದಿನವೇ ಮಾಜಿ ಸಿಎಂ, ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿ ಮಾಡಿದ್ದು ಅಚ್ಚರಿಗೆ ಕಾರಣವಾಗಿತ್ತು.
.ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ ಸೇರಿ ಈ ದಿನದ ಪ್ರಮುಖ 10 ಸುದ್ದಿಗಳು .ವಿಶೇಷ ಮಕ್ಕಳ ಬಗ್ಗೆ ಅನುಕಂಪಕ್ಕಿಂತ, ಅವರ ಸ್ವೀಕೃತಿ ಮುಖ್ಯ: ಮಾಳವಿಕಾ ಅವಿನಾಶ್.
ವಿಧಾನಸಭೆಯಲ್ಲಿ ಟಿವಿಕೆ ಯುವ ಶಾಸಕರು

ಮೊದಲ ಬಾರಿಗೆ ವಿಧಾನಸಭೆಗೆ ಕಾಲಿಟ್ಟ ಟಿವಿಕೆ ಪಕ್ಷದ ಬಹುತೇಕ ಯುವ ಶಾಸಕರಲ್ಲಿ ಹೊಸ ಉತ್ಸಾಹ ಕಂಡುಬಂದಿತು. ಮಾರ್ಷಲ್ ಮತ್ತು ವಿಧಾನಸಭೆ ಸಿಬ್ಬಂದಿ ಹೊಸಬರಿಗೆ ಸಭಾಂಗಣದಲ್ಲಿ ಮೀಸಲಿಟ್ಟ ಆಸನಗಳನ್ನು ಗುರುತಿಸಲು ಮಾರ್ಗದರ್ಶನ ನೀಡಿದರು.

ವಿಜಯ್ ಸೌಜನ್ಯ

ಶಾಸಕರಾಗಿ ಪ್ರಮಾಣವಚನ ಸ್ವೀಕರಿಸುವ ಮೊದಲು ಮತ್ತು ನಂತರ ಮಾಜಿ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ, ಮಾಜಿ ಸಚಿವ ತಂಗಂ ತೇನರಸು, ಪಿಎಂಕೆ ನಾಯಕಿ ಸೌಮ್ಯಾ ಅನ್ಬುಮಣಿ ಮತ್ತು ಡಿಎಂಡಿಕೆ ಮುಖ್ಯಸ್ಥೆ ಪ್ರೇಮಲತಾ ವಿಜಯಕಾಂತ್ ಅವರು ನೀಡಿದ 'ವಣಕ್ಕಂ' ಶುಭಾಶಯಕ್ಕೆ ಮುಖ್ಯಮಂತ್ರಿ ವಿಜಯ್ ಅವರು ಮುಗುಳ್ನಗೆಯೊಂದಿಗೆ ಸ್ಪಂದಿಸಿದರು.
.ಗೃಹಲಕ್ಷ್ಮಿ ಯೋಜನೆ | ಮಾರ್ಚ್ ಕಂತಿನ ಹಣ ನಾಲ್ಕೈದು ದಿನಗಳಲ್ಲಿ ಜಮೆ: ಹೆಬ್ಬಾಳಕರ.ಅಂಚೆಮತ ಮರುಎಣಿಕೆ ಫಲಿತಾಂಶಕ್ಕೆ SC ತಡೆ:ಶೃಂಗೇರಿ ಶಾಸಕರಾಗಿ ರಾಜೇಗೌಡ ಮುಂದುವರಿಕೆ.
ಹಿರಿಯ ನಾಯಕನಿಗೆ ವಿಶೇಷ ಗೌರವ

ಸಭೆಯಲ್ಲಿ ಹಿರಿಯ ನಾಯಕ ಕೆ.ಎ. ಸೆಂಗೊಟ್ಟೈಯನ್ ಅವರು ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಲು ಬಂದಾಗ, ಮುಖ್ಯಮಂತ್ರಿ ವಿಜಯ್ ಅವರು ತಮ್ಮ ಆಸನದಿಂದ ಎದ್ದು ನಿಂತು ಹಸ್ತಲಾಘವ ಮಾಡುವ ಮೂಲಕ ಗೌರವ ಸೂಚಿಸಿದರು. ಸೆಂಗೊಟ್ಟೈಯನ್ ಅವರು ವಿಜಯ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಮಾರ್ಗದರ್ಶನ ನೀಡಿದ್ದರು ಎಂಬುದು ಗಮನಾರ್ಹ. ಕುತೂಹಲದ ವಿಷಯವೆಂದರೆ, ಸೆಂಗೊಟ್ಟೈಯನ್ ಅವರು ಜಯಲಲಿತಾ ಅವರ ಫೋಟೊವನ್ನು ತಮ್ಮ ಶರ್ಟ್ ಜೇಬಿನಲ್ಲಿ ಇರಿಸಿಕೊಂಡಿದ್ದರು.

ಪ್ರಮಾಣವಚನದ ವೇಳೆ ನಡೆದ ಎಡವಟ್ಟುಗಳು

ಟಿವಿಕೆ ಸಂಪುಟದ ಸಚಿವೆ ಎಸ್. ಕೀರ್ತನಾ ಅವರು ಚುನಾವಣಾ ಪ್ರಮಾಣಪತ್ರವನ್ನು ತರಲು ಮರೆತಿದ್ದರಿಂದ ನಿಯಮದಂತೆ ಅವರಿಗೆ ತಕ್ಷಣ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಾಗಲಿಲ್ಲ. ನಂತರ ಪ್ರಮಾಣಪತ್ರ ಸಲ್ಲಿಸಿದ ಬಳಿಕವಷ್ಟೇ ಅವರು ಶಾಸಕಿಯಾಗಿ ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸಿದರು.

ಮತ್ತೊಬ್ಬ ಶಾಸಕ ಆರ್. ಕುಮಾರ್ ಅವರು ತಮ್ಮ ಪಕ್ಕದ ಶಾಸಕರ ಪ್ರಮಾಣಪತ್ರವನ್ನು ಹಿಡಿದು ಬಂದಿದ್ದರು, ಇದನ್ನು ಗುರುತಿಸಿದ ಕಾರ್ಯದರ್ಶಿಗಳು ಅವರ ಸ್ವಂತ ಪ್ರಮಾಣಪತ್ರ ತರುವಂತೆ ಸೂಚಿಸಿದರು.

ಶ್ರೀರಂಗಂ ಶಾಸಕ ಎಸ್. ರಮೇಶ್ ಅವರು ತಮ್ಮ ಪತ್ನಿ ಮತ್ತು ಪುಟ್ಟ ಮಗಳೊಂದಿಗೆ ವಿಧಾನಸಭೆಗೆ ಆಗಮಿಸಿದ್ದು ಎಲ್ಲರ ಗಮನ ಸೆಳೆಯಿತು.
.ಭಾರತ ಯಾರ ಮುಂದೆಯೂ ತಲೆಬಾಗದು: ಸೋಮನಾಥದಲ್ಲಿ ಪ್ರಧಾನಿ ಮೋದಿ .ಮುಂಬೈ ವಿರುದ್ಧ ರೋಚಕ ಗೆಲುವು, ಆದರೂ RCB ಕೋಚ್ಗೆ ಬಿತ್ತು ದಂಡ.
ನೂತನ ಸಭಾಧ್ಯಕ್ಷರ ಆಯ್ಕೆ

ಮಂಗಳವಾರ (ಮೇ 12) ನಡೆಯಲಿರುವ ಚುನಾವಣೆಯಲ್ಲಿ ಹಿರಿಯ ನಾಯಕ ಜೆ.ಸಿ.ಡಿ. ಪ್ರಭಾಕರ್ ಅವರನ್ನು ವಿಧಾನಸಭೆಯ ಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಈ ಹಿಂದೆ ಎಐಎಡಿಎಂಕೆಯಲ್ಲಿದ್ದ ಇವರು ಕೆಲವು ತಿಂಗಳ ಹಿಂದೆ ಟಿವಿಕೆ ಸೇರಿದ್ದರು. ಎಂ.ರವಿಶಂಕರ್ ಅವರು ಉಪಸಭಾಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.