ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಹಮ್ಮಿಕೊಂಡಿರುವ 'ಅನ್ನಪೂರ್ಣ ಯೋಜನೆ'ಯ ಅರ್ಜಿ ವಿತರಣೆ ನಾಳೆಯಿಂದ (ಬುಧವಾರ) ಆರಂಭವಾಗಲಿದೆ. ಈ ಮೂಲಕ ಮಹಿಳೆಯರ ಖಾತೆಗೆ ಮಾಸಿಕ ₹3000 ಜಮೆಯಾಗಲಿದೆ.

ನಾದಿಯಾ ಜಿಲ್ಲೆಯ ಕಲ್ಯಾಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಬುಧವಾರದಿಂದಲೇ ಸರ್ಕಾರದಿಂದ ಅನ್ನಪೂರ್ಣ ಯೋಜನೆಗೆ ಸಂಬಂಧಿಸಿದ ಅರ್ಜಿಗಳನ್ನು ವಿತರಿಸಲಾಗುವುದು. ಈ ಯೋಜನೆಯಡಿ ಅರ್ಹ ಮಹಿಳೆಯರಿಗೆ ತಿಂಗಳಿಗೆ ₹3,000 ಧನಸಹಾಯ ಸಿಗಲಿದೆ ಎಂದು ಹೇಳಿದ್ದಾರೆ.
.ಎಂಜಿನಿಯರ್ ರಶೀದ್ಗೆ ಮಧ್ಯಂತರ ಜಾಮೀನು ನೀಡಿದ ದೆಹಲಿ ಹೈಕೋರ್ಟ್.FIFA ವಿಶ್ವಕಪ್: ಭಾರತದಿಂದ ಆಯ್ಕೆಯಾದ ಮೊದಲ ಪತ್ರಿಕಾ ಛಾಯಾಗ್ರಾಹಕಿ ಇವರೇ...
ಶಾಲಾ-ಕಾಲೇಜುಗಳ ಬಳಿ ಮದ್ಯದಂಗಡಿ ನಿಷೇಧ

ಇನ್ಮುಂದೆ ಶಾಲಾ-ಕಾಲೇಜುಗಳು ಹಾಗೂ ಧಾರ್ಮಿಕ ಕೇಂದ್ರಗಳ ಸುತ್ತಲಿನ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಮದ್ಯದ ಅಂಗಡಿಗಳಿಗೆ ಅನುಮತಿ ನೀಡುವುದಿಲ್ಲ ಎಂದು ಸುವೇಂದು ತಿಳಿಸಿದ್ದಾರೆ

ಕೇವಲ ₹5ಗೆ ಮೀನೂಟ!

ರಾಜ್ಯ ಸರ್ಕಾರವು ಹೊಸದಾಗಿ ಸುಮಾರು 400 ಪ್ರತ್ಯೇಕ ಕ್ಯಾಂಟೀನ್ಗಳನ್ನು ಆರಂಭಿಸಲಿದೆ. ಈ ಕ್ಯಾಂಟೀನ್ಗಳಲ್ಲಿ ವಾರಕ್ಕೆ ಎರಡು ದಿನ ರಿಯಾಯಿತಿ ದರದಲ್ಲಿ, ಅಂದರೆ ಕೇವಲ ₹5 ರೂಪಾಯಿಗೆ ಮೀನೂಟ ಒದಗಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
.ರಾಜ್ಯದಲ್ಲಿ 7 ದಿನ ಬಿರುಗಾಳಿ ಸಹಿತ ಜೋರು ಮಳೆ ಸಾಧ್ಯತೆ: ಹವಾಮಾನ ಇಲಾಖೆ.ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಬಾಲಿವುಡ್ ನಟ ರಣವೀರ್ ಸಿಂಗ್ ಭೇಟಿ.
ಪ್ರತ್ಯೇಕ 'ಆಯುಷ್' ಇಲಾಖೆ ಸ್ಥಾಪನೆ

ಆರೋಗ್ಯ ಕ್ಷೇತ್ರದಲ್ಲಿ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ, ಪ್ರಸ್ತುತ ಆರೋಗ್ಯ ಇಲಾಖೆಯ ಭಾಗವಾಗಿರುವ 'ಆಯುಷ್' ವಿಭಾಗವನ್ನು ಬೇರ್ಪಡಿಸಿ, ಅದಕ್ಕಾಗಿಯೇ ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.