ನವದೆಹಲಿ: ‘ವಿಕಸಿತ ಭಾರತ– ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) (ವಿಬಿ–ಜಿ ರಾಮ್ ಜಿ) ಕಾಯ್ದೆಯು ದೇಶದಾದ್ಯಂತ ಜುಲೈ 1ರಿಂದ ಜಾರಿಯಾಗಲಿದೆ’ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಸೋಮವಾರ ಅಧಿಸೂಚನೆ ಹೊರಡಿಸಿದೆ.

‘ಜುಲೈ 1ರಂದು ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಕಾಯ್ದೆಯು (ನರೇಗಾ) ರದ್ದಾಗಲಿದ್ದು, ಇದರ ಬದಲಿಗೆ ವಿಬಿ–ಜಿ ರಾಮ್ ಜಿ ಜಾರಿಯಾಗಲಿದೆ. ನರೇಗಾದಿಂದ ವಿಬಿ–ಜಿ ರಾಮ್ ಜಿ ಬದಲಾವಣೆ ಪ್ರಕ್ರಿಯೆಯು ಯಾವುದೇ ತೊಡಕಿಲ್ಲದೆಯೇ ನಡೆಯಲಿದೆ. ಕಾರ್ಮಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ’ ಎಂದು ಕೇಂದ್ರ ಸರ್ಕಾರ ಹೇಳಿದೆ.

‘ನರೇಗಾ ಅಡಿಯಲ್ಲಿ ಜೂನ್ 30ರವರೆಗೆ ನಡೆಯುವ ಎಲ್ಲ ಕಾಮಗಾರಿಗಳು ಹೊಸ ಕಾಯ್ದೆಯ ಅಡಿ ತಡೆರಹಿತವಾಗಿಯೇ ಮುಂದುವರಿಯಲಿವೆ’ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಅಲ್ಲದೇ ‘ವಿಬಿ–ಜಿ ರಾಮ್ ಜಿ ಕಾಯ್ದೆ ಅನ್ವಯ ಎಲ್ಲ ಕಾರ್ಮಿಕರಿಗೆ ಉದ್ಯೋಗ ಚೀಟಿ ನೀಡುವವರೆಗೆ ನರೇಗಾದಡಿ ನೀಡಲಾಗಿದ್ದ ಉದ್ಯೋಗ ಚೀಟಿಯನ್ನೇ ಮಾನ್ಯ ಮಾಡಲಾಗುವುದು’ ಎಂದೂ ವಿವರಿಸಲಾಗಿದೆ.

‘ಇ–ಕೆವೈಸಿ ಮೂಲಕ ಉದ್ಯೋಗ ಚೀಟಿ ಪಡೆಯಲು ಬಾಕಿ ಇರುವ ಕಾರ್ಮಿಕರಿಗೂ ಕೆಲಸ ನಿರಾಕರಿಸಬಾರದು. ಜೊತೆಗೆ, ಉದ್ಯೋಗ ಚೀಟಿಗೆ ನೋಂದಣಿಯಾಗದ ಕಾರ್ಮಿಕರು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೆಲಸ ಮುಂದುವರಿಸಬಹುದು’ ಎಂದು ಕೇಂದ್ರ ಸರ್ಕಾರ ಹೇಳಿದೆ.

‘ನಿಯಮಗಳನ್ನು ರೂಪಿಸಲಾಗುತ್ತಿದೆ’

‘ಕೂಲಿ ನೀಡುವುದು ಕುಂದುಕೊರತೆ ಪರಿಹಾರ ಕಾಮಗಾರಿ ಹಂಚಿಕೆ ನಿಯಮಗಳು ಮತ್ತು ಹಳೇಕಾಯ್ದೆಯಿಂದ ಹೊಸ ಕಾಯ್ದೆಗೆ ಬದಲಾವಣೆಯಾಗುವಸಂಬಂಧ ಅಗತ್ಯವಿರುವ ಎಲ್ಲ ನಿಯಮಗಳನ್ನು ರೂಪಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಬಗ್ಗೆ ಕೇಂದ್ರಾಡಳಿತ ಪ್ರದೇಶಗಳು ಮತ್ತು ಎಲ್ಲ ರಾಜ್ಯ ಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಶೀಘ್ರದಲ್ಲಿಯೇ ಎಲ್ಲ ನಿಯಮಗಳನ್ನು ಸಾರ್ವಜನಿಕರ ಪ್ರತಿಕ್ರಿಯೆಗಾಗಿ ಪ್ರಕಟಿಸಲಾಗುವುದು’ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಅಧಿಸೂಚನೆಯಲ್ಲಿ ಹೇಳಿದೆ.

‘ವಿವರಗಳು ಈಗಾಗಲೇ ದೊರೆಯಬೇಕಿತ್ತು’

ವಿಬಿ–ಜಿ ರಾಮ್ ಜಿ ಜಾರಿ ಎಂಬುದೆಲ್ಲ ಹೆಡ್ಲೈನ್ ಗಳಿಸುವ ಮತ್ತೊಂದು ತಂತ್ರವಷ್ಟೆ. ಜುಲೈನಿಂದ ಹೊಸ ಕಾಯ್ದೆ ಜಾರಿಯಾಗುವುದಿದ್ದರೆ ಈ ಸಂಬಂಧ ರೂಪಿಸಬೇಕಾಗಿದ್ದ ಎಲ್ಲ ನಿಯಮಗಳು ಹಾಗೂ ವಿವರಗಳು ಈಗಾಗಲೇ ನಮಗೆ ದೊರೆಯಬೇಕಿದ್ದವು. ಕೇಂದ್ರಾಡಳಿತ ಪ್ರದೇಶ ಮತ್ತು ರಾಜ್ಯಗಳೊಂದಿಗೆ ಅರ್ಥಪೂರ್ಣ ರೀತಿಯಲ್ಲಿ ಚರ್ಚೆ ನಡೆಸಬೇಕು. ಇದು ಕೇವಲ ಔಪಚಾರಿಕತೆಯಾಗಬಾರದು

–ಜೈರಾಮ್ ರಮೇಶ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.