ಕೋಲ್ಕತ್ತ: ದಕ್ಷಿಣ 24 ಪರಗಣ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ 77 ಮತಗಟ್ಟೆಗಳಲ್ಲಿ ಮರುಮತದಾನ ನಡೆಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಚುನಾವಣಾ ಆಯೋಗವು ಈ ಸಂಬಂಧ ಸಕ್ರಿಯವಾಗಿ ಪರಿಶೀಲನೆ ನಡೆಸುತ್ತಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಫಾಲ್ಟಾದಲ್ಲಿ 32, ಡೈಮಂಡ್ ಹಾರ್ಬರ್ನಲ್ಲಿ 29, ಮಗ್ರಾಹತ್ನಲ್ಲಿ 13 ಹಾಗೂ ಬಜ್ ಬಜ್ನಲ್ಲಿ ಮೂರು ದೂರುಗಳು ಕೇಳಿ ಬಂದಿವೆ.

ಸಾಮಾನ್ಯವಾಗಿ, ಚುನಾವಣಾ ಆಕ್ರಮಗಳು, ಇವಿಎಂ ದೋಷ, ಗಲಭೆ ಇತ್ಯಾದಿ ನಿರ್ದಿಷ್ಟ ಕಾರಣಗಳನ್ನು ಮುಂದಿಟ್ಟುಕೊಂಡು ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಇಲ್ಲವೇ ಮತಗಟ್ಟೆ ಏಜೆಂಟ್ಗಳು, ಚುನಾವಣಾ ವೀಕ್ಷಕರು ಮರು ಮತದಾನಕ್ಕೆ ಬೇಡಿಕೆ ಇಡಬಹುದು.

'ರಾಜ್ಯದಲ್ಲಿ ಬುಧವಾರ ಎರಡನೇ ಹಂತದ ಮತದಾನ ಮುಕ್ತಾಯವಾಗುತ್ತಿದ್ದಂತೆ, ಇವಿಎಂ ಅಕ್ರಮ ಸೇರಿದಂತೆ ಹಲವು ದೂರುಗಳು ಕೇಳಿಬಂದಿವೆ. ಅವುಗಳ ಸ್ವರೂಪ ಹಾಗೂ ಪ್ರಮಾಣವನ್ನು ಗಮನದಲ್ಲಿರಿಸಿ ಆಯೋಗವು ಪರಿಶೀಲನೆ ನಡೆಸುತ್ತಿದೆ' ಎಂದು ಅಧಿಕಾರಿ ಹೇಳಿದ್ದಾರೆ.

ಮರುಮತದಾನದ ಕುರಿತು ನಿರ್ಧಾರ ಕೈಗೊಳ್ಳುವ ಮೊದಲು ಸಂಬಂಧಪಟ್ಟ ಸ್ಥಳದಲ್ಲಿ ಸೂಕ್ತ ಪರಿಶೀಲನೆ ನಡೆಸುವಂತೆ ಚುನಾವಣಾ ವೀಕ್ಷಕ ಸುಬ್ರತಾ ಗುಪ್ತಾ ಅವರಿಗೆ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ನಿರ್ದೇಶನ ನೀಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಈ ನಿಟ್ಟಿನಲ್ಲಿ ಇತರ ವೀಕ್ಷಕರೊಂದಿಗೆ ಮಾತುಕತೆ ಆರಂಭಿಸಿರುವ ಗುಪ್ತಾ, ಸೂಕ್ತ ಕ್ರಮ ಕೈಗೊಳ್ಳುವ ಸಂಬಂಧ ಪರಿಶೀಲನೆ ಆರಂಭಿಸಿದ್ದಾರೆ. ಅವರ ವರದಿಯ ಆಧಾರದಲ್ಲಿ ಆಯೋಗವು ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಮರುಮತದಾನ ಅನಿವಾರ್ಯ ಎನಿಸಿದರೆ, ಸಾಧ್ಯವಾದಷ್ಟು ಬೇಗನೆ ಆಯೋಜನೆಗೊಳ್ಳಲಿದೆ ಎಂದೂ ತಿಳಿಸಿದ್ದಾರೆ.

ಯಾರಿಗೆ ಮತ ನೀಡಲಿದ್ದಾರೆ ಎಂಬುದರ ಮೇಲೆ ಕಣ್ಣಿಡಲು, ಮತದಾರರ ಜೇಬುಗಳಲ್ಲಿ ಸ್ಪೈ ಕ್ಯಾಮರಾಗಳನ್ನು ಇಡಲಾಗಿತ್ತು ಎಂಬ ಗಂಭೀರ ಆರೋಪವೂ ಹಲವೆಡೆ ಕೇಳಿಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.