ಕೋಲ್ಕತ್ತ: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಮರು ಮತದಾನ ನಡೆದಿದ್ದ ಫಾಲ್ಟಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನತ್ತ ದಾಪುಗಾಲು ಇಟ್ಟಿದೆ.

ಚುನಾವಣಾ ಆಯೋಗದ ಪ್ರಕಾರ, ಒಟ್ಟು 21 ಸುತ್ತಿನ ಮತ ಎಣಿಕೆಗಳ ಪೈಕಿ ಒಂಬತ್ತು ಸುತ್ತಿನ ನಂತರ ಬಿಜೆಪಿ ಅಭ್ಯರ್ಥಿ ತನ್ನ ಪ್ರತಿಸ್ಪರ್ಧಿಗಿಂತ 34 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ ಸಾಧಿಸಿದ್ದಾರೆ

ಬಿಜೆಪಿಯ ದೆಭಾಂಶು ಪಾಂಡಾ ಅವರು ತಮ್ಮ ನಿಕಟ ಸಿಪಿಐ(ಎಂ) ಪ್ರತಿಸ್ಪರ್ಧಿಗಿಂತ ಭಾರಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಪಾಂಡಾ 57,318 ಹಾಗೂ ಶಂಭುನಾಥ್ ಕುರ್ಮಿ 23,095 ಮತಗಳನ್ನು ಗಳಿಸಿದ್ದು, 34,223 ಮತಗಳ ಮುನ್ನಡೆ ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗೆ ರಜಾಕ್ ಮೊಲ್ಲಾ ಅವರಿಗೆ 6,200 ಮತಗಳು ಲಭಿಸಿದೆ.

ಮರು ಮತದಾನಕ್ಕಿಂತ ಎರಡು ದಿನಗಳ ಮೊದಲು ಸ್ಪರ್ಧಾ ಕಣದಿಂದ ಹಿಂದಕ್ಕೆ ಸರಿದಿದ್ದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಜಹಾಂಗೀರ್ ಖಾನ್ 2,902 ಮತಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಬಿಗಿ ಭದ್ರತೆಯೊಂದಿಗೆ ಬೆಳಿಗ್ಗೆ 8ಕ್ಕೆ ಮತ ಎಣಿಕೆ ಪ್ರಾರಂಭವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇವಿಎಂ ಹಾಗೂ ಇತರೆ ಅಕ್ರಮಗಳ ಆರೋಪದ ನಂತರ ಏಪ್ರಿಲ್ 29ರಂದು ನಡೆದಿದ್ದ ಮತದಾನವನ್ನು ರದ್ದುಗೊಳಿಸಿ ಫಾಲ್ಟಾ ಕ್ಷೇತ್ರದ ಎಲ್ಲ 285 ಕ್ಷೇತ್ರಗಳಲ್ಲಿ ಮೇ 21ರಂದು ಮರು ಮತದಾನ ನಡೆಸಲಾಗಿತ್ತು.
.ಫಾಲ್ಟಾ: ಸಂಪೂರ್ಣ ಪಡೆ ನಿಯೋಜಿಸಿ- ಬಿಜೆಪಿಗೆ ಟಿಎಂಸಿ ಸವಾಲು.ಫಾಲ್ಟಾಗೆ ವಿಶೇಷ ಪ್ಯಾಕೇಜ್: ಕಣದಿಂದ ಹಿಂದೆ ಸರಿದ ಟಿಎಂಸಿ ಅಭ್ಯರ್ಥಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.