ಕೋಲ್ಕತ್ತ: ಭಾರತ–ಬಾಂಗ್ಲಾ ಗಡಿಯಲ್ಲಿ ಬೇಲಿ ನಿರ್ಮಾಣಕ್ಕೆ ಬಿಎಸ್ಎಫ್ಗೆ ಗಡಿಯುದ್ದಕ್ಕೂ 27 ಕಿಲೋಮೀಟರ್ ವ್ಯಾಪ್ತಿಯ ಭೂಮಿಯನ್ನು ಹಸ್ತಾಂತರಿಸುವ ಪ್ರಕ್ರಿಯೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಚಾಲನೆ ನೀಡಿದ್ದಾರೆ.

ನಬಾನ್ನದಲ್ಲಿ ಬಿಎಸ್ಎಫ್ ಅಧಿಕಾರಿಗಳೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಧಿಕಾರಿ, ‘ 27 ಕಿಲೋಮೀಟರ್ ವ್ಯಾಪ್ತಿಯ ಭೂಮಿಯನ್ನು ಎರಡು ವಾರಗಳೊಳಗೆ ಬಿಎಸ್ಎಫ್ಗೆ ಹಸ್ತಾಂತರಿಸಲಾಗುವುದು. ಇದು ಭೂಮಿ ಹಸ್ತಾಂತರ ಪ್ರಕ್ರಿಯೆಯ ಆರಂಭವಷ್ಟೇ’ ಎಂದು ಹೇಳಿದ್ದಾರೆ.

‘ಸಚಿವ ಸಂಪುಟವು ಭೂಮಿ ಹಸ್ತಾಂತರ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದು, 45 ದಿನಗಳೊಳಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಮುಖ್ಯ ಕಾರ್ಯದರ್ಶಿ ಮತ್ತು ಭೂ ಸುಧಾರಣಾ ಇಲಾಖೆಯ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.

‘ಭಾರತವು ಬಾಂಗ್ಲಾದೇಶದೊಂದಿಗೆ 4 ಸಾವಿರ ಕಿಲೋಮೀಟರ್ ಗಡಿಯನ್ನು ಹಂಚಿಕೊಂಡಿದೆ. ಅದರಲ್ಲಿ ಸುಮಾರು 2,200 ಕಿಲೋಮೀಟರ್ ಪಶ್ಚಿಮ ಬಂಗಾಳದಲ್ಲಿದೆ. ಸುಮಾರು 1,600 ಕಿಲೋಮೀಟರ್ಗೆ ಈಗಾಗಲೇ ಬೇಲಿ ಹಾಕಲಾಗಿದ್ದು, ಸುಮಾರು 600 ಕಿಲೋಮೀಟರ್ಗೆ ಇನ್ನೂ ಬೇಲಿ ಹಾಕಲಾಗಿಲ್ಲ’ ಎಂದು ಮಾಹಿತಿ ನೀಡಿದ್ದಾರೆ.

‘ಬೇಲಿ ಹಾಕದ ಭಾಗದ ಪೈಕಿ ಸುಮಾರು 555 ಕಿಲೋಮೀಟರ್ ಅಗತ್ಯವಿದ್ದ ಭೂಮಿಯನ್ನು ಮೊದಲೇ ಹಸ್ತಾಂತರಿಸಬಹುದಿತ್ತು. ಆದರೆ, ಹಿಂದಿನ ಸರ್ಕಾರವು ಓಲೈಕೆ ರಾಜಕಾರಣ ಮತ್ತು ವೋಟ್ ಬ್ಯಾಂಕ್ ಲೆಕ್ಕಾಚಾರದಿಂದಾಗಿ ಬಿಎಸ್ಎಫ್ ಕೇಳಿದ್ದ ಭೂಮಿಯನ್ನು ನೀಡದೆ ತಡೆಹಿಡಿದಿತ್ತು’ ಎಂದು ಆರೋಪಿಸಿದ್ದಾರೆ.

‘ಬೇಲಿ ನಿರ್ಮಾಣ ಮತ್ತು ಗಡಿ ಭದ್ರತೆಗಾಗಿ ಎಲ್ಲಿಯೇ ಭೂಮಿಯ ಅಗತ್ಯವಿದ್ದರೂ, ನಾವು ಅದನ್ನು ಬಿಎಸ್ಎಫ್ಗೆ ಹಸ್ತಾಂತರಿಸುತ್ತೇವೆ’ ಎಂದೂ ಹೇಳಿದ್ದಾರೆ.

‘ಕಾನೂನು ಮತ್ತು ಸುವ್ಯವಸ್ಥೆ, ಲವ್ ಜಿಹಾದ್, ಬಲವಂತದ ಧರ್ಮ ಮತಾಂತರ ಮತ್ತು ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದ ಅಪರಾಧ ಪ್ರಕರಣಗಳಲ್ಲಿ ಬಂಧಿತರಾದವರ ಪೈಕಿ ದೊಡ್ಡ ಭಾಗದ ಜನರು ಬಾಂಗ್ಲಾದೇಶದ ನುಸುಳುಕೋರರಾಗಿದ್ದಾರೆ’ ಎಂದು ಇದೇ ವೇಳೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.