ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ‘ಬದಲಾವಣೆಯ ಅಲೆ’ ಇದೆ ಎಂಬುದು ಮೊದಲ ಹಂತದ ಮತದಾನದಲ್ಲಿ ಸ್ಪಷ್ಟವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪ್ರತಿಪಾದಿಸಿದ್ದಾರೆ.

ಉತ್ತರ 24 ಪರಗಣ ಜಿಲ್ಲೆಯ ಪಾನಿಹಾಟೀಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಬಂಗಾಳದಲ್ಲಿ ಬಹಳ ಸಮಯದಿಂದ ಬದಲಾವಣೆಯ ಅಲೆ ಕಾಣಿಸುತ್ತಿದ್ದು, ಗುರುವಾರ ನಡೆದ ಮೊದಲ ಹಂತದ ಮತದಾನವು ಅದನ್ನು ಖಚಿತಪಡಿಸಿದೆ. ಭಾರಿ ಪ್ರಮಾಣದಲ್ಲಿ ಮತದಾನ ನಡೆದಿರುವುದು ಮತದಾರರ ಒಲವು ಬಿಜೆಪಿ ಪರವಾಗಿದೆ ಎಂಬುದನ್ನು ತೋರಿಸಿದೆ’ ಎಂದು ಹೇಳಿದ್ದಾರೆ.

ಬಂಗಾಳ ವಿಧಾನಸಭೆಯ 152 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶೇ 92.70ರಷ್ಟು ಮತದಾನ ದಾಖಲಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಮತದಾನ ನಡೆದಿರುವುದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು.

‘ಬಂಗಾಳದಲ್ಲಿ ಟಿಎಂಸಿಯು ‘ಸರ್ವಾಧಿಕಾರಿ’ ಆಡಳಿತದ ಮೂಲಕ ಪ್ರಜಾಪ್ರಭುತ್ವದ ದೇವಾಲಯವನ್ನು ಪುಡಿಮಾಡಿದೆ. ಇದೀಗ ರಾಜ್ಯದ ಜನರು ಜನಾದೇಶದ ಮೂಲಕ ಅದನ್ನು ಮರುನಿರ್ಮಿಸಲು ಪ್ರಾರಂಭಿಸಿದ್ದಾರೆ. ಎರಡನೇ ಹಂತದ ಮತದಾನದ ವೇಳೆ ನೀವು ಈ ದೇವಾಲಯದ ಮೇಲೆ ವಿಜಯ ಪತಾಕೆ ಹಾರಿಸಬೇಕು’ ಎಂದಿದ್ದಾರೆ.

ಮೊದಲ ಹಂತದ ಮತದಾನದ ನಂತರ ಟಿಎಂಸಿಯು ‘ದಿಕ್ಕೆಟ್ಟು ಹೋಗಿದೆ’ ಎಂದು ಹೇಳಿದ ಪ್ರಧಾನಿ, ಆಡಳಿತ ಪಕ್ಷವು ಮತದಾನದ ಮುನ್ನ ರಾತ್ರಿಯಿಡೀ ತನ್ನ ‘ಗೂಂಡಾಗಳನ್ನು’ ಸಜ್ಜುಗೊಳಿಸುವ ಕೆಲಸ ಮಾಡಿದೆ ಎಂದು ಆರೋಪಿಸಿದ್ದಾರೆ.

‘ಮೇ 4ರಂದು ಚುನಾವಣೆಯ ಫಲಿತಾಂಶ ಹೊರಬಂದ ಬಳಿಕ ಟಿಎಂಸಿಯ ಗೂಂಡಾಗಳಿಗೆ ಅಡಗಿ ಕುಳಿತುಕೊಳ್ಳಲು ಸ್ಥಳವಿರುವುದಿಲ್ಲ. ಮೊದಲ ಹಂತದ ಮತದಾನವು ಟಿಎಂಸಿಯ ‘ಜಂಗಲ್ರಾಜ್’ ಅಂತ್ಯಗೊಳ್ಳುವುದನ್ನು ಸೂಚಿಸಿದೆ’ ಎಂದಿದ್ದಾರೆ.

ಮಹಿಳೆಯರ ಸುರಕ್ಷತೆಯ ವಿಷಯವನ್ನು ಪ್ರಸ್ತಾಪಿಸಿ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ, ‘ಟಿಎಂಸಿಯು ಮಹಿಳಾ ವಿರೋಧಿ ಪಕ್ಷವಾಗಿದ್ದು, ಬಿಜೆಪಿಯು ಮಹಿಳಾ ನೇತೃತ್ವದ ಅಭಿವೃದ್ಧಿ ಮಾದರಿಯಲ್ಲಿ ನಂಬಿಕೆಯಿರಿಸಿದೆ’ ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೇರಿದ ಬಳಿಕ ಮಹಿಳೆಯರು ಮಧ್ಯರಾತ್ರಿ 2ರ ವೇಳೆಯಲ್ಲೂ ನಿರ್ಭೀತಿಯಿಂದ ತಿರುಗಾಡಲು ಸಾಧ್ಯವಾಗಲಿದೆ
ಅಮಿತ್ ಶಾ ಗೃಹ ಸಚಿವ

ಬಿಜೆಪಿ ಆಡಳಿತವಿರುವ ದೆಹಲಿ ಉತ್ತರ ಪ್ರದೇಶ ಮತ್ತು ಇತರೆಡೆಗಳಿಂತ ಪಶ್ಚಿಮ ಬಂಗಾಳದಲ್ಲಿ ಮಹಿಳೆಯರು ಹೆಚ್ಚು ಸುರಕ್ಷಿತವಾಗಿದ್ದಾರೆ
ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ

‘ಸುಳ್ಳು ಸಂಕಥನ ಸೃಷ್ಟಿಗೆ ಶಾ ಯತ್ನ’

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿರುವುದನ್ನು ಮುಂದಿಟ್ಟುಕೊಂಡು ಗೃಹ ಸಚಿವ ಅಮಿತ್ ಶಾ ಅವರು ‘ಸುಳ್ಳು ಸಂಕಥನ’ ಸೃಷ್ಟಿಗೆ ಪ್ರಯತ್ನಿಸುತ್ತಿದ್ದಾರೆ ಎಂದು ಟಿಎಂಸಿ ರಾಜ್ಯಸಭಾ ಸದಸ್ಯ ಡೆರೆಕ್ ಒಬ್ರಯಾನ್ ಹೇಳಿದ್ದಾರೆ. ಕೋಲ್ಕತ್ತದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ್ದ ಶಾ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆದಿರುವುದನ್ನು ಉಲ್ಲೇಖಿಸಿ ‘ಬಂಗಾಳದ ಜನರು ಮೊದಲ ಹಂತದಲ್ಲಿ ಎಲ್ಲಾ ದಾಖಲೆಗಳನ್ನು ಮುರಿದು ಬದಲಾವಣೆಗಾಗಿ ಉತ್ಸಾಹದಿಂದ ಮತ ಚಲಾಯಿಸಿದ್ದಾರೆ’ ಎಂದಿದ್ದರು. ‘ಆದರೆ 2021ಕ್ಕೆ ಹೋಲಿಸಿದರೆ 2026ರಲ್ಲಿ ಚಲಾಯಿಸಲಾದ ಒಟ್ಟು ಮತಗಳು ವಾಸ್ತವದಲ್ಲಿ ಕಡಿಮೆಯಾಗಿವೆ. ಎಸ್ಐಆರ್ ಬಳಿಕ ಒಟ್ಟು ಮತದಾರರ ಸಂಖ್ಯೆ ಕಡಿಮೆಯಾಗಿರುವುದೇ ಮತದಾನ ಪ್ರಮಾಣ ಹೆಚ್ಚಲು ಕಾರಣ’ ಎಂದು ಒಬ್ರಯಾನ್ ‘ಎಕ್ಸ್’ನಲ್ಲಿ ತಿಳಿಸಿದ್ದಾರೆ. ‘2021ರಲ್ಲಿ ಇದೇ 152 ಕ್ಷೇತ್ರಗಳಲ್ಲಿ ಒಟ್ಟು 3.67 ಕೋಟಿ ಮತದಾರರು ಇದ್ದರು. ಅದರಲ್ಲಿ 3.10 ಕೋಟಿ ಮತಗಳು ಚಲಾವಣೆಯಾಗಿ ಶೇ 84ರಷ್ಟು ಮತದಾನ ದಾಖಲಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ ಎಸ್ಐಆರ್ ಕಾರಣ ಈ ಕ್ಷೇತ್ರಗಳ ಮತದಾರರ ಸಂಖ್ಯೆ 3.33 ಕೋಟಿಗೆ ಇಳಿಕೆಯಾಗಿದೆ. ಇದರಲ್ಲಿ 3.09 ಕೋಟಿ ಮಂದಿ ಮತ ಚಲಾಯಿಸಿದ್ದು ಶೇ 92.70 ಮತದಾನ ದಾಖಲಾಗಿದೆ’ ಎಂದು ವಿವರಿಸಿದ್ದಾರೆ. ‘2026ರಲ್ಲಿ ಮತದಾನ ಪ್ರಮಾಣ ಹೆಚ್ಚು ದಾಖಲಾಗಿದೆಯಾದರೂ ಚಲಾವಣೆಯಾದ ಒಟ್ಟು ಮತಗಳು 2021ಕ್ಕೆ ಹೋಲಿಸಿದರೆ 83674ರಷ್ಟು ಕಡಿಮೆಯಾಗಿವೆ. ಒಟ್ಟು ಮತದಾರರ ಸಂಖ್ಯೆ ಇಳಿಕೆಯಾಗಿರುವುದೇ ಶೇಕಡಾವಾರು ಪ್ರಮಾಣ ಹೆಚ್ಚಲು ಕಾರಣ’ ಎಂದಿದ್ದಾರೆ.

‘ಬಿಜೆಪಿ ಕಾರ್ಯಕರ್ತೆಗೆ ಬೆದರಿಕೆ’

ಆಡಳಿತಾರೂಢ ಟಿಎಂಸಿ ಬೆಂಬಲಿಗರು ದಕ್ಷಿಣ ಕೋಲ್ಕತ್ತದಲ್ಲಿ ಬಿಜೆಪಿ ಕಾರ್ಯಕರ್ತೆಯೊಬ್ಬರಿಗೆ ಬೆದರಿಕೆ ಹಾಕಿದ್ದಾರೆ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಶುಕ್ರವಾರ ಆರೋಪಿಸಿದ್ದು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ. ‘ಬಿಜೆಪಿ ಕಾರ್ಯಕರ್ತೆ ಬೀನಾ ದಾಸ್ ಅವರ ಮನೆಯನ್ನು ಬುಧವಾರ ಸಂಜೆ ‘ಗೂಂಡಾಗಳ’ ಗುಂಪೊಂದು ಸುತ್ತುವರಿದು ಬೆದರಿಕೆ ಹಾಕಿದೆ. ಪಕ್ಷದ ಪರವಾಗಿ ಮನೆ ಮನೆ ಪ್ರಚಾರ ನಡೆಸಿದ್ದಕ್ಕೆ ಅವರನ್ನು ಗುರಿಯಾಗಿಸಲಾಗಿದೆ’ ಎಂದು ಸುವೇಂದು ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.