ಚೆನ್ನೈ: ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆದು ಫಲಿತಾಂಶ ಹೊರಬಿದ್ದ ಮೇ 4ರಿಂದ ತಮಿಳುನಾಡಿನಲ್ಲಿ ಕ್ಷಿಪ್ರ ರಾಜಕೀಯ ಮೇಲಾಟಗಳು ನಡೆಯುತ್ತಿವೆ. ಮೈತ್ರಿ ಆಗೇಬಿಟ್ಟಿತು ಎನ್ನುವಷ್ಟರಲ್ಲಿ ಮುರಿದುಬೀಳುತ್ತಿದ್ದು, ರಾಜಕೀಯ ರೋಚಕತೆ ಪಡೆದಿದೆ.

234 ಸದಸ್ಯ ಬಲದ ವಿಧಾನಸಭೆಯಲ್ಲಿ ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಪಕ್ಷ 107 ಸ್ಥಾನಗಳ ಬಲ ಹೊಂದಿದ್ದು, ಸರ್ಕಾರ ರಚನೆಗೆ ಇನ್ನೂ 11 ಸ್ಥಾನಗಳ ಅಗತ್ಯ ಇದೆ. ಕಾಂಗ್ರೆಸ್ನ ಐವರು, ಸಿಪಿಎಂ, ಸಿಪಿಐನ ತಲಾ ಇಬ್ಬರು ಶಾಸಕರು ಬೆಂಬಲ ಸೂಚಿಸಿರುವುದರಿಂದ 116 ಸಾಸಕರ ಬೆಂಬಲ ವಿಜಯ್ಗೆ ಸಿಕ್ಕಿದೆ. ಈಗ ಸಿವಿಕೆ ಪಕ್ಷ ಚೌಕಾಶಿಯಲ್ಲಿ ತೊಡಗಿದ್ದು, ಪಕ್ಷದ ಇಬ್ಬರು ಶಾಸಕರ ಬೆಂಬಲ ಸಿಕ್ಕರೆ ಸರ್ಕಾರ ರಚನೆ ಪಕ್ಕಾ ಆಗಲಿದೆ. ಮೂಲಗಳ ಪ್ರಕಾರ, ವಿಸಿಕೆ ಪಕ್ಷ ಡಿಸಿಎಂ ಹುದ್ದೆಗೆ ಪಟ್ಟು ಹಿಡಿದಿದೆ.

ಆರಂಭದಲ್ಲಿ ವಿಜಯ್ ಅವರ ಟಿವಿಕೆಗೆ ಅಧಿಕಾರದ ಹಾದಿ ಸುಗಮ ಎಂದು ತೋರುತ್ತಿದ್ದ ಸನ್ನಿವೇಶ ಸ್ವಲ್ಪ ಸಮಯದಲ್ಲೇ ಜಟಿಲವಾಯಿತು. ಕಾಂಗ್ರೆಸ್ ಬೆಂಬಲ ಘೋಷಿಸಿದ ಬಳಿಕ ವಿಸಿಕೆ ತನ್ನ ನಿಲುವನ್ನು ಪ್ರಕಟಿಸಲು ವಿಳಂಬ ಮಾಡಿತು. ಐಯುಎಂಎಲ್ ಪಕ್ಷವು ಡಿಎಂಕೆ ನೇತೃತ್ವದ ಮೈತ್ರಿಕೂಟದೊಂದಿಗೆ ಉಳಿಯಲು ನಿರ್ಧರಿಸಿದ್ದು, ವಿಜಯ್ಗೆ ಗೊಂದಲ ಮೂಡಿಸಿತು.

ಮಾತುಕತೆಗಳು ತೀವ್ರಗೊಳ್ಳುತ್ತಿದ್ದಂತೆ, ಶಾಸಕರ ಸಹಿ ಇಲ್ಲದಿರುವುದು, ಸಂಪುಟದ ಪ್ರಮುಖ ಸ್ಥಾನಗಳಿಗೆ ಪಕ್ಷಗಳ ಬೇಡಿಕೆ ಮತ್ತು ಎಐಎಡಿಎಂಕೆ ಪಾಳಯದಿಂದ ಸಮಾನಾಂತರ ಲಾಬಿ ಮೂಲಕ ರಾಜಕೀಯ ಹೈಡ್ರಾಮಾ ಜೋರಾಯಿತು.

ಸರ್ಕಾರ ರಚಿಸಲು ಹಕ್ಕು ಮಂಡಿಸಲು ವಿಜಯ್ ಶುಕ್ರವಾರ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿಯಾದರೂ, 234 ಸದಸ್ಯ ಬಲದ ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ ಅಗತ್ಯವಿರುವ ಬಹುಮತ ಹೊಂದಿರುವುದನ್ನು ಸಾಬೀತುಪಡಿಸುವಲ್ಲಿ ವಿಫಲರಾದರು. ಇಂದು(ಮೇ.09) ನಡೆಯಬಹುದೆಂದು ನಿರೀಕ್ಷಿಸಲಾಗಿದ್ದ ಪ್ರಮಾಣವಚನ ಸಮಾರಂಭಕ್ಕೂ ತೆರೆಬಿದ್ದಿತು.

ಸಂಖ್ಯೆ ಲೆಕ್ಕಾಚಾರ ಆರಂಭ

ಕಾಂಗ್ರೆಸ್ನ ಐವರು ಶಾಸಕರು, ಸಿಪಿಎಂ ಮತ್ತು ಸಿಪಿಐನ ತಲಾ ಇಬ್ಬರು ಶಾಸಕರ ಬೆಂಬಲ ಘೋಷಣೆ ಬಳಿಕ ಟಿವಿಕೆ ಅಧಿಕಾರದ ಗದ್ದುಗೆ ಏರಲಿದೆ ಎಂಬ ಆಶಯ ಮೂಡಿತ್ತು. ಈ ಮೈತ್ರಿಯ ಒಟ್ಟು ಸಂಖ್ಯೆ 116ಕ್ಕೆ ಬಂದಿತ್ತು. ಐಯುಎಂಎಲ್ ಬಾಹ್ಯ ಬೆಂಬಲ ನೀಡುತ್ತದೆ ಎಂಬ ವರದಿಗಳಿಂದಾಗಿ ವಿಜಯ್ ಬಹುತೇಕ ಬಹುಮತ ಸಾಬೀತುಪಡಿಸಿದರು ಎಂದೇ ಸುದ್ದಿಯಾಗಿತ್ತು. ಈ ನಡುವೆ, ವಿಜಯ್ 116 ಶಾಸಕರ ಸಹಿ ಇರುವ ಬೆಂಬಲ ಪತ್ರ ಮಾತ್ರ ನೀಡಿದ್ದಾರೆ ಎಂಬ ಸುದ್ದಿ ಬಂದಿತು. ಐಯುಎಂಎಲ್, ಡಿಎಂಕೆ ಜೊತೆಯೇ ಇರುವ ಘೋಷಣೆ ಮಾಡಿದ್ದು, ವಿಜಯ್ ಅವರನ್ನು ಮತ್ತೆ ಅತಂತ್ರ ಸ್ಥಿತಿಗೆ ತಂದು ನಿಲ್ಲಿಸಿದೆ.

ಹೀಗಾಗಿ, ಥೋಲ್ ತಿರುಮಾವಲವನ್ ನೇತೃತ್ವದ ವಿಸಿಕೆ ಪಾತ್ರ ಈಗ ಅತ್ಯಂತ ನಿರ್ಣಾಯಕವಾಗಿದೆ. ಹಿಂದಿನ ಸೂಚನೆಗಳ ಪ್ರಕಾರ, ಪಕ್ಷವು ವಿಜಯ್ ಅವರನ್ನು ಬೆಂಬಲಿಸಲು ಒಲವು ತೋರುತ್ತಿದೆ. ಈ ವಿಷಯದ ಬಗ್ಗೆ ಚರ್ಚಿಸಲು ಉನ್ನತ ಮಟ್ಟದ ಆನ್ಲೈನ್ ಸಭೆಯನ್ನು ಕರೆದಿದೆ ಎಂದು ವರದಿಯಾಗಿದೆ. ಆದರೆ, ಶುಕ್ರವಾರ ಸಂಜೆಯ ಹೊತ್ತಿಗೆ, ಪಕ್ಷವು ತಟಸ್ಥ ನಿಲುವು ತಳೆದಿದ್ದು, ಶನಿವಾರ ಮಾತ್ರ ತನ್ನ ಅಧಿಕೃತ ನಿಲುವನ್ನು ಪ್ರಕಟಿಸಲಾಗುವುದು ಎಂದು ಹೇಳಿದೆ.

ಇದಾದ ಸ್ವಲ್ಪ ಸಮಯದ ನಂತರ, ಟಿವಿಕೆ ಮತ್ತು ವಿಸಿಕೆ ನಡುವಿನ ಅಧಿಕಾರ ಹಂಚಿಕೆ ಕುರಿತ ಮಾತುಕತೆಗಳು ಸರ್ಕಾರ ರಚನೆ ಯತ್ನಕ್ಕೆ ತಡೆಯಾಗಿದೆ ಎಂದು ವರದಿಗಳು ಬಂದವು. ವರದಿಗಳ ಪ್ರಕಾರ, ಬೆಂಬಲ ನೀಡಿದರೆ, ಅದಕ್ಕೆ ಪ್ರತಿಯಾಗಿ ವಿಸಿಕೆ ಉಪಮುಖ್ಯಮಂತ್ರಿ ಹುದ್ದೆಯನ್ನು ಡಿಮ್ಯಾಂಡ್ ಮಾಡುತ್ತಿದೆ. ಆದರೆ, ಟಿವಿಕೆಯು ನಗರ ವ್ಯವಹಾರಗಳ ಖಾತೆಯನ್ನು ಮಾತ್ರ ನೀಡಲು ಸಿದ್ಧವಾಗಿದೆ. ಹೀಗಾಗಿ, ಮೈತ್ರಿ ಕುದುರುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಐಯುಎಂಎಲ್ ಹಿಂದೇಟು

ಆರಂಭದಲ್ಲಿ ಟಿವಿಕೆ ಕಡೆಗೆ ಒಲವು ತೋರುತ್ತಿದೆ ಎಂದು ಊಹಿಸಲಾಗಿದ್ದ ಐಯುಎಂಎಲ್, ನಂತರ ಸಾರ್ವಜನಿಕವಾಗಿ ಬೆಂಬಲ ನೀಡುವುದಿಲ್ಲ ಎಂದು ಘೋಷಿಸಿತು. ಡಿಎಂಕೆ ಮೈತ್ರಿಕೂಟಕ್ಕೆ ತನ್ನ ನಿಷ್ಠೆಯನ್ನು ಪುನರುಚ್ಚರಿಸುತ್ತಾ, ‘ನಾವು ನಿನ್ನೆ ಡಿಎಂಕೆ ಜೊತೆಗಿದ್ದೆವು, ಇಂದೂ ಅದರೊಂದಿಗಿದ್ದೇವೆ ಮತ್ತು ನಾಳೆಯೂ ಇರುತ್ತೇವೆ’ ಎಂದು ಘೋಷಿಸಿತ್ತು.

ಸಹಿಗಳು ಕಾಣೆ, ನಕಲಿ ಬೆಂಬಲ ಪತ್ರದ ಆರೋಪ

ಸರ್ಕಾರ ರಚನೆ ಪ್ರಕ್ರಿಯೆ ಬಿರುಸಾಗಿದ್ದು, ತಮ್ಮ ಪಕ್ಷದ ಶಾಸಕ ಕಾಮರಾಜ್ ನಾಪತ್ತೆಯಾಗಿದ್ದಾರೆ ಎಂದು ಟಿಟಿವಿ ದಿನಕರನ್ ಆರೋಪಿಸಿದ ನಂತರ ರಾಜಕೀಯ ಪ್ರಕ್ಷುಬ್ಧತೆ ಹೆಚ್ಚಾಯಿತು. ಬಳಿಕ,, ವಿಜಯ್ ಅವರು ತಮ್ಮ ಪಕ್ಷದ ಶಾಸಕ ಕಾಮರಾಜ್ ಅವರ ನಕಲಿ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ ಎಂದು ಆರೋಪಿಸಿದರು. ಇದರ ಬೆನ್ನಲ್ಲೇ ದಿನಕರನ್ ಅವರ ಸಮ್ಮತಿ ಮೇರೆಗೆ ಟಿವಿಕೆಗೆ ಬೆಂಬಲ ನೀಡುತ್ತಿದ್ದೇನೆ ಎಂದು ಕಾಮರಾಜ್ ಸಹಿ ಹಾಕಿರುವ ವಿಡಿಯೊವನ್ನು ಟಿವಿಕೆ ಬಿಡುಗಡೆ ಮಾಡಿತು. ಆದರೂ, ದಿನಕರನ್ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ನಡುವೆ, ಟಿಟಿವಿ ದಿನಕರನ್ ಅವರು ರಾಜ್ಯಪಾಲ ಅರ್ಲೇಕರ್ ಅವರನ್ನು ಭೇಟಿ ಮಾಡಿ, ವಿಜಯ್ ಬದಲಿಗೆ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸುವಂತೆ ಒತ್ತಾಯಿಸಿದ್ದಾರೆ.

ಡಿಎಂಕೆ ಕಾರ್ಯತಂತ್ರದ ಬಗ್ಗೆ ವರದಿ

ವೇಗವಾಗಿ ಬದಲಾಗುತ್ತಿರುವ ರಾಜಕೀಯ ಸಮೀಕರಣಗಳ ನಡುವೆ, ವಿಜಯ್ ಅಧಿಕಾರಕ್ಕೆ ಬರುವುದನ್ನು ತಡೆಯಲು ಎಐಎಡಿಎಂಕೆ ನೇತೃತ್ವದ ಸರ್ಕಾರಕ್ಕೆ ಹೊರಗಿನ ಬೆಂಬಲ ನೀಡುವ ಬಗ್ಗೆ ಡಿಎಂಕೆ ಯೋಜಿಸಿದೆ ಎಂಬ ವರದಿಗಳೂ ಬಂದಿದ್ದವು. ಬಳಿಕ, ಆ ಬಗ್ಗೆ ಇಂಬು ನೀಡುವಂಥ ಯಾವುದೇ ಸ್ಪಷ್ಟ ಹೇಳಿಕೆಗಳು ಬರಲಿಲ್ಲ.

ಸದ್ಯಕ್ಕೆ, ತಮಿಳುನಾಡು ರಾಜಕೀಯ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿದ್ದು, ಅಂತಿಮವಾಗಿ ಸರ್ಕಾರ ಯಾರು ರಚಿಸುತ್ತಾರೆ ಎಂಬ ಬಗ್ಗೆ ಅನಿಶ್ಚಿತತೆ ಮುಂದುವರೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.