ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆರೆ ಒತ್ತುವರಿ ಮುಲಾಜಿಲ್ಲದೆ ತೆರವುಗೊಳಿಸುತ್ತೇವೆ: ತೆಲಂಗಾಣ ಸಿಎಂ ರೇವಂತ ರೆಡ್ಡಿ

Published : 25 ಆಗಸ್ಟ್ 2024, 10:54 IST
Last Updated : 25 ಆಗಸ್ಟ್ 2024, 10:54 IST
ಫಾಲೋ ಮಾಡಿ
Comments

ಹೈದರಾಬಾದ್: ಕೆರೆಗಳನ್ನು ಒತ್ತುವರಿ ಮಾಡಿದವರನ್ನು ನಮ್ಮ ಸರ್ಕಾರ ಬಿಡುವ ಪ್ರಶ್ನೆಯೇ ಇಲ್ಲ. ಸಮಾಜದಲ್ಲಿ ಅವರು ಎಷ್ಟೇ ಪ್ರಭಾವಿಗಳಾದರೂ ಸರಿಯೇ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಹೇಳಿದ್ದಾರೆ.

ನಟ ನಾಗಾರ್ಜುನ ಅವರ ಸಹ ಮಾಲೀಕತ್ವದ ಕನ್ವೆಷನ್ ಸೆಂಟರ್‌ ಅನ್ನು ಅಧಿಕಾರಿಗಳು ನೆಲಸಮ ಮಾಡಿದ ಬೆನ್ನಲ್ಲೇ ಮುಖ್ಯಮಂತ್ರಿಗಳಿಂದ ಈ ಹೇಳಿಕೆ ಹೊರಬಿದ್ದಿದೆ.

ಹರೇ ಕೃಷ್ಣ ಚಳವಳಿಯಲ್ಲಿ ಮಾತನಾಡಿದ ಅವರು, ಜನರ ಒಳಿತನ್ನು ಸಾರುವ ಶ್ರೀಕೃಷ್ಣನ ಬೋಧನೆಗಳನ್ನು ನಾವು ಅನುಸರಿಸಬೇಕು. ಅಧರ್ಮವನ್ನು ಸೋಲಿಸಲು ಧರ್ಮವನ್ನು ಹಿಂಬಾಲಿಸಬೇಕು ಎಂದರು.

ಹೈದರಾಬಾದ್‌ ವಿಪತ್ತು ಪ್ರತಿಕ್ರಿಯೆ ಮತ್ತು ಆಸ್ತಿ ಸಂರಕ್ಷಣಾ ಸಂಸ್ಥೆ ಹಾಗೂ ಗ್ರೇಟರ್‌ ಹೈದರಾಬಾದ್‌ ಮುನ್ಸಿಪಲ್ ಕಾರ್ಪೊರೇಷನ್‌, ನಗರ ಯೋಜನೆ, ನೀರಾವರಿ ಹಾಗೂ ಕಂದಾಯ ಇಲಾಖೆಗಳು ಸೇರಿ ಶನಿವಾರ ತಮ್ಮಿಡಿಕುಂಟ ಕೆರೆಯ ಬಫರ್ ಜೋನ್‌ನಲ್ಲಿದ್ದ ಒತ್ತುವರಿಗಳನ್ನು ತೆರವುಗೊಳಿಸಿದ್ದವು. ಈ ವೇಳೆ ನಟ ನಾಗಾರ್ಜುನ ಅವರ ಸಹ ಮಾಲೀಕತ್ವದ ಕನ್ವೆಷನ್‌ ಸೆಂಟರ್‌ ಅನ್ನು ಕೂಡ ಕೆಡವಲಾಗಿತ್ತು.

ಫಾರ್ಮ್‌ ಹೌಸ್ ಇರುವ ನಮ್ಮ ಸ್ನೇಹಿತರ ವಿರೋಧದ ನಡುವೆಯೂ ಕೆರೆ ಹಾಗೂ ಸರ್ಕಾರಿ ಆಸ್ತಿಗಳನ್ನು ರಕ್ಷಣೆ ಮಾಡಲು ಹೈದರಾಬಾದ್‌ ವಿಪತ್ತು ಪ್ರತಿಕ್ರಿಯೆ ಮತ್ತು ಆಸ್ತಿ ಸಂರಕ್ಷಣಾ ಸಂಸ್ಥೆಯನ್ನು ಸೃಷ್ಟಿಸಲಾಗಿದೆ. ಕೆಲವು ಉತ್ತಮ ಜನ ಅದರ ಭಾಗವಾಗಿರಲು ನಾನು ಬಯಸುತ್ತೇನೆ. ಕೆರೆಗಳನ್ನು ಒತ್ತುವರಿಗಳಿಂದ ಮುಕ್ತಿಗೊಳಿಸುವುದು ಇದರ ಗುರಿ. ಒತ್ತುವರಿಯನ್ನು ಮುಲಾಜಿಲ್ಲದೆ ಹತ್ತಿಕ್ಕುತ್ತೇವೆ. ಯಾವುದೇ ಒತ್ತಡ ಬಂದರೂ ಸುಮ್ಮನಿರುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ಕೆರೆಗಳು ಭಾರತದ ಸಂಸ್ಕೃತಿಯ ಭಾಗ. ಜೀವನೋಪಾಯಕ್ಕೆ ಜನರು ಅದನ್ನು ಆಶ್ರಯಿಸಿದ್ದಾರೆ. ಕೆರೆಯ ಸಮೀಪ ನಿರ್ಮಿಸಲಾಗಿರುವ ತೋಟದ ಮನೆಯವರು ಕಲುಷಿತ ನೀರನ್ನು ಕೆರೆಗಳಿಗೆ ಬಿಡುತ್ತಿದ್ದಾರೆ. ಕೆರೆಗಳು ಹಾಗೂ ಜನರ ಹಿತಾಸಕ್ತಿಯನ್ನು ಕಾಪಾಡದಿದ್ದರೆ, ನಾನು ನಿಜವಾದ ಜನಪ್ರತಿನಿಧಿಯಾಗಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT