ಮುಂಬೈ: ವಾಟ್ಸ್ಆ್ಯಪ್ ಚಾಟ್ಗಳನ್ನೇ ಆಧಾರವಾಗಿಟ್ಟುಕೊಂಡು ಕ್ರೌರ್ಯ ಎಸಗಲಾಗಿದೆ ಎಂಬ ಆರೋಪಗಳು ಕೇಳಿಬಂದಾಗ, ತನ್ನ ಮೇಲಿನ ಆಪಾದನೆಗಳನ್ನು ನಿರಾಕರಿಸಲು ಪತಿ ಅಥವಾ ಪತ್ನಿಗೆ ಅವಕಾಶ ನೀಡಬೇಕು. ಕೇವಲ ಚಾಟ್ಗಳನ್ನೇ ಆಧಾರವಾಗಿಟ್ಟುಕೊಂಡು ವಿಚ್ಛೇದನಕ್ಕೆ ಅನುಮತಿ ನೀಡಲು ಸಾಧ್ಯ ಇಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.

‘ಪತ್ನಿ ನನ್ನ ಮೇಲೆ ಕ್ರೌರ್ಯ ಎಸಗುತ್ತಿರುವ ಕಾರಣ ಆಕೆಯಿಂದ ವಿಚ್ಛೇದನ ನೀಡಬೇಕು’ ಎಂದು ಕೋರಿ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿ, ನಾಸಿಕ್ ಜಿಲ್ಲಾ ಕೌಟುಂಬಿಕ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದುಪಡಿಸಿದ ವೇಳೆ ಹೈಕೋರ್ಟ್ ಈ ಮಾತು ಹೇಳಿದೆ.

ನ್ಯಾಯಮೂರ್ತಿಗಳಾದ ಭಾರತಿ ಡಾಂಗ್ರೆ ಹಾಗೂ ಮಂಜೂಷಾ ದೇಶಪಾಂಡೆ ಅವರು ಇದ್ದ ಪೀಠವು ಕಳೆದ ವಾರ ಈ ಕುರಿತು ಆದೇಶ ಹೊರಡಿಸಿದೆ.

ಪ್ರಕರಣವೇನು?: ‘ನಾಸಿಕ್ನಿಂದ ಪುಣೆಗೆ ಸ್ಥಳಾಂತರಗೊಂಡು ಪ್ರತ್ಯೇಕವಾಗಿ ವಾಸ ಮಾಡಬೇಕು ಎಂಬುದು ಪತ್ನಿಯ ಬೇಡಿಕೆಯಾಗಿತ್ತು. ನನ್ನ ತಾಯಿ ಹಾಗೂ ಸಹೋದರಿ ವಿರುದ್ಧ ಪತ್ನಿ ಅವಹೇಳನಕಾರಿಯಾಗಿ ಮಾತನಾಡಿದ್ದಾಳೆ ’ ಎಂದು ವ್ಯಕ್ತಿಯೊಬ್ಬರು ಆರೋಪಿಸಿದ್ದರು.

ಈ ಆರೋಪಗಳಿಗೆ ಪುರಾವೆಯಾಗಿ ಪತ್ನಿ ಜೊತೆಗೆ ವಾಟ್ಸ್ಆ್ಯಪ್ ಮೂಲಕ ನಡೆದಿದ್ದ ಚಾಟ್ಗಳನ್ನು ಕೌಟುಂಬಿಕ ನ್ಯಾಯಾಲಯಕ್ಕೆ ಸಲ್ಲಿಸಿದ್ದ ವ್ಯಕ್ತಿ, ಈ ಚಾಟ್ಗಳನ್ನೇ ಆಧಾರವಾಗಿ ಪರಿಗಣಿಸಿ ವಿಚ್ಛೇದನ ನೀಡುವಂತೆ ಕೋರಿದ್ದರು.

ವಾಟ್ಸ್ ಆ್ಯಪ್ ಚಾಟ್ಗಳನ್ನು ಪರಿಗಣಿಸಿದ್ದ ನಾಸಿಕ್ ಜಿಲ್ಲಾ ಕೌಟುಂಬಿಕ ನ್ಯಾಯಾಲಯವು, ‘ಪತ್ನಿ ತನ್ನ ಪತಿ ಮೇಲೆ ಒತ್ತಡ ಹೇರುವ ತಂತ್ರಗಳನ್ನು ಬಳಿಸಿದ್ದು, ಭಾವನಾತ್ಮಕವಾಗಿ ಬ್ಲ್ಯಾಕ್ಮೇಲ್ ಮಾಡಿದ್ದಾರೆ’ ಎಂದು ಅಭಿಪ್ರಾಯಪಟ್ಟಿತ್ತು.

‘ವಾಟ್ಸ್ಆ್ಯಪ್ ಚಾಟ್ನಲ್ಲಿ ಆಕೆ ಅನುಚಿತ ಭಾಷೆ ಬಳಸಿದ್ದು, ಪತಿ ವಿರುದ್ಧ ಕ್ರೌರ್ಯ ಎಸಗಿದ್ದಾರೆ. ಹೀಗಾಗಿ, ವಿಚ್ಛೇದನ ಪಡೆಯುವುದಕ್ಕೆ ಪತಿ ಅರ್ಹರಾಗಿದ್ದಾರೆ’ ಎಂದು ಕಳೆದ ವರ್ಷ ಮೇನಲ್ಲಿ ಕೌಟುಂಬಿಕ ನ್ಯಾಯಾಲಯ ಆದೇಶಿಸಿತ್ತು.

ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಮಹಿಳೆ, ‘ನನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕುವುದಕ್ಕೆ ಅಥವಾ ನನ್ನ ವಾದವನ್ನು ಮಂಡಿಸುವುದಕ್ಕೆ ಕೌಟುಂಬಿಕ ನ್ಯಾಯಾಲಯ ಅವಕಾಶವನ್ನೇ ನೀಡದೇ ಏಕಪಕ್ಷೀಯವಾಗಿ ಆದೇಶಿಸಿದೆ’ ಎಂದು ವಾದಿಸಿದ್ದರು.

ವಿಚಾರಣೆ ನಡೆಸಿದ ಪೀಠವು, ‘ಪತಿ ಮಾಡಿದ್ದ ಆಪಾದನೆಗಳನ್ನು(ವಾಟ್ಸ್ಆ್ಯಪ್ ಚಾಟ್ಗಳು) ಸಾಕ್ಷ್ಯ ಸಮೇತ ನಿರಾಕರಿಸುವುದಕ್ಕೆ ಪತ್ನಿಗೆ ಕೌಟುಂಬಿಕ ನ್ಯಾಯಾಲಯ ಅವಕಾಶ ನೀಡಿಲ್ಲ’ ಎಂದು ಹೇಳಿದೆ.

‘ವಾಟ್ಸ್ಆ್ಯಪ್ ಚಾಟ್ಗಳನ್ನೇ ಆಧಾರವಾಗಿಟ್ಟುಕೊಂಡು ವಿಚ್ಛೇದನ ನೀಡಲು ಸಾಧ್ಯ ಇಲ್ಲ’ ಎಂದು ಹೇಳಿರುವ ಪೀಠ, ‘ತನ್ನ ವಾದ/ಸಾಕ್ಷ್ಯಗಳನ್ನು ಮಂಡಿಸಲು ಮಹಿಳೆಗೆ ಅವಕಾಶ ನೀಡಬೇಕು’ ಎಂದು ಸೂಚಿಸಿ, ಪ್ರಕರಣವನ್ನು ಕೌಟುಂಬಿಕ ನ್ಯಾಯಾಲಯಕ್ಕೆ ಶಿಫಾರಸು ಮಾಡಿದೆ.

ಪ್ರಕರಣ ಕುರಿತು ಕೌಟುಂಬಿಕ ನ್ಯಾಯಾಲಯ ಹೊಸದಾಗಿ ವಿಚಾರಣೆ ಆರಂಭಿಸಿ, ತನ್ನ ನಿರ್ಧಾರ ಪ್ರಕಟಿಸಲಿದೆ. ಇದೇ ವೇಳೆ, ಮಧ್ಯಸ್ಥಿಕೆ ಮೂಲಕ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳಲು ಪರಿತ್ಯಕ್ತ ದಂಪತಿ ಪ್ರಯತ್ನಿಸಬೇಕು ಎಂದು ಪೀಠ ಸಲಹೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.