ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ನಡೆಸಲಾದ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್ಐಆರ್) ಮೂರನೇ ಪೂರಕ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದೆ.
.ಪಶ್ಚಿಮ ಬಂಗಾಳ ಚುನಾವಣೆ| ಭವಾನಿಪುರ–ನಂದಿಗ್ರಾಮ: 10 ಹೈಪ್ರೋಫೈಲ್ ಕ್ಷೇತ್ರಗಳಿವು .
ಶನಿವಾರ ರಾತ್ರಿ ಪ್ರಕಟಿಸಲಾದ ಮೂರನೇ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಅಥವಾ ಕೈಬಿಡಲಾದ ಮತದಾರರ ಸಂಖ್ಯೆಯ ವಿವರಗಳನ್ನು ಆಯೋಗ ನೀಡಿಲ್ಲ. ರಾತ್ರಿ 11.30 ರ ಸುಮಾರಿಗೆ ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಬೂತ್ವಾರು ಪಟ್ಟಿಗಳನ್ನು ಪ್ರಕಟಿಸಲಾಗಿದೆ.

ಚುನಾವಣಾ ಆಯೋಗವು ಶುಕ್ರವಾರ ರಾತ್ರಿ ಎರಡನೇ ಪೂರಕ ಪಟ್ಟಿಯನ್ನು ಪ್ರಕಟಿಸಿತ್ತು.

ಎಸ್ಐಆರ್ ಬಳಿಕ ಫೆಬ್ರುವರಿ 28 ರಂದು ಪ್ರಟಕವಾದ ಮತದಾರರ ಪಟ್ಟಿಯಲ್ಲಿ, 'ವಿಚಾರಣಾ ಹಂತದಲ್ಲಿರುವ' ಎಂದು ವರ್ಗೀಕರಿಸಲಾದ ಮತದಾರರ ಹೆಚ್ಚುವರಿ ಹೆಸರುಗಳು ಈ ‘ಪೂರಕ ಪಟ್ಟಿ’ಯಲ್ಲಿ ಇರಲಿದೆ ಎಂದು ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ವಿಚಾರಣಾ ಹಂತದಲ್ಲಿರುವ' ಮತದಾರರ ಮೊದಲ ಪೂರಕ ಪಟ್ಟಿಯನ್ನು ಆಯೋಗ ಸೋಮವಾರ ಬಿಡುಗಡೆ ಮಾಡಿತ್ತು. ಆದರೆ ಪಟ್ಟಿಯಿಂದ ತೆಗೆದುಹಾಕಲಾದ ಮತದಾರರ ಸಂಖ್ಯೆ ಅಥವಾ ವಿಲೇವಾರಿ ಮಾಡಲಾದ ಪ್ರಕರಣಗಳ ನಿಖರ ಅಂಕಿಅಂಶಗಳ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿತ್ತು. ಆಯೋಗದ ಈ ಕ್ರಮವು ವಿವಿಧ ವಲಯಗಳಿಂದ ಟೀಕೆಗೆ ಗುರಿಯಾಗಿತ್ತು.

ಈ ಪೂರಕ ಪಟ್ಟಿಯಲ್ಲಿ ಹೆಸರನ್ನು ಕೈಬಿಟ್ಟವರ ಮಾಹಿತಿಯನ್ನೂ ಚುನಾವಣಾ ಆಯೋಗ ಬಿಡುಗಡೆ ಮಾಡಿದೆ.
.ದೇಶದ ಭದ್ರತೆಗೂ ಪಶ್ಚಿಮ ಬಂಗಾಳ ಚುನಾವಣೆಗೂ ನಂಟಿದೆ: ಅಮಿತ್ ಶಾ.
ಎಸ್ಐಆರ್ ಬಳಿಕ ಒಟ್ಟು 58 ಲಕ್ಷ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಮರಣ, ವಲಸೆ, ನಕಲಿ ಮತ್ತು ಪತ್ತೆಯಾಗದ ಕಾರಣಗಳಿಂದಾಗಿ ರಾಜ್ಯದ ಅರ್ಹ ಮತದಾರರ ಸಂಖ್ಯೆಯು ಆರಂಭಿಕ 7.66 ಕೋಟಿಯಿಂದ 7.08 ಕೋಟಿಗೆ ಇಳಿಕೆಯಾಗಿದೆ. ಫೆಬ್ರುವರಿ 28 ರಂದು ಪ್ರಕಟವಾದ ಎಸ್ಐಆರ್ ನಂತರದ ಪಟ್ಟಿಯಲ್ಲಿ ಸಿಂಧು ಮತದಾರರ ಸಂಖ್ಯೆಯು 7.04 ಕೋಟಿಗೆ ಕುಸಿದಿದ್ದು, 60 ಲಕ್ಷಕ್ಕೂ ಹೆಚ್ಚು ಹೆಸರುಗಳನ್ನು ನ್ಯಾಯಾಂಗ ಪರಿಶೀಲನೆಯಲ್ಲಿ ಇರಿಸಲಾಗಿದೆ.

ಮೊದಲ ಪೂರಕ ಪಟ್ಟಿಯಲ್ಲಿ ಸುಮಾರು 10 ಲಕ್ಷ ಮತ್ತು ಎರಡನೇ ಪಟ್ಟಿಯಲ್ಲಿ 21 ಲಕ್ಷ ಹೆಸರುಗಳಿವೆ ಎಂದು ಮತ್ತೊಬ್ಬ ಚುನಾವಣಾ ಆಯೋಗದ ಅಧಿಕಾರಿ ತಿಳಿಸಿದ್ದಾರೆ.

294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಗೆ ಏಪ್ರಿಲ್ 23 ಮತ್ತು 29 ರಂದು ಮತದಾನ ನಡೆಯಲಿದ್ದು, ಮೇ 4 ರಂದು ಮತ ಎಣಿಕೆ ನಡೆಯಲಿದೆ.
.ಪಶ್ಚಿಮ ಬಂಗಾಳ: ಮತದಾರರ ಪಟ್ಟಿಯಲ್ಲಿಲ್ಲ ನಿವೃತ್ತ ನ್ಯಾಯಾಧೀಶ ಹೆಸರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.