ಬೊಟಾಡ್: ಪತಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಗುಜರಾತ್ ಪೊಲೀಸರು ಮಹಿಳೆ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಡಿ.30ರಂದು ಗುಜರಾತ್ ರಾಜ್ಯದ ಬೊಟಾಡ್ ಜಿಲ್ಲೆಯ ಜಮ್ರಾಲಾ ಗ್ರಾಮದಲ್ಲಿ ಸುರೇಶ್ ಸಾಥಡಿಯಾ (39) ಎಂಬುವವರು ಮನೆಯ ಸೀಲಿಂಗ್ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸುರೇಶ್ ಕುಟುಂಬಸ್ಥರು ಆತನ ಮೊಬೈಲ್ ಫೋನ್ ಪರೀಕ್ಷಿಸಿದಾಗ, ಅದರಲ್ಲಿ ‘ನನ್ನ ಸಾವಿಗೆ ಕಾರಣವಾದ ಪತ್ನಿಗೆ ತಕ್ಕ ಪಾಠ ಕಲಿಸಿ’ ಎಂಬ ವಿಡಿಯೊ ಸಿಕ್ಕಿದೆ ಎಂದು ಬೋಟಾಡ್ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಗನಿಗೆ ಸೊಸೆ ಮಾನಸಿಕ ಕಿರುಕುಳ ನೀಡುತ್ತಿದ್ದು, ಆಗಾಗ್ಗೆ ಜಗಳವಾಡುತ್ತಿದ್ದಳು ಮತ್ತು ತಂದೆ-ತಾಯಿ ಮನೆಗೆ ಹೋಗುತ್ತಿದ್ದಳು ಎಂದು ಸುರೇಶ್ ಅವರ ತಂದೆ ನೀಡಿದ ದೂರು ಆಧರಿಸಿ, ಮೃತನ ಪತ್ನಿ ಜಯಾಬೆನ್ ವಿರುದ್ಧ ಶುಕ್ರವಾರ ಎಫ್ಐಆರ್ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ಮನೆಗೆ ಬರುವಂತೆ ಪತ್ನಿಯ ಮನವೊಲಿಸಲು ಸುರೇಶ್ ಅತ್ತೆಯ ಮನೆಗೆ ಹೋಗಿದ್ದ, ಆದರೆ ಆಕೆ ಅದನ್ನು ನಿರಾಕರಿಸಿದ್ದಳು. ಇದರಿಂದ ನೊಂದ ಸುರೇಶ್ ವಿಡಿಯೊ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.