ವಾರಾಂತ್ಯಕ್ಕೆ ಪ್ರಜಾವಾಣಿ ಡಿಜಿಟಲ್ನ ಓದುಗರಿಗೆ ಇಂದಿನ ಪ್ರಮುಖ ಸುದ್ದಿಗಳ ಜೊತೆಗೆ, ಉಪಯುಕ್ತ ಮಾಹಿತಿಗಳು ಇಲ್ಲಿವೆ.

ಮೈಸೂರು: ‘ನೀಟ್ ಅಕ್ರಮದಿಂದ ನುಣುಚಿಕೊಳ್ಳಲು ಬಿಜೆಪಿ ಹಿಜಾಬ್ ವಿಚಾರ ಮುನ್ನಲೆಗೆ ತಂದಿದೆ. ಕೇಂದ್ರೀಯ ವಿದ್ಯಾಲಯದಲ್ಲಿ ಇರುವ ನಿಯಮವೇ ನಮ್ಮ ಶಾಲೆಗಳಲ್ಲೂ ಇವೆ. ಅಲ್ಲಿ ಮೊದಲು ಕೇಸರಿ ಶಾಲು ಕೊಟ್ಟು ಮತ್ತೆ ನಮ್ಮ ಬಳಿ ಬರಲಿ’ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ನವದೆಹಲಿ: ಭವಿಷ್ಯದಲ್ಲಿ ಶ್ವೇತಭವನಕ್ಕೆ ಭೇಟಿ ನೀಡಿ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದ್ದಾರೆ.

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ನವದೆಹಲಿ: ರಾಜ್ಯಸಭೆಯ 26 ಸ್ಥಾನಗಳಿಗೆ ಅಧಿಕೃತವಾಗಿ ಚುನಾವಣೆ ಘೋಷಣೆಯಾಗಿದ್ದು ವಿಜಯ್ ನೇತೃತ್ವದ ಟಿವಿಕೆ ಚೊಚ್ಚಲ ಪ್ರವೇಶ ಪಡೆಯಲು ಸಜ್ಜಾಗಿದೆ.

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ನವದೆಹಲಿ: ಭಾರತದ ಟಿ–20 ನಾಯಕನಾಗಿ ಸೂರ್ಯಕುಮಾರ್ ಯಾದವ್ ಅವರ ಭವಿಷ್ಯವನ್ನು ಪ್ರಮುಖವಾಗಿ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ನಿರ್ಧರಿಸಲಿದ್ದಾರೆ ಬಿಸಿಸಿಐನ ಮೂಲವೊಂದು ತಿಳಿಸಿದೆ.

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಹೈದರಾಬಾದ್: ತೀವ್ರ ಬಿಸಿಗಾಳಿಯಿಂದ ರಾಜ್ಯದಲ್ಲಿ 16 ಜನರು ಮೃತಪಟ್ಟಿದ್ದಾರೆ ಎಂದು ತೆಲಂಗಾಣ ಸಚಿವ ಪೊಂಗುಲೇಟಿ ಶ್ರೀನಿವಾಸ ರೆಡ್ಡಿ ಶನಿವಾರ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಇರಾನ್ ಮತ್ತು ಒಮಾನ್ ನಡುವೆ ಇರುವ ಈ ಕಿರಿದಾದ ಜಲಮಾರ್ಗ ಇಂದು ಜಗತ್ತಿನ ಹಲವು ದೇಶಗಳ ಆರ್ಥಿಕತೆಯನ್ನೇ ಬುಡಮೇಲು ಮಾಡಿದೆ. ಯುದ್ಧದಾಹಿ ಟ್ರಂಪಾಧಿಪತಿಗಳ ನಿದ್ದೆಗೆಡಿಸಿದೆ. ಏಷ್ಯಾದ ಹಲವು ರಾಷ್ಟ್ರಗಳ ಕರೆನ್ಸಿಗಳನ್ನು ಪಾತಾಳಕ್ಕೆ ಧುಮುಕಿಸಿದೆ.

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಆಧುನಿಕ ಹವಾಮಾನ ವಿಜ್ಞಾನವು ಅಸ್ತಿತ್ವಕ್ಕೆ ಬರುವುದಕ್ಕಿಂತ ಸುಮಾರು ವರ್ಷಗಳ ಹಿಂದೆಯೇ, ‘ಎಲ್ ನಿನೊ’ ಪ್ರಭಾವವನ್ನು ಪ್ರಪಂಚದಾದ್ಯಂತ ಜನ ಅನುಭವಿಸಿದ್ದರು!

ಮಳೆಗಾಗಿ ಕಾದು ಹೈರಾಣಾಗಿದ್ದರು. ಹನಿ ಮಳೆಗಾಗಿ ಪ್ರಾರ್ಥಿಸುತ್ತಿದ್ದರು. ರಣ ಬಿಸಿಲಿಗೆ ಬೆಳೆಗಳು ಒಣಗಿ, ನದಿಗಳು ಬತ್ತಿ ಹೋಗಿದ್ದವು. ಬಿಸಿಲಿನ ಬೇಗೆಗೆ ಬೆವತು ಬೆಂದು ಹೋಗಿದ್ದರು. ಹಳ್ಳಿ ನಗರಗಳು ಕಾದ ಕಾವಲಿಯಂತಾಗಿದ್ದವು. ಹಸಿವು ತಾಂಡವವಾಡುತ್ತಿತ್ತು. ತಲೆಮಾರುಗಳು ಇದರಿಂದ ಸಂಕಷ್ಟ ಅನುಭವಿಸಿದವು. ಇದಕ್ಕೆ ಪೆಸಿಫಿಕ್ ಮಹಾಸಾಗರದಲ್ಲಿ ನಡೆಯುತ್ತಿರುವ ಬದಲಾವಣೆಗಳೇ ಕಾರಣ ಎಂಬುದು ಅವರಿಗೆ ಗೊತ್ತೇ ಇರಲಿಲ್ಲ.

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಭಾರತದ ರೂಪಾಯಿ ತನ್ನ ಕುಸಿತದ ಓಟವನ್ನು ಮುಂದುವರಿಸುತ್ತಲೇ ಇದೆ. ಏಷ್ಯಾದ ಇತರ ರಾಷ್ಟ್ರಗಳಾದ ಜಪಾನ್, ದಕ್ಷಿಣ ಕೊರಿಯಾ, ಫಿಲಿಪ್ಪೀನ್ಸ್ ಕರೆನ್ಸಿಗಳದ್ದೂ ಇದೆ ಕಥೆ. ಇಂಡೋನೇಷ್ಯಾದ ಕರೆನ್ಸಿ ಕಥೆ ಅಧೋಗತಿ. 1997ರ ಏಷ್ಯಾ ಆರ್ಥಿಕ ಬಿಕ್ಕಟ್ಟಿನ ಅತ್ಯಂತ ಕಠಿಣ ದಿನಗಳಲ್ಲಿದ್ದಕ್ಕಿಂತಲೂ ಅದು ಹೆಚ್ಚು ದುರ್ಬಲಗೊಂಡಿದೆ.

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

2022ರಲ್ಲಿ ಇಟಲಿಯ ಜನತೆ ಜಾರ್ಜಿಯಾ ಮೆಲೊನಿಯವರನ್ನು ಪ್ರಧಾನಿಯನ್ನಾಗಿ ಮಾಡಿದಾಗ, ಅವರು ಕೇವಲ ರಾಜಕಾರಣಿಯನ್ನು ಆ ಸ್ಥಾನಕ್ಕೆ ಆಯ್ಕೆ ಮಾಡಿರಲಿಲ್ಲ. ಬಾಲ್ಯದಿಂದಲೇ ಬಡತನ, ನೋವು, ಕಷ್ಟಗಳನ್ನು ಅನುಭವಿಸಿ, ಹೋರಾಟದ ಹಾದಿಯನ್ನು ಸವೆಸಿ ಬಂದ ನಾಯಕಿಯನ್ನಾಗಿತ್ತು. ಮೆಲೊನಿ ಬೆಂಕಿಯಲ್ಲಿ ಅರಳಿದ ಹೂ! ಇಟಲಿಯನ್ನು ಮುನ್ನಡೆಸುತ್ತಿರುವ ಮೊದಲ ಮಹಿಳಾ ಪ್ರಧಾನಿ.

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಜಿರಳೆಗಳು ಎಲ್ಲರ ಮನೆಗಳಲ್ಲಿ ಕಂಡಬರುತ್ತವೆ. ಮನೆಯ ಮೂಲೆ ಮೂಲೆಯನ್ನೂ ಸುಲಭವಾಗಿ ಪ್ರವೇಶಿಸಬಲ್ಲ ಜಿರಳೆಗಳು ತಮಗೆ ಬೇಕಾದ ಆಹಾರವನ್ನು ಹುಡುಕಿ, ಹೆಕ್ಕಿ ತಿನ್ನುತ್ತವೆ. ಜಿರಳೆಗಳು ಮನುಷ್ಯನಿಗೆ ಟೈಫಾಯಿಡ್, ಅತಿಸಾರ, ಕಾಲರಾ, ಅಲರ್ಜಿ, ಆಸ್ತಮಾ, ಹೆಪಟೈಟಿಸ್ ಎ ಮತ್ತು ಪೋಲಿಯೋನಂತಹ ಕಾಯಿಲೆಗಳಿಗೆ ಕಾರಣವಾಗುತ್ತವೆ. ಆದರೆ ಜಿರಳೆಗಳು ಜೀವವೈವಿಧ್ಯತೆಯ ದೃಷ್ಟಿಯಿಂದ ಪರಿಸಕ್ಕೆ ಅತ್ಯಂತ ಉಪಕಾರಿ ಕೀಟಗಳೆನಿಸಿಕೊಂಡಿವೆ.

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ನಾನೊಂದು ಪುಟ್ಟ ಜೀವ, ನೀವು ನನ್ನನ್ನು ಗುಬ್ಬಿ ಎಂದು ಕರೆಯುತ್ತೀರಿ. ಕೆಲವರು ಪ್ರೀತಿಯಿಂದ ಗುಬ್ಬಚ್ಚಿ ಎನ್ನುತ್ತಾರೆ. ಈ ಹಿಂದೆ ಹೂಬಳ್ಳಿ ಎಂದು ಕರೆಯುತ್ತಿದ್ದ ಹುಬ್ಬಳ್ಳಿ ಮಹಾನಗರದ ನನ್ನ ನಿವಾಸ ಸ್ಥಳ.

ಬೆಳಗಾಗುತ್ತಿದ್ದಂತೆ ಸಂಗಾತಿಯೊಂದಿಗೆ ಆಗಸಕ್ಕೆ ನೆಗೆದು, ಗಾಳಿಯ ಜೊತೆ ತೇಲುತ್ತ ಆಹಾರ ಹುಡುಕಿಕೊಂಡು ಅಲೆದಾಡೋದು, ಸಂಜೆಯಾಗುತ್ತಿದ್ದಂತೆ ಹೆಮ್ಮರವೊಂದರಲ್ಲಿ ಆಶ್ರಯ ಪಡೆಯುವುದು... ಇದು ನನ್ನ ದಿನಚರಿಯಾಗಿತ್ತು.

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.