ಚೆನ್ನೈ: ಸಿನಿಮಾ ತಾರೆಗಳ ಆಕರ್ಷಣೆಯಿಂದ ಪ್ರತಿ ಸಲವೂ ತಮಿಳುನಾಡು ವಿಧಾನಸಭೆ ಚುನಾವಣೆ ರಂಗು ರಂಗಾಗಿರುತ್ತದೆ. ಈ ಸಾರಿಯೂ ಇದಕ್ಕೇನು ಹೊರತಲ್ಲ.

ಚಿತ್ರರಂಗದಲ್ಲಿ ಉತ್ತುಂಗದಲ್ಲಿರುವಾಗಲೇ ದಳಪತಿ ವಿಜಯ್ ಅವರು ಟಿವಿಕೆ ಎಂಬ ಪಕ್ಷ ಕಟ್ಟಿ ಸಕ್ರಿಯ ರಾಜಕಾರಣಕ್ಕೆ ಧುಮುಕಿ ಇದೀಗ ತಮಿಳುನಾಡು ವಿಧಾನಸಭೆ ಚುನಾವಣೆಯ ಕೇಂದ್ರ ಬಿಂದುವಾಗಿದ್ದಾರೆ.

ಎಲ್ಲ 234 ವಿಧಾನಸಭಾ ಕ್ಷೇತ್ರಗಳಲ್ಲೂ ಸ್ಪರ್ಧಿಸಿರುವ ವಿಜಯ್ ಅವರ ಟಿವಿಕೆ ಅಭ್ಯರ್ಥಿಗಳು ಪ್ರಮುಖ ಪಕ್ಷದ ಅಭ್ಯರ್ಥಿಗಳನ್ನು ಎದುರಿಸಲು ನಾನಾ ಕಸರತ್ತು ನಡೆಸುತ್ತಿದ್ದಾರೆ. ವಿಜಯ್ ಅವರು ಕಾಲಿಗೆ ಚಕ್ರ ಕಟ್ಟಿಕೊಂಡವರ ರೀತಿ ಪ್ರಚಾರದಲ್ಲಿ ತಿರುಗುತ್ತಿದ್ದರೂ ಅವರು ಬಹಳಷ್ಟು ಕ್ಷೇತ್ರಗಳಲ್ಲಿ ಹಾಜರಾಗಲು ಆಗುತ್ತಿಲ್ಲ.

ಇದಕ್ಕೆ ಪ್ರಮುಖ ಕಾರಣಗಳೆಂದರೆ, ವಿಜಯ್ ಅವರು ಯಾವುದೇ ಕ್ಷೇತ್ರಕ್ಕೆ ಪ್ರಚಾರಕ್ಕೆ ಹೋಗಬೇಕಾದರೆ ಸಾಕಷ್ಟು ಪೂರ್ವಾನುಮತಿಗಳನ್ನು ಪಡೆದು, ಪೂರ್ವ ತಯಾರಿಗಳನ್ನು ಮಾಡಿಕೊಂಡು ಹೋಗಬೇಕಾಗಿದೆ. ಇದಕ್ಕೆ ಸಮಯ ಹಿಡಿಯುತ್ತಿದೆ. ಅಷ್ಟೇ ಅಲ್ಲ ಯಾವುದೇ ಕ್ಷೇತ್ರದಲ್ಲಿ ಪ್ರಚಾರಕ್ಕೆ ತೆರಳಿದರೆ ಅಲ್ಲಿ ಅಭಿಮಾನಿಗಳ ಕಾಟ, ಜನದಟ್ಟಣೆಯಿಂದ ಅವರು ವೇಗವಾಗಿ ಮುಂದಿನ ಕ್ಷೇತ್ರಗಳಿಗೆ ಹೋಗಲು ಆಗುತ್ತಿಲ್ಲ.

ಇದರಿಂದ ಟಿವಿಕೆಯ ಕೆಲ ಅಭ್ಯರ್ಥಿಗಳು ನಿರಾಸೆ ಅನುಭವಿಸುತ್ತಿದ್ದಾರೆ. ಆದರೆ, ಇದಕ್ಕೆ ಕೆಲ ಅಭ್ಯರ್ಥಿಗಳು ಕೈ ಕಟ್ಟಿ ಕುಳಿತುಕೊಳ್ಳದೇ ತಂತ್ರಜ್ಞಾನದ ಉಪಾಯ ಕಂಡುಕೊಂಡಿದ್ದಾರೆ.

ಪ್ರಚಾರದಲ್ಲಿ ವಿಜಯ್ ಅವರ ಅನುಪಸ್ಥಿತಿಯನ್ನು ಹೋಗಲಾಡಿಸಲು ಕುಂಬಕೋಣ ವಿಧಾನಸಭಾ ಕ್ಷೇತ್ರದ ಟಿವಿಕೆ ಅಭ್ಯರ್ಥಿ 3ಡಿ ಹಾಲೋಗ್ರಾಮ್ ((3D Hologram) ಮೊರೆ ಹೋಗಿದ್ದಾರೆ.

ಈಗಾಗಲೇ ಅಸ್ತಿತ್ವದಲ್ಲಿರುವ 3ಡಿ ಹಾಲೋಗ್ರಾಮ್ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಟಿವಿಕೆ ಅಭ್ಯರ್ಥಿಗಳು ಭಾರಿ ಉತ್ಸುಕರಾಗಿದ್ದಾರೆ.

ಕುಂಬಕೋಣ ವಿಧಾನಸಭಾ ಕ್ಷೇತ್ರದ ಟಿವಿಕೆ ಅಭ್ಯರ್ಥಿ ವಿನೋದ್ ರವಿ ಅವರು ಏಪ್ರಿಲ್ 12 ರಂದು ನಟ ವಿಜಯ್ ಅವರ 3ಡಿ ಹಾಲೋಗ್ರಾಮ್ ಬಳಸಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ. ಇದಕ್ಕೆ ಮತದಾರರಿಂದ ಭಾರಿ ಪ್ರತಿಕ್ರಿಯೆ ಸಿಕ್ಕಿದೆ.

ಅಭ್ಯರ್ಥಿ ಪಕ್ಕ ನಿಜವಾಗಿಯೂ ಪಕ್ಷದ ಮುಖ್ಯಸ್ಥ ವಿಜಯ್ ಅವರು ಇದ್ದಾರೆ, ಮಾತನಾಡುತ್ತಿದ್ದಾರೆ ಎಂಬ ಭ್ರಮೆಯನ್ನು ಈ ತಂತ್ರಜ್ಞಾನ ಸೃಸ್ಟಿಸುತ್ತದೆ.

ಈ ಕುರಿತು ಮಾತನಾಡಿರುವ ಟಿವಿಕೆ ಖಜಾಂಚಿ ವಿಜಯ್ ಚಂದ್ರನ್ ಅವರು, ನಮಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಎಐ ಮತ್ತು ಡೆಟಾ ಸೈನ್ಸ್ನ ಮೂರನೇ ವರ್ಷದ ವಿದ್ಯಾರ್ಥಿ ಪ್ರವೀಣ್ ಅವರ ಬಳಿ ಮಾತನಾಡಿದ್ದೆ. ಅದೃಷ್ಟವಶಾತ್ ಅವರೂ ಸಹ 3ಡಿ ಹಾಲೋಗ್ರಾಮ್ ತಂತ್ರಜ್ಞಾನದ ಬಗ್ಗೆಯೇ ಎಜನ್ಸಿಯೊಂದನ್ನು ತೆರೆಯಬೇಕೆಂದುಕೊಂಡಿದ್ದರು. ಹೀಗೆ ಅವರಿಂದ ನಮಗೆ ಅನುಕೂಲ ಆಗಿದೆ ಎಂದು ಹೇಳಿದರು.

ಒಂದು ದಿನದ ಪ್ರಚಾರದಲ್ಲಿ 3ಡಿ ಹಾಲೋಗ್ರಾಮ್ ತಂತ್ರಜ್ಞಾನ ಬಳಸಲು ಸುಮಾರು ₹2ರಿಂದ ₹3 ಲಕ್ಷ ಖರ್ಚಾಗುತ್ತದೆ. ಆದರೂ, ಎಐ ಬಳಸಿ ಹಾಲೋಗ್ರಾಮ್ನಲ್ಲಿರುವ ವಿಜಯ್ ಅವರು ವಾಸ್ತವಕ್ಕೆ ಹತ್ತಿರ ಎನ್ನುವಂತೆ ಭಾಷಣ ಮಾಡುತ್ತಾರೆ. ಇದು ಸದ್ಯಕ್ಕಂತೂ ಭಾರಿ ಪರಿಣಾಮಕಾರಿಯಾಗಿರುತ್ತದೆ ಎಂದಿದ್ದಾರೆ.

ಪ್ರಚಾರ ಕೊನೆಗೊಳ್ಳುವ ದಿನದವರೆಗೆ ಸುಮಾರು 200 ವಿಧಾನಸಭಾ ಕ್ಷೇತ್ರಗಳಲ್ಲಿ ವಿಜಯ್ ಅವರ 3ಡಿ ಹಾಲೋಗ್ರಾಮ್ ಪ್ರಚಾರ ಮಾಡಲಿದೆ ಎಂದು ಚಂದ್ರನ್ ಹೇಳಿದ್ದಾರೆ.

3ಡಿ ಹಾಲೋಗ್ರಾಮ್ ವೈರಲ್ ಆಗುತ್ತಿದ್ದಂತೆಯೇ ಡಿಎಂಕೆ, ಎಐಎಡಿಎಂಕೆ ಹಾಗೂ ಬಿಜೆಪಿ ಅಭ್ಯರ್ಥಿಗಳೂ ತಮಗೂ ಆ ತಂತ್ರಜ್ಞಾನ ಒದಗಿಸಿಕೊಡಲು ಸಹಾಯ ಮಾಡಿ ಎನ್ನುತ್ತಿದ್ದಾರೆ ಎಂದು ಪ್ರವೀಣ್ ತಿಳಿಸಿದ್ದಾರೆ.

ಏನಿದು 3ಡಿ ಹಾಲೊಗ್ರಾಮ್

3ಡಿ ಹಾಲೊಗ್ರಾಮ್ ಎಂಬುದು ಲೇಸರ್ ಬೆಳಕಿನ ಕಿರಣಗಳನ್ನು ಬಳಸಿ ಸೃಷ್ಟಿಸಲಾದ, ಗಾಳಿಯಲ್ಲಿ ತೇಲುತ್ತಿರುವಂತೆ ಕಾಣುವ 3ಡಿ ಚಿತ್ರವಾಗಿದೆ.

ಇದು ಸಾಮಾನ್ಯ ಪ್ರೊಜೆಕ್ಟರ್ಗಳಿಗಿಂತ ಭಿನ್ನವಾಗಿದ್ದು, ಯಾವುದೇ ವಿಶೇಷ ಕನ್ನಡಕವಿಲ್ಲದೆ ಬರಿಗಣ್ಣಿನಿಂದ ಬೇರೆ ಬೇರೆ ಕೋನಗಳಿಂದ ನೋಡಬಹುದು. ಇದು ಹಳೆಯ ತಂತ್ರಜ್ಞಾನವಾದರೂ ಹೆಚ್ಚು ಖರ್ಚಿನದ್ದಾಗಿದೆ.

ಕಳೆದ ವಾರ ಚೆನ್ನೈನಲ್ಲಿ ಟಿವಿಕೆ ಅಭ್ಯರ್ಥಿಯೊಬ್ಬರು ತಮ್ಮ ಪ್ರಚಾರದಲ್ಲಿ ವಿಜಯ್ ಅವರ ಪ್ರತಿಮೆ ಇಟ್ಟುಕೊಂಡು ಓಡಾಡಿದ್ದರು. ಟಿವಿಕೆ ಕಚೇರಿಯಲ್ಲಿ ಇಂಥ ಹಲವಾರು ಪ್ರತಿಮೆಗಳು ಇದ್ದಿದ್ದು ಗಮನ ಸೆಳೆದಿತ್ತು. ಒಟ್ಟಿನಲ್ಲಿ ಪ್ರಚಾರಕ್ಕಾಗಿ ಟಿವಿಕೆ ಅಭ್ಯರ್ಥಿಗಳು ಹರಸಾಹಸ ಮಾಡುತ್ತಿದ್ದಾರೆ.

ಇದೇ ಏಪ್ರಿಲ್ 23 ರಂದು ತಮಿಳುನಾಡಿನ 234 ವಿಧಾನಸಭೆ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.
.ದಳಪತಿ ವಿಜಯ್, ಟಿವಿಕೆಯನ್ನು ಪಟ್ಟಕ್ಕೇರಿಸಲಿವೆಯೇ ಅಭಿಮಾನಿ ಸಂಘಗಳು?.ಹರಪನಹಳ್ಳಿ: ತುಂಗಭದ್ರಾಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್; ಈಡೇರದ ದಶಕಗಳ ಕನಸು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.