ಚೆನ್ನೈ: ಮತದಾನ ಅವಧಿಯನ್ನು ಎರಡು ಗಂಟೆ ವಿಸ್ತರಿಸುವಂತೆ ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್ ಅವರು ಗುರುವಾರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತರಿಗೆ ಬರೆದ ಪತ್ರದಲ್ಲಿ, ಹೆಚ್ಚಿನ ಸಂಖ್ಯೆಯ ಜನರು ಮತ ಚಲಾಯಿಸಲು ಅನುಕೂಲವಾಗುವಂತೆ ತುರ್ತು ಸಾರ್ವಜನಿಕ ಸಾರಿಗೆ ಸೇವೆಗಳನ್ನು ನಿಯೋಜಿಸಬೇಕೆಂದು ಒತ್ತಾಯಿಸಿದ್ದಾರೆ.

‘ಮತಗಟ್ಟೆಗಳಲ್ಲಿ ಮತದಾರರು ಮತ ಚಲಾಯಿಸಲು ದೀರ್ಘ ಸರತಿಯಲ್ಲಿ ಕಾಯುತ್ತಿರುವ ಬಗ್ಗೆ ವರದಿಗಳಿವೆ, ಆದರೆ ಮತದಾನದ ಪ್ರಕ್ರಿಯೆಯು ನಿಧಾನಗತಿಯಲ್ಲಿ ಸಾಗುತ್ತಿದೆ. ಇಂತಹ ವಿಳಂಬಗಳು ಮತದಾರರನ್ನು ನಿರುತ್ಸಾಹಗೊಳಿಸಬಹುದು ಮತ್ತು ಮತದಾನದ ಪ್ರಮಾಣದ ಮೇಲೆ ಪರಿಣಾಮ ಬೀರಬಹುದು’ ಎಂದು ಅವರು ಹೇಳಿದ್ದಾರೆ.

ಮತ್ತೊಂದೆಡೆ ಸುದ್ದಿಗಾರರೊಂದಿಗೆ ಮಾತನಾಡಿದ ಟಿವಿಕೆ ಪ್ರಧಾನ ಕಾರ್ಯದರ್ಶಿ ಆನಂದ್, ಸಾರಿಗೆ ಸೌಲಭ್ಯಗಳ ತೀವ್ರ ಕೊರತೆಯಿಂದಾಗಿ ಗುಡುವಾಂಚೇರಿ, ಚೆಂಗಲ್ಪಟ್ಟು ಮತ್ತು ಕೋಯಂಬೇಡಿನ ಪ್ರಮುಖ ಬಸ್ ಟರ್ಮಿನಲ್ಗಳಲ್ಲಿ ಸಾವಿರಾರು ಮತದಾರರು ಸಿಲುಕಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

‘ಮತದಾನ ಮಾಡಲು ಜನರು ಯುರೋಪ್, ಅಮೆರಿಕ ಮತ್ತು ಸಿಂಗಪುರದಂತಹ ದೂರದ ದೇಶಗಳಿಂದ ಬಂದಿದ್ದಾರೆ. ಆದರೆ ಇಲ್ಲಿ ಸಾರ್ವಜನಿಕ ಸಾರಿಗೆ ಸೇವೆ ಸ್ಥಗಿತಗೊಂಡಿದ್ದು, ಸಂಚಾರ ದಟ್ಟಣೆಯಿಂದ ಬೇಸತ್ತಿದ್ದಾರೆ’ ಎಂದು ಹೇಳಿದ್ದಾರೆ.

‘ಡಿಎಂಕೆ ನೇತೃತ್ವದ ಸರ್ಕಾರವು ಉದ್ದೇಶಪೂರ್ವಕವಾಗಿ ಮತದಾನದ ಪ್ರಮಾಣವನ್ನು ಕುಗ್ಗಿಸಲು ಸಂಚು ಮಾಡುತ್ತಿದೆ ಎಂದು ಪ್ರಧಾನ ಕಾರ್ಯದರ್ಶಿ ಅರ್ಜುನ ಅವರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.