ಕೋಲ್ಕತ್ತ (ಪಿಟಿಐ): ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು, ಸೋಮವಾರ ನಡೆದ ಮೊದಲ ಸಂಪುಟ ಸಭೆಯಲ್ಲಿ ಇಮಾಮ್ಗಳು ಹಾಗೂ ಅರ್ಚಕರಿಗೆ ನೀಡುತ್ತಿದ್ದ ಗೌರವಧನ ಸ್ಥಗಿತಗೊಳಿಸುವುದೂ ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ.

ಧರ್ಮಾಧಾರಿತ ಗುಂಪುಗಳಿಗೆ ನೀಡುತ್ತಿದ್ದ ನೆರವು ಯೋಜನೆಯನ್ನು ಜೂನ್ನಿಂದ ಕೈಬಿಡಲು ಸರ್ಕಾರ ನಿರ್ಧರಿಸಿದೆ. ಇದರಿಂದ ಇಮಾಮ್ಗಳು ಹಾಗೂ ಅರ್ಚಕರಿಗೆ ಸಿಗುತ್ತಿದ್ದ ಗೌರವಧನ ಸ್ಥಗಿತಗೊಳ್ಳಲಿದೆ.

ಮಮತಾ ಬ್ಯಾನರ್ಜಿ ನೇತೃತ್ವದ ಈ ಹಿಂದಿನ ಸರ್ಕಾರ, ನೋಂದಾಯಿತ ಮಸೀದಿಗಳ ಇಮಾಮ್ಗಳಿಗೆ ತಿಂಗಳಿಗೆ ₹3,000 ಮತ್ತು ಪುರೋಹಿತರಿಗೆ ತಿಂಗಳಿಗೆ ₹2,000 ಗೌರವಧನ ನೀಡುತ್ತಿತ್ತು.

ಸಂಪುಟ ಸಭೆ ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವೆ ಅಗ್ನಿಮಿತ್ರ ಪೌಲ್ ಅವರು, ಮಹಿಳೆಯರಿಗೆ ಜೂನ್ 1ರಿಂದ ಪ್ರತಿ ತಿಂಗಳು ₹3,000 ನೆರವು ನೀಡುವ ‘ಅನ್ನಪೂರ್ಣ’ ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ’ ಎಂದು ತಿಳಿಸಿದರು.

‘ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಡಿಯಲ್ಲಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿರುವ ಮತ್ತು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ನ್ಯಾಯಮಂಡಳಿಗೆ ಮನವಿ ಮಾಡಿರುವ ಮಹಿಳೆಯರೂ ‘ಅನ್ನಪೂರ್ಣ’ ಯೋಜನೆಯ ಅನುಕೂಲವನ್ನು ಪಡೆಯಲಿದ್ದಾರೆ’ ಎಂದು ತಿಳಿಸಿದರು.

ಮಹಿಳೆಯರು ರಾಜ್ಯದ ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಮತ್ತು ರಾಜ್ಯ ಸರ್ಕಾರಿ ಉದ್ಯೋಗಿಗಳಿಗಾಗಿ 7ನೇ ವೇತನ ಆಯೋಗ ರಚನೆ ಮಾಡಲು ಸರ್ಕಾರ ಒಪ್ಪಿಗೆ ನೀಡಿದೆ ಎಂದರು.

ಕಲ್ಕತ್ತ ಹೈಕೋರ್ಟ್ ಆದೇಶದ ಅನುಸಾರ ಅಸ್ತಿತ್ವದಲ್ಲಿರುವ ರಾಜ್ಯ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಯನ್ನು ರದ್ದು ಮಾಡಲು ಮತ್ತು ಮೀಸಲಾತಿ ಅರ್ಹತೆ ನಿರ್ಧರಿಸುವುದಕ್ಕಾಗಿ ತನಿಖಾ ಸಮಿತಿ ರಚಿಸಲು ಸಂಪುಟ ನಿರ್ಧರಿಸಿದೆ. ಅಸ್ತಿತ್ವದಲ್ಲಿರುವ ಯಾವುದೇ ವಿದ್ಯಾರ್ಥಿ ವೇತನ ಯೋಜನೆಗಳನ್ನು ಕೈಬಿಡುವುದಿಲ್ಲ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.