ನವದೆಹಲಿ: ‘ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದ ಆಡಳಿತ ಯಂತ್ರವನ್ನು ಐ–ಪ್ಯಾಕ್ ಪ್ರಕರಣದ ತನಿಖೆಗೆ ತಡೆಯೊಡ್ಡಲು ಬಳಸಿದ್ದಾರೆ’ ಎಂದು ಜಾರಿ ನಿರ್ದೇಶನಾಲಯವು (ಇ.ಡಿ) ಗುರುವಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.

ಇ.ಡಿ ಮತ್ತು ಇ.ಡಿ ಅಧಿಕಾರಿ ರಾಬಿನ್ ಬನ್ಸಾಲ್ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ ರಾಜು ಅವರು ಸಲ್ಲಿಸಿದ ಮನವಿಯನ್ನು ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಎನ್.ವಿ ಅಂಜಾರಿಯಾ ಅವರ ಪೀಠವು ಆಲಿಸಿತು.

‘ಐ–ಪ್ಯಾಕ್ ಪ್ರಕರಣದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶಿಸುವಂತೆ’ ಇ.ಡಿ ಸುಪ್ರೀಂಕೊರ್ಟ್ಗೆ ಮನವಿ ಮಾಡಿದೆ.

ಚುನಾವಣಾ ಸಲಹಾ ಸಂಸ್ಥೆ ಐ–ಪ್ಯಾಕ್ನ ಕೋಲ್ಕತ್ತ ಕಚೇರಿಯಲ್ಲಿ ಶೋಧ ಕೈಗೊಂಡಿದ್ದ ವೇಳೆ, ಮಮತಾ ಬ್ಯಾನರ್ಜಿ ಅವರು ತನಿಖೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ಅಧಿಕಾರಿಗಳು ಸಂಗ್ರಹಿಸಿದ ದಾಖಲೆಗಳನ್ನು ಸ್ಥಳದಿಂದ ಕೊಂಡೊಯ್ಯಲು ಅಡ್ಡಿಪಡಿಸಿದ್ದಾರೆ ಎಂದು ಇ.ಡಿ ಆರೋಪಿಸಿದೆ.

ಅಧಿಕಾರಿಶಾಹಿಯ ಧೋರಣೆ: ‘ರಾಜಕೀಯ ಪ್ರಚಾರದಲ್ಲಿ ಸಾಮಾಜಿಕ ಜಾಲತಾಣವನ್ನು ಅಸ್ತ್ರವನ್ನಾಗಿ ಬಳಸುವಂತೆ ಇ.ಡಿ ನ್ಯಾಯಾಲಯದ ಕಲಾಪವನ್ನು ಬಳಸುತ್ತಿದೆ. ಸಾಲಿಸಿಟರ್ ಜನರಲ್ಗಳ ವಾದದಲ್ಲಿ, ‘ಚುನಾಯಿತವಾಗದ ಅಧಿಕಾರಿಶಾಹಿಯ ಧೋರಣೆ ಕಾಣಿಸುತ್ತಿದೆ’ ಎಂದು ಮಮತಾ ಬ್ಯಾನರ್ಜಿ ಪರವಾಗಿ ಹಾಜರಾದ ವಕೀಲೆ ಮೇನಕಾ ಗುರುಸ್ವಾಮಿ ದೂರಿದರು.

‘ನಾನು ಬೀದಿ ಜಗಳಗಂಟನಂತೆ ವರ್ತಿಸುವುದಿಲ್ಲ, ಘನತೆಯ ಮೌನವನ್ನು ಕಾಪಾಡಿಕೊಳ್ಳುತ್ತೇನೆ’ ಎಂದು ಸಾಲಿಸಿಟರ್ ಜನರಲ್ ಉತ್ತರ ನೀಡಿದರು.

ಇ.ಡಿ ಸಮರ್ಥನೆಯನ್ನು ಒಪ್ಪಲು ಸಾಧ್ಯವಿಲ್ಲ ಎಂಬ ಮೇನಕಾ ವಾದವನ್ನು ಸಾಲಿಸಿಟರ್ ಜನರಲ್ ಅಲ್ಲಗಳೆದರು. ‘ಪೊಲೀಸ್ ಅಧಿಕಾರಿಗಳೊಂದಿಗೆ ನೇರವಾಗಿ ಐ–ಪ್ಯಾಕ್ ಕಚೇರಿಗೆ ಬಂದ ಮುಖ್ಯಮಂತ್ರಿ ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡಿದ್ದಾರೆ. ಇದು ತನಿಖಾಧಿಕಾರಿಗಳ, ನಾಗರಿಕರ ಮೂಲ ಹಕ್ಕಿನ ಉಲ್ಲಂಘನೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಪೂರ್ಣ ವಿಫಲವಾಗಿದೆ ಎನ್ನುವುದಕ್ಕೆ ಇದು ಸ್ಪಷ್ಟ ನಿದರ್ಶನ’ ಎಂದು ಅವರು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-51-1888556315

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.